ಡಯಾಸ್ಪೊರಾ ಡಿಪ್ಲೊಮಸಿ: ವಿಜ್ಞಾನಿ ಗೀತಾಂಜಲಿ ಜೊತೆ ನೇರ ಚಾಟ್
ಚೆನ್ನೈ: ಚೆನ್ನೈನಲ್ಲಿರುವ ಅಮೇರಿಕಾ ದೂತಾವಾಸವು ಹೈದರಾಬಾದ್, ಕೋಲ್ಕತ್ತಾ ಮತ್ತು ಮುಂಬೈನ ಅಮೇರಿಕಾ ದೂತಾವಾಸಗಳ ಸಮನ್ವಯದಲ್ಲಿ ಫೆಬ್ರವರಿ 11, ಶುಕ್ರವಾರದಂದು ಆಯೋಜಿಸಿರುವ ವಿಜ್ಞಾನ ವಲಯದಲ್ಲಿನ ಮಹಿಳೆ ಮತ್ತು ಬಾಲಕಿಯರ ಅಂತಾರಾಷ್ಟ್ರೀಯ ದಿನಾಚರಣೆಯಲ್ಲಿ ಭಾರತೀಯಮೂಲದ ಅಮೇರಿಕನ್ ಸಂಶೋಧಕಿ ಮತ್ತು ವಿಜ್ಞಾನಿ ಗೀತಾಂಜಲಿರಾವ್ ಅವರು ಭಾಗವಹಿಸಲಿದ್ದಾರೆ.
#ಡಯಾಸ್ಪೊರಾಡಿಪ್ಲೊಮಸಿ ಸರಣಿಯಲ್ಲಿನ ಆರನೇಕಾರ್ಯಕ್ರಮ ವರ್ಚುವಲ್ಆಗಿ ಫೆಬ್ರವರಿ 11, ಸಂಜೆ 6:45ಕ್ಕೆನಡೆಯಲಿದ್ದು, ಆಗ ಐದು ನಿಮಿಷಗಳ ಅವಧಿಯ "ಸರ್ಚ್ಆನ್: ಪಾಸಿಟಿವ್ಕರೆಂಟ್" ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ. ರಾವ್ ಅವರ ಆವಿಷ್ಕಾರಗಳಲ್ಲಿ ಒಂದಾದ ನೀರಿನಲ್ಲಿ ಸೀಸದ ಮಾಲಿನ್ಯವನ್ನು ಪತ್ತೆ ಹಚ್ಚುವ ಮೊಬೈಲ್ ಸಾಧನದ ವಿವರ ಇದರಲ್ಲಿದೆ.
"ವೈ ವೇಸ್ಟ್?" ಎನ್‌ಜಿಒ ಸಂಸ್ಥಾಪಕಿ, "ವಾಟರ್ ಗರ್ಲ್ಆಫ್ ಇಂಡಿಯಾ" ಎಂದೇ ಹೆಸರಾಗಿರುವ ಬೆಂಗಳೂರು ಮೂಲದ ಪರಿಸರಹೋರಾಟಗಾರ್ತಿ ಗರ್ವಿತಾ ಗುಲ್ಹಾಟಿ ಅವರು ಗೀತಾಂಜಲಿರಾವ್ ಅವರ ಸಂದರ್ಶನ ನಡೆಸಲಿದ್ದಾರೆ. ಈ ಸಂವಾದದಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ಪ್ರೀತಿಯಿಟ್ಟುಕೊಂಡಿರುವ ಭಾರತೀಯ ಮೂಲದ ಅಮೆರಿಕನ್ಎಂಬ ಗುರುತಿನಲ್ಲಿ ಬೆಳೆಯುವ ಪಯಣದ ಬಗ್ಗೆ ಮಾತನಾಡಲಿದ್ದಾರೆ. ಇದಲ್ಲದೆ STEM ಕಲಿತ ಹೆಣ್ಣುಮಕ್ಕಳು ಹೇಗೆ ವಿಶ್ವವನ್ನು ಬದಲಿಸಬಲ್ಲರು ಎಂಬ ಕನಸನ್ನು ಹಂಚಿಕೊಳ್ಳಲಿದ್ದಾರೆ. ಹಾಗೆಯೆ ಅಮೇರಿಕಾದಲ್ಲಿನ ಪ್ರಯೋಗಾತ್ಮಕ ಕಲಿಕೆಯ ಅವಕಾಶಗಳು ಮತ್ತುಅಮೇರಿಕನ್ ಶಾಲೆಗಳಲ್ಲಿ STEM ಶಿಕ್ಷಣದ ಕುರಿತು ಚರ್ಚಿಸಲಿದ್ದಾರೆ

ಇದಕ್ಕೂ ಮುನ್ನ, ಚೆನ್ನೈನಲ್ಲಿರುವ ಅಮೇರಿಕಾ ದೂತಾವಾಸದ ಕಾನ್ಸಲೇಟ್ ಜನರಲ್ , "ನಮ್ಮ #ಡೈಸ್ಪೊರಾಡಿಪ್ಲೊಮಸಿ ಸರಣಿಯ ಭಾಗವಾಗಿ ನಡೆಯುತ್ತಿರುವ ವಿಜ್ಞಾನ ವಲಯದಲ್ಲಿನ ಮಹಿಳೆ ಮತ್ತು ಬಾಲಕಿಯರ ಅಂತಾರಾಷ್ಟ್ರೀಯ ದಿನಾಚರಣೆಯಲ್ಲಿ ಗೀತಾಂಜಲಿರಾವ್ ಭಾಗವಹಿಸುವಿಕೆಗೆ ಉತ್ಸುಕರಾಗಿದ್ದೇವೆ. ಭಾರತದಲ್ಲಿನ U.S. ಮಿಷನ್ ಪರವಾಗಿ, ಗೀತಾಂಜಲಿ ಅವರಸಾಧನೆಗಳಿಗಾಗಿ ನಾನು ಶ್ಲಾಘಿಸುತ್ತೇನೆ, ಇದು ಯುವಜನರಿಗೆ, ವಿಶೇಷವಾಗಿ ಹುಡುಗಿಯರಿಗೆ, ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ತಮ್ಮಭವಿಷ್ಯದ ವೃತ್ತಿಜೀವನದಲ್ಲಿ STEM ವಿಷಯಗಳನ್ನು ಪರಿಗಣಿಸಲು ಸ್ಫೂರ್ತಿಯಾಗಿದೆ. ಯುನೈಟೆವ್ಪ್ ಸ್ಟೇಟ್ಸ್ STEM ಶಿಕ್ಷಣ ಮತ್ತುಆವಿಷ್ಕಾರಗಳಲ್ಲಿ ಮುಂಚೂಣಿಯಲ್ಲಿದೆ. ಯುನೈಟೆವ್ಪ್ ಸ್ಟೇಟ್ಸ್ ನಲ್ಲಿ ಅಧ್ಯಯನ ಮಾಡಲು ಮತ್ತು ಅವರ ಕನಸುಗಳನ್ನು ಸಾಕಾರಗೊಳಿಸಿ ಕೊಳ್ಳಬಯಸುವ ಆಸಕ್ತ ವಿದ್ಯಾರ್ಥಿಗಳನ್ನು ನಾವು ಸ್ವಾಗತಿಸುತ್ತೇವೆ," ಎಂದಿದ್ದಾರೆ.
ರಾವ್ ಅವರ ಆವಿಷ್ಕಾರಗಳು ಮತ್ತುಭಾರತ ಸೇರಿದಂತೆ ಜಗತ್ತಿನಾದ್ಯಂತ ಯುವಜನರಿಗಾಗಿ ಅವರು ನಡೆಸುವ STEM ಕಾರ್ಯಾಗಾರಗಳನ್ನುಗುರುತಿಸಿ 2020 ರಲ್ಲಿ TIME ನಿಯತಕಾಲಿಕ ಅದೇ ಮೊದಲ ಬಾರಿ ಸ್ಥಾಪಿಸಲಾದ "ಕಿಡ್ಆಫ್ ದ ಇಯರ್" ಪುರಸ್ಕಾರ ನೀಡಲಾಯಿತು. ಈವರ್ಚುವಲ್ ಪ್ರೋಗ್ರಾಂನಲ್ಲಿ ಭಾಗವಹಿಸಲು ಉಚಿತವಾಗಿ ನೋಂದಾಯಿಸಿ: ನೋಂದಣಿ ಲಿಂಕ್ ಇಲ್ಲಿದೆ (https://bit.ly/34gVmsx)
Recommended Video
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications