ಆಂಧ್ರ ಗಡಿಯಲ್ಲಿ ನಿರ್ಮಿಸಿದ್ದ 5 ಅಡಿ ಎತ್ತರದ ತಡೆಗೋಡೆ ನೆಲಸಮ

ಚೆನ್ನೈ, ಏಪ್ರಿಲ್ 28: ಕೊರೊನಾ ವೈರಸ್‌ ಭೀತಿಯಿಂದ ಆಂಧ್ರಪ್ರದೇಶದ ಚಿತ್ತೂರು ಗಡಿಭಾಗದಲ್ಲಿ ತಮಿಳುನಾಡಿನ ವೆಲೂರು ಜಿಲ್ಲಾಡಳಿದ 5 ಅಡಿ ಎತ್ತರದ ತಡೆಗೋಡೆ ನಿರ್ಮಿಸಿತ್ತು. ಈ ತಡೆಗೋಡೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಗೋಡೆಯನ್ನು ತೆರವುಗೊಳಿಸಲಾಗಿದೆ.

Recommended Video

      ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಶಾಸಕ ಶ್ರೀಕಂಠೇಗೌಡ ಮತ್ತು ಅವರ ಪುತ್ರ,ದೂರು ದಾಖಲು

      ವೆಲೂರು ಮತ್ತು ಚಿತ್ತೂರು ಮಾರ್ಗದಲ್ಲಿ ಎರಡು ಕಡೆ ಕಾಂಕ್ರಿಟ್ ಗೋಡೆ ನಿರ್ಮಿಸಲಾಗಿತ್ತು. ಲಾಕ್‌ಡೌನ್‌ ಕಾರಣದಿಂದ ಎರಡು ರಾಜ್ಯಗಳ ನಡುವೆ ವಾಹನ ಮತ್ತು ಜನರು ಸಂಚರಿಸುವುದನ್ನು ತಡೆಯಲು ತಮಿಳುನಾಡು ಜಿಲ್ಲಾಡಳಿತ ಈ ತೀರ್ಮಾನಕ್ಕೆ ಬಂದಿತ್ತು.

      Demolished Wall At Andhra Pradesh And Tamilnadu Border

      ಆದರೆ, ಚಿತ್ತೂರು ಜಿಲ್ಲಾಡಳಿತ ವೆಲೂರು ಜಿಲ್ಲಾಡಳಿತದ ಈ ನಡೆಗೆ ವಿರೋಧ ವ್ಯಕ್ತಪಡಿಸಿತ್ತು. 'ಲಾಕ್ ಡೌನ್ ನಿರ್ಬಂಧಗಳ ಹೊರತಾಗಿಯೂ, ಅಗತ್ಯ ಸರಕು ಸಾಗಿಸುವ ವಾಹನಗಳಿಗೆ ಮತ್ತು ತುರ್ತು ಪರಿಸ್ಥಿತಿ ವಾಹನಕ್ಕೆ ಅನುಮತಿ ನೀಡಬೇಕಾಗುತ್ತೆ. ಈ ಉದ್ದೇಶದಿಂದಲೇ ಗಡಿ ಚೆಕ್-ಪೋಸ್ಟ್‌ಗಳು ಜಾರಿಯಲ್ಲಿವೆ. ಗೋಡೆಗಳನ್ನು ನಿರ್ಮಿಸುವ ಮೂಲಕ ಹೆದ್ದಾರಿಯನ್ನು ಶಾಶ್ವತವಾಗಿ ನಿರ್ಬಂಧಿಸಿದರೆ, ಅದು ತುರ್ತು ಸಾರಿಗೆ ಸೇವೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ' ಎಂದು ಚಿತ್ತೂರಿನ ಜಂಟಿ ಜಿಲ್ಲಾಧಿಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

      ಬಳಿಕ ಇದರಿಂದ ಎಚ್ಚೆತ್ತುಕೊಂಡ ವೆಲೂರು ಜಿಲ್ಲಾಡಳಿತ ಸೋಮವಾರ ಸಂಜೆ ಚಿತ್ತೂರು ಮಾರ್ಗದಲ್ಲಿ ನಿರ್ಮಿಸಲಾಗಿದ್ದ ಎರಡು ಕಾಂಕ್ರಿಟ್ ಗೋಡೆಯನ್ನು ತೆರವುಗೊಳಿಸುವಂತೆ ಆದೇಶ ನೀಡಿತ್ತು.

      ತಮಿಳುನಾಡು ಮತ್ತು ಆಂಧ್ರಪ್ರದೇಶ ಎರಡು ರಾಜ್ಯಗಳಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಮೇ 3ರ ನಂತರವೂ ದೇಶದಲ್ಲಿ ಲಾಕ್‌ಡೌನ್‌ ಮುಂದುವರಿಯುವ ಸಾಧ್ಯತೆ ಹೆಚ್ಚಿದ್ದು, ಇಂತಹ ಸಮಯದಲ್ಲಿ ರಸ್ತೆಯಲ್ಲಿ ತಡೆಗೋಡೆ ನಿರ್ಮಿಸುವುದರಿಂದ ತುರ್ತುಪರಿಸ್ಥಿತಿ ವಾಹನಗಳಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಈಗ ಗೋಡೆ ನೆಲಸಮಗೊಳಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+