ರಜನಿ 2.0 ಬಿಡುಗಡೆ ದಿನವೇ ಲೀಕ್ ಮಾಡಿದ ತಮಿಳ್ ರಾಕರ್ಸ್
ಚೆನ್ನೈ, ನವೆಂಬರ್ 29 : ರಜನಿಕಾಂತ್ ಅಭಿನಯದ ರೋಬೋ 2.0 ಚಿತ್ರವನ್ನು ಆನ್ ಲೈನ್ ನಲ್ಲಿ ಅಕ್ರಮವಾಗಿ ವೆಬ್ ಸೈಟ್ ನಲ್ಲಿ ಪ್ರಸಾರ ಮಾಡದಂತೆ ಮದ್ರಾಸ್ ಹೈಕೋರ್ಟ್ ನೀಡಿದ ನಿರ್ಬಂಧಕ್ಕೆ ಬೆಲೆ ಇಲ್ಲದ್ದಂತಾಗಿದೆ. 2.0 ಚಿತ್ರವನ್ನು ತಮಿಳ್ ರಾಕರ್ಸ್ ಟೊರೆಂಟ್ ವೆಬ್ ತಾಣವು ಲೀಕ್ ಮಾಡಿದೆ.
ಸರಿ ಸುಮಾರು 37ಕ್ಕೂ ಅಧಿಕ ಇಂಟರ್ ನೆಟ್ ಸೇವಾ ಸಂಸ್ಥೆ( ಐಎಸ್ ಪಿ) ಗಳಿಗೆ 12,000ಕ್ಕೂ ಅಧಿಕ ವೆಬ್ ತಾಣಗಳನ್ನು ಬ್ಲಾಕ್ ಮಾಡಿ, 2.0 ಚಿತ್ರವನ್ನು ಪ್ರದರ್ಶಿಸದಂತೆ ತಡೆಯೊಡ್ಡುವಂತೆ ಮದ್ರಾಸ್ ಹೈಕೋರ್ಟ್ ಜಸ್ಟೀಸ್ ಎಂ ಸುಂದರ್ ಆದೇಶ ನೀಡಿದ್ದರು.

'2.O' ವಿಮರ್ಶೆ: ಗ್ರಾಫಿಕ್ಸ್ ಅಬ್ಬರ, ಶಂಕರ್ ಜಾದುಗಾರ
ಆದರೆ, ಪೈರಸಿ ಭೂತಕ್ಕೆ ಮತ್ತೊಮ್ಮೆ ರಜನಿ ಚಿತ್ರ ಬಲಿಯಾಗಿದೆ. ತಮಿಳ್ ರಾಕರ್ಸ್ ತನ್ನ ಒಡೆತನದ 2 ಸಾವಿರಕ್ಕೂ ಅಧಿಕ ವೆಬ್ ಸೈಟ್ ಗಳಲ್ಲಿ ಚಿತ್ರವನ್ನು ಹಾಕಿದೆ.
ಲೈಕಾ ಪ್ರೊಡೆಕ್ಷನ್ಸ್ ಪ್ರೈ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜಸ್ಟೀಸ್ ಸುಂದರ್ ಅವರು, ಅರ್ಜಿಯಲ್ಲಿ ನಮೂದಿಸಿದ್ದ 12,564ಕ್ಕೂ ಅಧಿಕ ಅಕ್ರಮ ವೆಬ್ ಸೈಟ್ ಗಳನ್ನು ನಿರ್ಬಂಧಿಸಲು ಸೂಚಿಸಿದ್ದರು.
2.0 print on tamilrockers. Please take action #2pointo
— pradeep2.0📵 (@kpradeep472) November 29, 2018
ರಜನಿಕಾಂತ್, ಅಕ್ಷಯ್ ಕುಮಾರ್, ಏಮಿ ಜಾಕ್ಸನ್ ಅಭಿನಯದ, ಎಸ್ ಶಂಕರ್ ನಿರ್ದೇಶನದ 2.0 ಚಿತ್ರವು ಗುರುವಾರದಂದು 7,000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಪ್ರದರ್ಶನಗೊಂಡಿದೆ.ಚೀನಾ, ಮ್ಯಾಂಡ್ರಿನ್ ಸೇರಿದಂತೆ ಐದು ಭಾಷೆಗಳಲ್ಲಿ ಪ್ರದರ್ಶನಗೊಂಡಿದೆ. ಚಿತ್ರದ ಟ್ರೇಲರ್ 1 ಕೋಟಿಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.












Click it and Unblock the Notifications