ರಸ್ತೆ ಬದಿ ಮಲಗಿದ್ದ ವ್ಯಕ್ತಿಯ ಮರ್ಮಾಂಗಕ್ಕೆ ಬೆಂಕಿ ಇಟ್ಟ ದುರುಳರು
ಚೆನ್ನೈ, ಜೂನ್ 13 : ರಸ್ತೆ ಬದಿ ಮಲಗಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿ ಆತನ ಮರ್ಮಾಂಗಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಆಘಾತಕಾರಿ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜೂನ್ 4ರಂದು ಕೋಡಂಬಕ್ಕಂನಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕುಡಿದ ಅಮಲಿನಲ್ಲಿ 50 ವರ್ಷದ ಜಾಫರ್ ಎನ್ನುವರು ಇಲ್ಲಿನ ರಂಗರಾಜಪುರಂನಲ್ಲಿ ಇಂಡಿಯಾ ಬ್ಯಾಂಕ್ ಬಳಿ ಮಲಗಿದ್ದಾಗ ಮಧ್ಯರಾತ್ರಿ ಸುಮಾರು 1.30ರ ವೇಳೆಯಲ್ಲಿ ಕಿಡಿಗೇಡಿಗಳ ತಂಡವೊಂದು ಕಿರುಕುಳ ನೀಡಿದ್ದಲ್ಲದೆ ಮರ್ಮಾಂಗಕ್ಕೆ ಬೆಂಕಿ ಹಚ್ಚಿದ್ದಾರೆ.

ಬೆಂಕಿಯನ್ನು ನೋಡಿ ಜಾಫರ್ ಎಚ್ಚರಗೊಂಡಿದ್ದು ಕುಡಿದ ಮತ್ತಿನಲ್ಲಿದ್ದ ಕಾರಣ ಮೇಲೇಳಲಾಗದೆ ಮಲಗಿದ್ದಲ್ಲೇ ಒದ್ದಾಡಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ದುರುಳರು ಜಾಫರ್ ಅವರನ್ನ ಪೈಪ್ ನಿಂದ ಹೊಡೆದಿದ್ದಾರೆ.
ಜಾಫರ್ ಎನ್ನುವರ ಮೇಲೆ ಹಲ್ಲೆ ಮಾಡಿದ್ದ ಶ್ಯಾಮ್, ಪುಗಸೇಂದಿ, ರಾಜೇಶ್ ಹಾಗೂ ಒಬ್ಬ ಅಪ್ರಾಪ್ತ ಇದೀಗ ಪೊಲೀಸರ ವಶದಲ್ಲಿದ್ದು, ಜಾಫರ್ ಅವರ ಮೇಲೆ ಹಲ್ಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.












Click it and Unblock the Notifications