ಟೆಕ್ಕಿ ಶುಭಶ್ರೀ ಸಾವಿನ ಕೊನೆಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆ
Recommended Video
ಚೆನ್ನೈ, ಸೆಪ್ಟೆಂಬರ್ 14: ಚೆನ್ನೈನಲ್ಲಿ ದಾರುಣ ಸಾವುಕಂಡ 23 ವರ್ಷ ವಯಸ್ಸಿನ ಶುಭಶ್ರೀ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಾಗುತ್ತಿದ್ದಾಳೆ.
ಆಕೆಯ ಕೊನೆಯ ಕ್ಷಣಗಳು ಕ್ಯಾಮರಾವೊಂದರಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೆಲ್ಮೆಟ್ ಧರಿಸಿಯೇ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಶುಭಶ್ರೀ ಮೇಲೆ ಅಕ್ರಮ ಫ್ಲೆಕ್ಸ್ಸ ವೊಂದು ಬಿದ್ದ ಪರಿಣಾಮ ಆಕೆ ಗಾಡಿಯಿಂದ ರಸ್ತೆಗೆ ಉರುಳಿದ್ದರು. ಅದೇ ಸಂದರ್ಭದಲ್ಲಿ ವೇಗವಾಗಿ ಬಂದ ಟ್ರಕ್ ಅವರ ಮೇಲೆ ಹರಿದು ಆಕೆ ಅಸುನೀಗಿದ್ದರು.
ಈ ದಾರುಣ ಘಟನೆಯಲ್ಲಿ ಶುಭಶ್ರೀ ಕೊನೆಯ ಕ್ಷಣಗಳ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಮಾಡದ ತಪ್ಪಿಗೆ ಶಿಕ್ಷೆ ಸಾವು ಕಂಡ ಶುಭಶ್ರೀ ಆತ್ಮಕ್ಕೆ ಶುಭ ಕೋರಲಾಗಿದೆ. ಜೊತೆಗೆ ಆರೋಪಿಗಳಿಗೆ ಶಿಕ್ಷೆಯಾಗಲೇಬೇಕು ಎಂಬ ಆಕ್ರೋಶವೂ ವ್ಯಕ್ತವಾಗಿದೆ.
|
ಶುಭಶ್ರೀ ವಿಡಿಯೋ ವೈರಲ್
ಶುಭಶ್ರಿ ಹೆಲ್ಮೆಟ್ ಧರಿಸಿ ದ್ವಿಚಕ್ರವಾಹನ ಓಡಿಸುತ್ತಿರುವ ಸಮಯದಲ್ಲಿ ಫ್ಲೆಕ್ಸ್ ಬಿದ್ದು, ಆಕೆ ರಸ್ತೆಗೆ ಬಿದ್ದ ನಂತರ ಟ್ರಕ್ ಆಕೆಯ ಮೇಲೆ ಹರಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟ್ರಕ್ ಡ್ರೈವರ್ ಬಂಧನ
ಶುಭಶ್ರೀ ಸಾವಿನ ನಂತರ ಟ್ರಕ್ ಡ್ರೈವರ್ ನನ್ನು ಬಂಧಿಸಲಾಗಿದೆ. ಆದರೆ ಅಕ್ರಮವಾಗಿ ಫ್ಲೆಕ್ಸ್ ಹಾಕಿಸಿದ್ದ ಎಐಎಡಿಎಂಕೆ ಮುಖಂಡನನ್ನು ಬಂಧಿಸಲಾಗಿದೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ. ಘಟನೆಗೆ ಕಾರಣ ಫ್ಲೆಕ್ಸ್ ಆಗಿರುವಾಗ ಎಐಡಿಎಂಕೆ ಮುಖಂಡನನ್ನು ಬಂಧಿಸದೇ, ಟ್ರಕ್ ಡ್ರೈವರ್ ಮಾತ್ರವೇ ಈ ದುರಂತಕ್ಕೆ ಹೊಣೆ ಎಂದರೆ ಹೇಗೆ ಎಂಬ ಪ್ರಶ್ನೆ ಟ್ವಿಟ್ಟರ್ ನಲ್ಲಿ ಎದ್ದಿದೆ.

ಶುಭಶ್ರಿಗೆ ಮಾಡದ ತಪ್ಪಿಗೆ ಶಿಕ್ಷೆ
"ಶುಭಶ್ರೀ ಹೆಲ್ಮೆಟ್ ಧರಿಸಿಯೇ ಇದ್ದರೂ, ಅವರು ಮಾಡದ ತಪ್ಪಿಗೆ ಸಾವನ್ನಪ್ಪಿದ್ದಾರೆ. ಸಂಚಾರಿ ನಿಯಮಗಳ ಉಲ್ಲಂಘನೆಗೆ ದಂಡ ಹಾಕುವ ಸರ್ಕಾರ ಅಕ್ರಮ ಬ್ಯಾನರ್, ಫ್ಲೆಕ್ಸ್ ಗಳನ್ನು ತಾನೇ ಹಾಕಿ, ಅದರಿಂದ ವ್ಯಕ್ತಿಯ ಪ್ರಾಣಕ್ಕೆ ಕುತ್ತುಬಂದರೆ, ಯಾರನ್ನು ಹೊಣೆಯಾಗಿಸುತ್ತದೆ?" ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿದೆ.

ಟ್ವಿಟ್ಟರ್ ನಲ್ಲಿ ಟ್ರೆಂಡ್
ಶುಭಶ್ರೀ ಸಾವಿನ ನಂತರ #WhoKilledSubhasree", #JusticeForSubhasree ಎಂಬ ಹ್ಯಾಶ್ ಟ್ಯಾಗ್ ಗಳು ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿವೆ. 'ಮಗನ ಮದುವೆಗೆ ಶುಭಾಶಯ ಕೋರಿ ಎಐಎಡಿಎಂಕೆ ನಾಯಕ ಹಾಕಿದ್ದ ಅಕ್ರಮ ಫ್ಲೆಕ್ಸ್ ನಿಂದಾಗಿ ಘಟನೆ ಸಂಭವಿಸಿರುವುದರಿಂದ ಅವರನ್ನು ಬಂಧಿಸಬೇಕು' ಎಂಬ ಕೂಗೂ ಎದ್ದಿದೆ.












Click it and Unblock the Notifications