ಕಾಂಗ್ರೆಸ್ ನಾಯಕಿ ಜಯಂತಿ ನಟರಾಜನ್ ನಿವಾಸದ ಮೇಲೆ ಸಿಬಿಐ ದಾಳಿ

ಚೆನ್ನೈ, ಸೆಪ್ಟೆಂಬರ್ 9: ತಮಿಳುನಾಡಿನ ಕಾಂಗ್ರೆಸ್ ನಾಯಕಿ ಜಯಂತಿ ನಟರಾಜನ್ ಅವರ ನಿವಾಸದ ಮೇಲೆ ಶನಿವಾರ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಕೆಲವಾರು ದಾಖಲೆಗಳ ಪರಿಶೀಲನೆ ನಡೆಸಿ, ಎಫ್ ಐಆರ್ ದಾಖಲಿಸಿದೆ.

2009ರಿಂದ 2014ರವರೆಗಿನ ಅವಧಿಯಲ್ಲಿ ಕೇಂದ್ರದಲ್ಲಿ ಯುಪಿಎ-2 ಸರ್ಕಾರ ಅಸ್ತಿತ್ವದಲ್ಲಿದ್ದಾಗ, ಜಯಂತಿ ನಟರಾಜನ್ ಅವರು ಕೇಂದ್ರ ಪರಿಸರ ಖಾತೆ ಸಚಿವರಾಗಿದ್ದರು.

CBI raids former union minister Jayanthi Natarajan's house in Chennai

ಆ ಸಂದರ್ಭದಲ್ಲಿ, ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ಹಾಗೂ ಜೆಎಸ್ ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಎಂಬ ಎರಡು ಕಂಪನಿಗಳು ಜಾರ್ಖಂಡ್ ನ ಅರಣ್ಯ ಭೂಮಿಯ ಕೆಲ ಭಾಗಗಳಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಿದ್ದವು.

ಈ ಕಂಪನಿಗಳಿಗೆ ಅರಣ್ಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಲು ಆಗಿನ ಕೇಂದ್ರ ಪರಿಸರ ಖಾತೆ ಸಚಿವೆಯಾಗಿದ್ದ ಜಯಂತಿ ನಟರಾಜನ್ ಅವರು ಸಾಥ್ ನೀಡಿದ್ದರೆಂಬ ಆರೋಪ ಅವರ ವಿರುದ್ಧ ಕೇಳಿಬಂದಿತ್ತು.

ಇದೀಗ, ಆ ಪ್ರಕರಣದ ತನಿಖೆಗೆ ನಡೆಸುತ್ತಿರುವ ಸಿಬಿಐ, ಶನಿವಾರ (ಸೆ. 9) ಇಲ್ಲಿನ ಅವರ ನಿವಾಸದ ಮೇಲೆ ದಾಳಿ ನಡೆಸಿ ಹಲವಾರು ದಾಖಲೆಗಳನ್ನು ಪರಿಶೀಲಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+