ಎಐಎಡಿಎಂಕೆ ಉಳಿಯತ್ತಾ, ಒಗ್ಗಟ್ಟು ಇರುತ್ತಾ-ಶಶಿಕಲಾ ನಡೆ ಏನು?

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ಡಿಸೆಂಬರ್ 7: ಎಐಎಡಿಎಂಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಎಂಬ ಹುದ್ದೆ ತುಂಬ ಪ್ರಾಮುಖ್ಯ ಇರುವಂಥದ್ದು. ಈ ವರೆಗೆ ಗೋಚರಿಸುತ್ತಿರುವ ಲಕ್ಷಣಗಳು ಶಶಿಕಲಾ ನಟರಾಜನ್ ಅವರು ಆ ಸ್ಥಾನ ಅಲಂಕರಿಸುತ್ತಾರೆ ಎಂಬುದನ್ನೇ ಬೊಟ್ಟು ಮಾಡುತ್ತಿವೆ. ಈ ವರೆಗೆ ಆ ಹುದ್ದೆಯಿದ್ದದ್ದು ಜಯಲಲಿತಾ ಅವರ ಬಳಿ.

ಇದು ಆ ಪಕ್ಷದ ಪಾಲಿಗೆ ಕಷ್ಟದ ದಿನಗಳು. ಏಕೆಂದರೆ ಅಲ್ಲೀಗ ಮೊದಲ ಬಾರಿಗೆ ವರ್ಚಸ್ವಿ ನಾಯಕರ್ಯಾರೂ ಇಲ್ಲ. ಪಕ್ಷದಲ್ಲಿ ಒಗ್ಗಟ್ಟು ಕಾಪಾಡಿಕೊಳ್ಳುವುದು, ಪಕ್ಷದ ವರ್ಚಸ್ಸನ್ನು ಉಳಿಸಿಕೊಳ್ಳುವುದು ಸದ್ಯಕ್ಕೆ ಆದ್ಯತೆಯಾಗಿದೆ. ಮುಂದೆ ಸಾಕಷ್ಟು ಕೆಲಸಗಳು ಬಾಕಿ ಇವೆ. ಈಗ ಶಶಿಕಲಾ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ.[ಪನ್ನೀರ್ ಸೆಲ್ವಂ ಅಂತಿಮವಾಗಿದ್ದು ಹೇಗೆ: ಎಐಎಡಿಎಂಕೆ ಒಳಸುಳಿಗಳು]

ಆಕೆ ಪಕ್ಷದಲ್ಲಾಗಲಿ, ಸರಕಾರದಲ್ಲಾಗಲಿ ಈ ವರೆಗೆ ಅಧಿಕೃತವಾಗಿ ಯಾವುದೇ ದ್ದೆ ನಿಭಾಯಿಸಿಲ್ಲ. ಆದ್ದರಿಂದ ಈಗಿನ ಸವಾಲು ಎದುರಿಸುವುದು ಸುಲಭವಲ್ಲ. ಈ ಮಧ್ಯೆ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಂದ ತಪ್ಪಿತಸ್ಥೆ ಎಂದಾದರೆ ಶಶಿಕಲಾ ನಾಲ್ಕು ವರ್ಷಗಳ ಕಾಲ ಜೈಲಿನಲ್ಲಿ ಕಳೆಯಬೇಕಾಗುತ್ತದೆ.

Shashikala-Jayalalithaa

ಪಕ್ಷದ ವರ್ಚಸ್ಸು ಕಾಪಾಡಿಕೊಂಡು, ಒಗ್ಗಟ್ಟು ಉಳಿಸಿಕೊಳ್ಳುವುದು ಎಐಎಡಿಎಂಕೆಗೆ ಅಷ್ಟು ಸಲೀಸಲ್ಲ. 1949ರಲ್ಲಿ ಪೆರಿಯಾರ್ ರಾಮಸ್ವಾಮಿ ಅವರಿಂದ ದೂರವಾದ ಅಣ್ಣಾ ದೊರೈ ಡಿಎಂಕೆ ಆರಂಭಿಸಿದರು. 1972ರಲ್ಲಿ ಡಿಎಂಕೆ ಛಿದ್ರವಾಗಿ, ಎಂಜಿಆರ್ ಎಐಎಡಿಎಂಕೆ ಆರಂಭಿಸಿದರು.

ಎಐಎಡಿಎಂಕೆ ಈ ವರೆಗೆ ವರ್ಚಿಸ್ಸಿನ ಸುಳಿಗೆ ಸಿಲುಕಿದೆ. ಎಂಜಿಆರ್ ಪ್ರಭಾವಿ ನಾಯಕ. ಅವರನ್ನು ದೇವರ ಮಟ್ಟಕ್ಕೆ ಜನರು ಏರಿಸಿದ್ದರು. ಜಯಲಲಿತಾ ಕಥೆಯೂ ಬೇರೆ ಏನಲ್ಲ. ಈಗ ಪಕ್ಷ ಉಳಿಯಬೇಕು ಅಂದರೆ ತಾರಾ ವರ್ಚಸ್ಸಿನವರೊಬ್ಬರನ್ನು ಪಕ್ಷದಲ್ಲಿ ತರಬೇಕು. ಎಂಜಿಆರ್ ನಿಧನರಾದಾಗ ಜಯಲಲಿತಾ ಅವರನ್ನು ಕರೆತಂದ ಹಾಗೆ.[ಅಮ್ಮ 'ಜನ ಪ್ರೀತಿ' ಗಳಿಸಿದ ಕ್ಯಾಂಟೀನ್ ನಿಂದ ಲ್ಯಾಪ್ ಟಾಪ್ ವರೆಗೆ]

ಡಿಎಂಕೆಯಲ್ಲಿ ಯಾವ ಸ್ಥಿತಿ ಇದೆಯೋ ಅದೇ ಪರಿಸ್ಥಿತಿ ತಕ್ಷಣಕ್ಕೆ ಎಐಎಡಿಎಂಕೆಯಲ್ಲೂ ಇದೆ. ಎರಡೂ ಪಕ್ಷದಲ್ಲೂ ಉತ್ತರಾಧಿಕಾರಿ ಪ್ರಶ್ನೆ ಕಾಡುತ್ತಿದೆ. ಜಯಲಲಿತಾ ತಮ್ಮ ನಂತರ ಯಾರು ಎಂದು ತಿಳಿಸಿದ್ದರೋ ಇಲ್ಲವೋ ಆದರೆ ಶಶಿಕಲಾ ಅವರು ಜಯಲಲಿತಾಗೆ ಆಪ್ತರಾಗಿದ್ದರು ಎಂಬ ಕಾರಣಕ್ಕೆ ಸಹಜ ಆಯ್ಕೆಯಾಗುವ ಸಾಧ್ಯತೆಗಳಿವೆ.

ಮುಂಬರುವ ದಿನಗಳು ತಮಿಳುನಾಡಿನ ರಾಜಕಾರಣದಲ್ಲಿ ಆಸಕ್ತಿಕರವಾಗಿರಲಿದೆ. ಎಐಎಡಿಎಂಕೆಯಲ್ಲಿ ನಾಯಕರಿಲ್ಲ. ರಾಷ್ಟ್ರೀಯ ಪಕ್ಷಗಳ ಮೇಲುಗೈ ಆಗುವುದು ಗೋಚರಿಸುತ್ತಿದ್ದು, ಎರಡು ಪಕ್ಷಗಳ ರಾಜಕಾರಣದಿಂದ ಗುರುತಿಸಿಕೊಂಡಿದ್ದ ತಮಿಳುನಾಡಿನಲ್ಲಿ ಇನ್ನು ಅಂಥ ಸ್ಥಿತಿ ಕೊನೆಯಾಗಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The AIADMK has been a victim of the image trap. MGR was a charismatic leader who was elevated to the status of demi God. The case of Jayalalithaa was no different and she ensured that the party functioned smoothly under her image.
Please Wait while comments are loading...