ಡಿಎಂಕೆ ಉಚ್ಛಾಟಿತ ಅಳಗಿರಿ ಜಯಲಲಿತಾ ಕೈಹಿಡಿಯುವರೇ?

ಕರುಣಾನಿಧಿ ನಂತರ ಡಿಎಂಕೆ ಅಧಿಪತ್ಯಕ್ಕಾಗಿ ಹಿರಿಯ ಮತ್ತು ಕಿರಿಯ ಪುತ್ರರ ನಡುವಣ ಕದನ ಇದಾಗಿದೆ ಎಂಬುದು ಸುಸ್ಪಷ್ಟ. ಡಿಎಂಕೆ ಪಕ್ಷದ (Dravida Munetra Kazhakam) ಕಾರ್ಯಕರ್ತರ ವಿಶ್ವಾಸ ಗಳಿಸಿರುವ ಅಳಗಿರಿ, ಕರುಣಾನಿಧಿ ನಂತರ ಅಧ್ಯಕ್ಷ ಸ್ಥಾನಕ್ಕೇರಲು ಸಹಜವಾಗಿಯೇ ಬಯಸಿದ್ದರು.
ಆದರೆ ಕಿರಿಯ ಮಗ ಸ್ಟಾಲಿನ್ ರಚ್ಚೆ ಹಿಡಿದಿದ್ದು ಅನ್ಯ ಕಾಣದೆ (ಕರುಣಾನಿಧಿ ದ್ವಿತೀಯ ಪತ್ನಿ ದಯಾಳು ಅಮ್ಮಾಳ್ ಅವರ ಪುತ್ರ) ಅಳಗಿರಿಯನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಇದು ರಾಜಕೀಯವಾಗಿ ಡಿಎಂಕೆಗೆ ಮಾರಕವಾಗುತ್ತದೆ ಅನ್ನುತ್ತಾರೆ ತಮಿಳುನಾಡು ರಾಜಕೀಯ ಪಂಡಿತರು.
ಮುಂದೇನು ಅಂದರೆ ಮಧುರೈ ಸೇರಿದಂತೆ ಇತರೆ ಕಡೆಗಳಲ್ಲಿ ಪಕ್ಷದ ಮೇಲೆ ಹಿಡಿತ ಹೊಂದಿರುವ ಅಳಗಿರಿ ರಾಜಕೀಯವಾಗಿ ತಮ್ಮ ಭವಿಷ್ಯವನ್ನು ಕಿಂಡುಕೊಳ್ಳುವುದು. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಸೇರುವುದು ಅಳಗಿರಿ ಮುಂದಿರುವ ತಕ್ಷಣದ ದಾರಿ. ಆದರೆ DMKಯನ್ನು UPA ಮೈತ್ರಿಯಾಗಿಸಿಕೊಂಡಿರುವ ಕಾಂಗ್ರೆಸ್ ಅಳಗಿರಿಯತ್ತ ಕೈಚಾಚದೇ ಹೋಗಬಹುದು.
ಅಳಗಿರಿ ಕೈಗೆ ಜಯಾ ಸುಪಾರಿ: ಇದೇ ಸುಸಂದರ್ಭಕ್ಕಾಗಿ ಕಾಯುತ್ತಿರುವ DMK ರಾಜಕೀಯ ವೈರಿ AIADMK ಅಧಿನಾಯಕಿ, ಮುಖ್ಯಮಂತ್ರಿ ಜಯಲಲಿತಾ ಅಳಗಿರಿಗೆ ಮಣೆ ಹಾಕುತ್ತಾರಾ? ಶತ್ರುವಿನ ಶತ್ರು ಮಿತ್ರ ಎಂಬಂತೆ ರಾಜಕೀಯ ಮಹತ್ವಾಕಾಂಕ್ಷೆಯ ಜಯಾ, ಡಿಎಂಕೆ ಕುಟುಂಬವನ್ನು ಒಡೆಯುತ್ತಾರಾ? ಅಳಗಿರಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರಾ?
ಇಲ್ಲಿ ಅಳಗಿರಿ ಎಷ್ಟು ಲೋಕಸಭಾ ಸೀಟುಗಳನ್ನು ಗೆಲ್ಲುತ್ತಾರೆ ಅನ್ನುವುದಕ್ಕಿಂತ DMK ಮತ್ತು ಕಾಂಗ್ರೆಸ್ ಮತ ವಿಭಜನೆ ಮಾಡಬಹುದು ಎಂಬುದು ಜಯಾ ಲೆಕ್ಕಾಚಾರಚಾದೀತು. ಹಾಗಾದಲ್ಲಿ ತಮ್ಮ ಗುರಿಯಾದ 39+1 ಸ್ಥಾನವನ್ನು ಅನಾಯಾಸವಾಗಿ ಗೆಲ್ಲುವ ಮೂಲಕ ಪ್ರಧಾನಿಯಾಗುವ ಸದವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಹಾಕುತ್ತಾರಾ ಜಯಾ? ಕಾದುನೋಡಬೇಕು.












Click it and Unblock the Notifications