ಮಧ್ಯಾಹ್ನ 12ಕ್ಕೆ ಹೋಯಿತು ಎಐಎಡಿಎಂಕೆ ಶಾಸಕರ ಸಭೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ಡಿಸೆಂಬರ್ 5: ಎಐಎಡಿಎಂಕೆ ಪಕ್ಷದ ಎಲ್ಲ ಶಾಸಕರು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಬೆಳಗ್ಗೆ 11ಕ್ಕೆ ನಡೆಸಬೇಕಿದ್ದ ಸಭೆ ಮಧ್ಯಾಹ್ನ 12ಕ್ಕೆ ಮುಂದಕ್ಕೆ ಹೋಗಿದೆ. ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಗೆ ಭಾನುವಾರ ಸಂಜೆ ಹೃದಯ ಸ್ಥಂಭನವಾಗಿತ್ತು.

ಎಐಎಡಿಎಂಕೆ ಮುಖಂಡರು, ಕಾರ್ಯಕರ್ತರು ಭಾನುವಾರ ರಾತ್ರಿ ಆಸ್ಪತ್ರೆಯತ್ತ ಧಾವಿಸಿದರು. ಆಸ್ಪತ್ರೆ ಬಳಿ ಎಲ್ಲ ಶಾಸಕರು ಸೇರಬೇಕು ಎಂಬ ಸೂಚನೆಯ ಹಿನ್ನೆಲೆ ಇನ್ನೂ ಸ್ಪಷ್ಟವಾಗಿಲ್ಲ. ಯಾವುದೋ ಘೋಷಣೆ ಸಲುವಾಗಿಯೇ ಅಪೋಲೋ ಆಸ್ಪತ್ರೆ ಬಳಿ ಮಧ್ಯಾಹ್ನ 12ಕ್ಕೆ ಬರುವಂತೆ ಹೇಳಲಾಗಿದೆ ಎಂಬ ಸುದ್ದಿಯಂತೂ ಹರಿದಾಡುತ್ತಿದೆ.[ಜಯಾ ಹೃದಯ ಲಬ್ ಡಬ್ ಎನ್ನಲು ಕೃತಕ ಸಾಧನ ಬಳಕೆ]

Jayalalithaa

ಈ ಮಧ್ಯೆ ಆಸ್ಪತ್ರೆ ಹೊರಭಾಗದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಾಜ್ಯಗಳ ಮಧ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನೇಮಿಸಲಾಗಿದೆ. ಹೈ ಅಲರ್ಟ್ ಘೋಷಿಸಲಾಗಿದೆ. ಭಾನುವಾರ ರಾತ್ರಿ ತಮಿಳುನಾಡು ಉಸ್ತುವಾರಿ ರಾಜ್ಯಪಾಲ ವಿದ್ಯಾಸಾಗರ್ ಕೆಲ ನಿಮಿಷಗಳ ಕಾಲ ಆಸ್ಪತ್ರೆಗೆ ಭೇಟಿ ನೀಡಿದರು. ತಮಿಳುನಾಡಿನಲ್ಲಿ ಗರಿಷ್ಠ ಮಟ್ಟಕ್ಕೆ ಭದ್ರತೆ ಹೆಚ್ಚಿಸಲಾಗಿದೆ ಹಾಗೂ ಕೇಂದ್ರದ ನೆರವು ಪಡೆಯುವ ಬಗ್ಗೆ ಚಿಂತನೆ ನಡೆಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
All AIADMK MLAs have been told to assemble at the Apppolo Hospital in Chennai by 11 AM. Tamil Nadu Chief Minister, J Jayalalithaa who is admitted at the Appolo Hospital is being treated after she suffered a cardiac arrest on Sunday.
Please Wait while comments are loading...