ರಾಜಭವನದಲ್ಲಿ 84 ಜನರಿಗೆ ಕೊರೊನಾ ವೈರಸ್ ದೃಢ
ಚೆನ್ನೈ, ಜುಲೈ 23: ತಮಿಳುನಾಡಿನ ರಾಜ್ಯಪಾಲರ ರಾಜಭವನದಲ್ಲಿ 84 ಜನರಿಗೆ ಕೊರೊನಾ ವೈರಸ್ ತಗುಲಿರುವುದು ಖಚಿತವಾಗಿದೆ. ತಮಿಳುನಾಡಿನಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ರಾಜಭವನದಲ್ಲಿ ಸಾಮೂಹಿಕ ಪರೀಕ್ಷೆ ಮಾಡಲಾಗಿದೆ. ಈ ವೇಳೆ 84 ಜನರಿಗೆ ಕೊವಿಡ್ ದೃಢವಾಗಿದೆ ಎಂದು ತಿಳಿದು ಬಂದಿದೆ.
Recommended Video
ಈ ಕುರಿತು ರಾಜಭವನದಿಂದ ಮಾಧ್ಯಮ ಪ್ರಕಟಣೆ ಬಿಡುಗಡೆಯಾಗಿದ್ದು, ''ಒಟ್ಟು 147 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಲಾಗಿತ್ತು. ಅದರಲ್ಲಿ 84 ಜನರಿಗೆ ಸೋಂಕು ದೃಢವಾಗಿದೆ. ಇನ್ನು ಕೆಲವರಿಗೆ ಸೋಂಕಿನ ಲಕ್ಷಣ ಕಂಡು ಬಂದಿದೆ'' ಎಂದು ತಿಳಿಸಿದೆ.
ರಾಜಭವನದಲ್ಲಿ ಸೋಂಕು ತಗುಲಿರುವ ಎಲ್ಲರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿದೆ. ಹಲವರನ್ನು ಕ್ವಾರಂಟೈನ್ ಮಾಡಲಾಗಿದೆ. ಪಾಸಿಟಿವ್ ಬಂದಿರುವ ಸಿಬ್ಬಂದಿ ಎಲ್ಲರೂ ರಾಜಭವನದ ಹೊರಗೆ ಕೆಲಸ ನಿರ್ವಹಿಸಿದವರು. ಇವರೆಲ್ಲರೂ ರಾಜ್ಯಪಾಲರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಂಪರ್ಕಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.

ರಾಜಭವನದಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆ ಇಡೀ ರಾಜ್ಯಪಾಲರ ಭವನದಲ್ಲಿ ಆರೋಗ್ಯ ಅಧಿಕಾರಿಗಳು ಔಷಧಿ ಸಿಂಪಡಣೆ ಮಾಡಿದ್ದಾರೆ.
ಪ್ರಸ್ತುತ, ತಮಿಳುನಾಡಿನಲ್ಲಿ ಒಟ್ಟು 1,86,492 ಮಂದಿಗೆ ಕೊರೊನಾ ವೈರಸ್ ತಗುಲಿದೆ. ಅದರಲ್ಲಿ 1,31,583 ಜನರು ಚೇತರಿಕೆ ಕಂಡಿದ್ದು, ಇನ್ನು 51,765 ಕೇಸ್‌ಗಳು ಸಕ್ರಿಯವಾಗಿದೆ. ಈವರೆಗೂ 3,144 ಜನರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.












Click it and Unblock the Notifications