ಮತ್ತೆ ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆ ಹಲ್ಲೆ
ಚೆನ್ನೈ, ಮಾರ್ಚ್. 26 : ಭಾರತೀಯ ಮೀನುಗಾರರ ಮೇಲೆ ಹಲ್ಲೆ ನಡೆಸಿರುವ ಶ್ರೀಲಂಕಾ ನೌಕಾಪಡೆ 12 ಮಂದಿಯನ್ನು ಬಂಧಿಸಿ, ಎರಡು ಯಾಂತ್ರೀಕೃತ ದೋಣಿಗಳನ್ನು ವಶಕ್ಕೆ ಪಡೆದಿದೆ.
ಜಲಗಡಿಯನ್ನು ದಾಟಿ ಮೀನುಗಾರಿಕೆಗೆ ತೆರಳಿದ್ದಾರೆ ಎಂದು ಭಾರತೀಯ ಮೀನುಗಾರರನ್ನು ಶನಿವಾರ ಬಂಧಿಸಿ ದೋಣಿಗಳನ್ನು ವಶಕ್ಕೆ ಪಡೆದಿದ್ದಾರೆ.[ಶ್ರೀಲಂಕಾ ನೌಕಾಪಡೆಯಿಂದ ಭಾರತೀಯ ಮೀನುಗಾರನ ಹತ್ಯೆ]

ಎರಡು ಸಾವಿರ ಭಾರತೀಯ ಮೀನುಗಾರರು ನೆಡುತೀವ್ ಬಳಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ 10 ದೋಣಿಗಳಲ್ಲಿ ಬಂದ ಶ್ರೀಲಂಕಾ ನೌಕಾಪಡೆ ಸಿಬ್ಬಂದಿ ಬಾಟಲಿ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದೆ. ಘಟನೆಯಲ್ಲಿ ಧನುಷ್ಕೋಟಿ ಹಾಗೂ ರಾಮೇಶ್ವರದ ಐವರು ಮೀನುಗಾರರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಹಲ್ಲೆ ನಡೆಯುತ್ತಿದ್ದಂತೆ ಮೀನುಗಾರರು ಅಲ್ಲಿಂದ ದಿಕ್ಕಾಪಾಲಾಗಿದ್ದು, ಹಲವರು ರಾಮೇಶ್ವರಂಗೆ ಹಿಂದಿರುಗಿದ್ದಾರೆ. ಶ್ರೀಲಂಕಾ ನೌಕಾಪಡೆಯಿಂದ ಪದೇ ಪದೇ ತೊಂದರೆಯಾಗುತ್ತಿದ್ದು, ಇದಕ್ಕೆ ಶಾಸ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications