Get Updates
Get notified of breaking news, exclusive insights, and must-see stories!

10 ಸಿಎಂ ಇದ್ರೂ ಪಂಜಾಬ್‌ನಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್‌ಗೆ ಅಸಾಧ್ಯ: ಭಗವಂತ್‌ ಮಾನ್‌

ಚಂಡೀಗಢ, ಫೆಬ್ರವರಿ 06: ಪಂಜಾಬ್‌ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ವಿಚಾರದಲ್ಲಿ ಪಂಜಾಬ್ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾದ ಭಗವಂತ್ ಮಾನ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ ಪಕ್ಷವು ಒಂದರ ಬದಲು 10 ಮುಖ್ಯಮಂತ್ರಿಗಳನ್ನು ಘೋಷಿಸಿದರೂ ರಾಜ್ಯದಲ್ಲಿ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

"ಕಾಂಗ್ರೆಸ್ ಒಬ್ಬರ ಬದಲು 10 ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಘೋಷಿಸಿದರೂ, ಕಾಂಗ್ರೆಸ್‌ ಇನ್ನೂ ಪಂಜಾಬ್‌ನಲ್ಲಿ ಸರ್ಕಾರ ರಚಿಸಲು ಸಾಧ್ಯವಿಲ್ಲ. ಹಾಗಿರುವಾಗ ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡುವುದರಿಂದ ಏನು ಪ್ರಯೋಜನ?, ಮುಂದಿನ ಚುನಾವಣೆಯ ಬಳಿಕ ಆಮ್ ಆದ್ಮಿ ಪಕ್ಷವು ಸರ್ಕಾರ ರಚನೆ ಮಾಡಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ನನ್ನ ಪಕ್ಷ ನನ್ನನ್ನು ತನ್ನ ಮುಖ್ಯಮಂತ್ರಿಯನ್ನಾಗಿ ಮಾಡಿದೆ ಮತ್ತು ಜನರು ನಮ್ಮ ಮೇಲೆ ಹೂಮಳೆಯನ್ನು ಸುರಿಸುತ್ತಿದ್ದಾರೆ. ನೀವು ಪ್ರಜಾಪ್ರಭುತ್ವದ ಹಬ್ಬವನ್ನು ನೋಡಲು ಬಯಸಿದರೆ, ಪಂಜಾಬ್‌ಗೆ ಬನ್ನಿ ಮತ್ತು ನಮ್ಮ ರ್‍ಯಾಲಿಗೆ ಬನ್ನಿ," ಎಂದು ಜನರಿಗೆ ಭಗವಂತ್ ಮಾನ್ ಆಹ್ವಾನ ನೀಡಿದ್ದಾರೆ.

Punjab Poll: Congress Wont Be Able To Form Govt Even With 10 CM Faces: Bhagwant Mann

ಭದ್ರತೆ ತಿರಸ್ಕರಿಸಿದ ಭಗವಂತ್‌ ಮಾನ್‌

ಇನ್ನು ತನ್ನ ಭದ್ರತೆಯ ವಿಚಾರದ ಬಗ್ಗೆ ಮಾತನಾಡಿದ ಭಗವಂತ್‌ ಮಾನ್‌, "ತನಗೆ ಹೆಚ್ಚಿನ ಭದ್ರತೆಯನ್ನು ನೀಡಲಾಗಿದೆ. ಆದರೆ ನಾನು ಅದನ್ನು ತಿರಸ್ಕಾರ ಮಾಡಿದ್ದೇನೆ," ಎಂದು ತಿಳಿಸಿದರು. "ಸಂಸದನಾಗಿ ನನಗಿರುವ ಭದ್ರತೆಯೇ ಸಾಕು, ಭದ್ರತೆ ಹೆಚ್ಚಿಸಿ ಎಂದು ಹೇಳಿದರೂ ನಿರಾಕರಿಸಿದ್ದೆ. ಪಂಜಾಬ್ ಜನತೆ ಸುರಕ್ಷಿತವಾಗಿಲ್ಲ, ಎಲ್ಲ ಧರ್ಮಗಳ ಧಾರ್ಮಿಕ ಪುಸ್ತಕಗಳು ಸುರಕ್ಷಿತವಾಗಿಲ್ಲ. ಹೀಗಿರುವಾಗ ನನ್ನ ಭದ್ರತೆ ಬೇಕಾಗಿಲ್ಲ. ನಾನು ಪಂಜಾಬ್‌ನಲ್ಲಿ ಒಬ್ಬನೇ ಅಲ್ಲ," ಎಂದಿದ್ದಾರೆ.

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. 2017 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ, 117 ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದುಕೊಂಡಿದೆ. ಆದರೆ ಶಿರೋಮಣಿ ಅಕಾಲಿದಳವು ಕೇವಲ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮತ್ತೊಂದೆಡೆ, ಎಎಪಿ 20 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಚುನಾವಣೆಯಲ್ಲಿ ಎಎಪಿ ಅಧಿಕ ಸ್ಥಾನದಲ್ಲಿ ಗೆಲುವು ಸಾಧಿಸುವ ನಿರೀಕ್ಷೆಯನ್ನು ಹೊಂದಿದೆ.

ಕಾಂಗ್ರೆಸ್‌ ಸಿಎಂ ಅಭ್ಯರ್ಥಿ ಘೋಷಣೆ

ಕಾಂಗ್ರೆಸ್‌ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್‌ ಗಾಂಧಿ ಇಂದು ಮುಂದಿನ ವಿಧಾನಸಭೆ ಚುನಾವಣೆಗೆ ಪಂಜಾಬ್‌ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. ನಿರೀಕ್ಷೆಯಂತೆ ಹಾಲಿ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಫೆಬ್ರವರಿ 6 ರಂದು ಲುಧಿಯಾನದಲ್ಲಿ ತಮ್ಮ ವರ್ಚುವಲ್ ರ್‍ಯಾಲಿಯಲ್ಲಿ ರಾಹುಲ್ ಗಾಂಧಿಯವರು ಪಂಜಾಬ್ ವಿಧಾನಸಭಾ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ.
"ಕೆಲವು ನಾಯಕರು ಸಮಾಜಕ್ಕಾಗಿ ಹೋರಾಡುತ್ತಾರೆ, ಇತರ ನಾಯಕರು ತಮಗಾಗಿ ಮಾತ್ರ ಹೋರಾಡುತ್ತಾರೆ. ಕೆಲವೇ ದಿನಗಳಲ್ಲಿ ನಾಯಕನ ರಚನೆಯಾಗುವುದಿಲ್ಲ. ನಾಯಕರು ಹೋರಾಟಗಳಿಂದ ಹುಟ್ಟುತ್ತಾರೆ. ಸಿದ್ದು, ಚನ್ನಿ, ಜಾಖರ್ ಎಲ್ಲರೂ ಕಷ್ಟಪಟ್ಟಿದ್ದಾರೆ, ಇದರಿಂದ ಕಲಿತಿದ್ದಾರೆ," ಎಂದು ಹೇಳಿದ್ದಾರೆ. "ಪಂಜಾಬ್ ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧರಿಸಲು ನನ್ನಲ್ಲಿ ಹೇಳಲಾಯಿತು. ಆದರೆ ಇದು ಇದು ರಾಹುಲ್ ಗಾಂಧಿಯವರ ನಿರ್ಧಾರವಲ್ಲ ಪಂಜಾಬ್‌ನ ನಿರ್ಧಾರ," ಎಂದು ಕೂಡಾ ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

Recommended Video

      ವಿರಾಟ್ ಮಾತಿಗೆ ರೋಹಿತ್ ಏನಂದ್ರು: ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆದ ಮಾತು ಫುಲ್ ವೈರಲ್ | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+