ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅವೆಂಜರ್ಸ್' ವಿಡಿಯೋ ಬಳಸಿ ವಿಪಕ್ಷಗಳ ಮೇಲೆ ಕಾಂಗ್ರೆಸ್‌ ಗುರಿ!

|
Google Oneindia Kannada News

ಚಂಡಿಗಢ, ಜನವರಿ 25: ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಗೆ ಒಂದು ತಿಂಗಳ ಮೊದಲು, ಹಾಲಿವುಡ್ ಬ್ಲಾಕ್‌ಬಸ್ಟರ್‌ ಸಿನೆಮಾ ಅವೆಂಜರ್ಸ್‌ನ ಫೈಟಿಂಗ್‌ ದೃಶ್ಯವನ್ನು ತೋರಿಸುವ ವಿಡಿಯೋವನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಳ್ಳಲು ಬಳಕೆ ಮಾಡಿದೆ.

#CongressHiAyegi ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಸೋಮವಾರ ಪಂಜಾಬ್‌ ಕಾಂಗ್ರೆಸ್‌ ಅಧಿಕೃತ ಟ್ವಿಟ್ಟರ್‌ ಖಾತೆಯಿಂದ ಪೋಸ್ಟ್ ಮಾಡಲಾದ ವಿಡಿಯೋವು ಹಾಲಿವುಡ್ ಬ್ಲಾಕ್‌ಬಸ್ಟರ್ 'ಅವೆಂಜರ್ಸ್: ಇನ್ಫಿನಿಟಿ ವಾರ್' ನ ದೃಶ್ಯವನ್ನು ಚಿತ್ರಿಸುತ್ತದೆ. ವಿಡಿಯೋದಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ಥಾರ್ ಆಗಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಕ್ಯಾಪ್ಟನ್ ಅಮೇರಿಕ ಆಗಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬ್ರೂಸ್ ಬ್ಯಾನರ್ ಆಗಿ ತೋರಿಸಲಾಗಿದೆ.

 ಬಲಿ ಯತ್ನ: ಪಂಜಾಬ್‌ಗೆ ದ್ವೇಷದ ರಾಜಕಾರಣ ಒಳನುಗ್ಗುತ್ತಿದೆ ಎಂದ ಸಿಧು ಬಲಿ ಯತ್ನ: ಪಂಜಾಬ್‌ಗೆ ದ್ವೇಷದ ರಾಜಕಾರಣ ಒಳನುಗ್ಗುತ್ತಿದೆ ಎಂದ ಸಿಧು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ರನ್ನು 'ಏಲಿಯನ್ಸ್' ಎಂದು ತೋರಿಸಲಾಗಿದೆ. ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಮತ್ತು ಪಂಜಾಬ್ ಲೋಕ ಕಾಂಗ್ರೆಸ್ (ಪಿಎಲ್‌ಸಿ) ಅಧ್ಯಕ್ಷ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಶಿರೋಮಣಿ ಅಕಾಲಿದಳ (ಎಸ್‌ಎಡಿ) ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಕೂಡ ಅನ್ಯಗ್ರಹ ಜೀವಿಗಳೆಂದು ತೋರಿಸಲಾಗಿದೆ.

Punjab Poll: Congress Uses Avengers Clip to Target Opposition

ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ರನ್ನು ತನ್ನ ಸಹಚರರಾದ ಕ್ಯಾಪ್ಟನ್ ಅಮೇರಿಕಾ (ನವಜೋತ್ ಸಿಂಗ್ ಸಿಧು) ಮತ್ತು ಬ್ರೂಸ್ ಬ್ಯಾನರ್ (ರಾಹುಲ್ ಗಾಂಧಿ) ಜೊತೆಗೆ ಅನ್ಯ ಗ್ರಹದ ದಾಳಿಯನ್ನು ಹೇಗೆ ಹಿಮ್ಮೆಟ್ಟಿಸುತ್ತಾರೆ ಎಂಬುದನ್ನು ಈ ದೃಶ್ಯವು ತೋರಿಸುತ್ತದೆ.

 ದೇವಸ್ಥಾನದಲ್ಲಿ ಬಲಿ ಯತ್ನ, ಆರೋಪಿ ಬಂಧನ: ತನಿಖೆಗೆ ಆದೇಶಿಸಿದ ಸಿಎಂ ಚನ್ನಿ ದೇವಸ್ಥಾನದಲ್ಲಿ ಬಲಿ ಯತ್ನ, ಆರೋಪಿ ಬಂಧನ: ತನಿಖೆಗೆ ಆದೇಶಿಸಿದ ಸಿಎಂ ಚನ್ನಿ

ಕಾಂಗ್ರೆಸ್‌ ಟ್ವೀಟ್‌ ಏನು ಹೇಳುತ್ತದೆ?

ಈ 'ಅವೆಂಜರ್ಸ್' ಸಿನಿಮಾದ ವಿಡಿಯೋದಲ್ಲಿ ಎಡಿಂಟಿಂಗ್‌ ಮಾಡಿಕೊಂಡು ಚುನಾವಣಾ ಸಮರದ ಬಗ್ಗೆ ಹೇಳಿರುವ ಪಂಜಾಬ್‌ ಕಾಂಗ್ರೆಸ್ ಟ್ವೀಟ್‌ನಲ್ಲಿ, "ಪಂಜಾಬ್ ಮತ್ತು ಅದರ ಜನರ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವ ದುಷ್ಟ ಶಕ್ತಿಗಳ ಹಿಡಿತದಿಂದ ನಮ್ಮ ಪ್ರೀತಿಯ ರಾಜ್ಯವನ್ನು ಪಡೆದುಕೊಳ್ಳಲು ನಾವು ಏನು ಬೇಕಾದರೂ ಮಾಡುತ್ತೇವೆ," ಎಂದಿದೆ.

2018 ರಲ್ಲಿ ಅಕ್ರಮ ಮರಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿ ಸೋದರಳಿಯ ಭೂಪಿಂದರ್ ಸಿಂಗ್ ಅಲಿಯಾಸ್ ಹನಿ ಮೇಲೆ ಜಾರಿ ನಿರ್ದೇಶನಾಲಯದ ದಾಳಿಯ ಬಗ್ಗೆ ರಾಜಕೀಯ ಗಾಳಿ ಎದ್ದಿರುವ ನಡುವೆಯೇ ಕಾಂಗ್ರೆಸ್‌ನ ಈ ಪ್ರಚಾರ ವಿಡಿಯೋವು ಹೊರಬಂದಿದೆ. ಪಂಜಾಬ್‌ನ ವಿರೋಧ ಪಕ್ಷಗಳು ಈ ಪ್ರಕರಣದಲ್ಲಿ ಚರಣ್‌ಜೀತ್‌ ಸಿಂಗ್‌ ಚನ್ನಿಯೂ ಕೂಡಾ ಸಂಬಂಧ ಹೊಂದಿದ್ದಾರೆ ಎಂದು ಹೇಳಿಕೊಂಡಿದೆ. ಆದರೆ ಮುಖ್ಯಮಂತ್ರಿಗಳು ಚರಣ್‌ಜೀತ್‌ ಸಿಂಗ್‌ ಚನ್ನಿ ಮಾತ್ರ ಸೋದರಳಿಯ ಭೂಪಿಂದರ್ ಸಿಂಗ್‌ರ ಪ್ರಕರಣದಲ್ಲಿ ತನ್ನ ಸಂಬಂಧ ಯಾವುದೇ ಇಲ್ಲ ಎಂದಿದ್ದಾರೆ. ಈ ಇಡಿ ದಾಳಿಗಳು ಕೇಂದ್ರ ಸರ್ಕಾರದ ರಾಜಕೀಯ ಸೇಡಿನ ಕ್ರಮವಾಗಿದೆ. ಇದು ಚುನಾವಣೆಯ ಮೊದಲು ಒತ್ತಡ ಹೇರುವ ಮಾರ್ಗವಾಗಿದೆ ಎಂದು ಆರೋಪ ಮಾಡಿದ್ದಾರೆ.

ಪಂಜಾಬ್‌ನ ಎಲ್ಲಾ 117 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ನಡೆಯಲಿದೆ. ಮತಗಳ ಎಣಿಕೆ ಮತ್ತು ಫಲಿತಾಂಶಗಳ ಘೋಷಣೆ ಮಾರ್ಚ್ 10 ರಂದು ನಡೆಯಲಿದೆ. ಇನ್ನುಳಿದಂತೆ ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಈ ರಾಜ್ಯಗಳಲ್ಲಿಯೂ ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್‌ಇಂಡಿಯಾ ಸುದ್ದಿ)

English summary
Punjab Poll: Congress uses Avengers clip to target Opposition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X