Get Updates
Get notified of breaking news, exclusive insights, and must-see stories!

Breaking news: ಪಂಜಾಬ್‌ ಸಿಎಂ ಅಭ್ಯರ್ಥಿ ಘೋಷಣೆ ಮಾಡಿದ ರಾಹುಲ್‌ ಗಾಂಧಿ

ಚಂಡೀಗಢ, ಫೆಬ್ರವರಿ 06: ಕಾಂಗ್ರೆಸ್‌ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್‌ ಗಾಂಧಿ ಇಂದು ಮುಂದಿನ ವಿಧಾನಸಭೆ ಚುನಾವಣೆಗೆ ಪಂಜಾಬ್‌ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. ನಿರೀಕ್ಷೆಯಂತೆ ಹಾಲಿ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ.

ಫೆಬ್ರವರಿ 6 ರಂದು ಲುಧಿಯಾನದಲ್ಲಿ ತಮ್ಮ ವರ್ಚುವಲ್ ರ್‍ಯಾಲಿಯಲ್ಲಿ ರಾಹುಲ್ ಗಾಂಧಿಯವರು ಪಂಜಾಬ್ ವಿಧಾನಸಭಾ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. "ಕೆಲವು ನಾಯಕರು ಸಮಾಜಕ್ಕಾಗಿ ಹೋರಾಡುತ್ತಾರೆ, ಇತರ ನಾಯಕರು ತಮಗಾಗಿ ಮಾತ್ರ ಹೋರಾಡುತ್ತಾರೆ. ಕೆಲವೇ ದಿನಗಳಲ್ಲಿ ನಾಯಕನ ರಚನೆಯಾಗುವುದಿಲ್ಲ. ನಾಯಕರು ಹೋರಾಟಗಳಿಂದ ಹುಟ್ಟುತ್ತಾರೆ. ಸಿದ್ದು, ಚನ್ನಿ, ಜಾಖರ್ ಎಲ್ಲರೂ ಕಷ್ಟಪಟ್ಟಿದ್ದಾರೆ, ಇದರಿಂದ ಕಲಿತಿದ್ದಾರೆ," ಎಂದು ಹೇಳಿದ್ದಾರೆ.

"ಪಂಜಾಬ್ ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧರಿಸಲು ನನ್ನಲ್ಲಿ ಹೇಳಲಾಯಿತು. ಆದರೆ ಇದು ಇದು ರಾಹುಲ್ ಗಾಂಧಿಯವರ ನಿರ್ಧಾರವಲ್ಲ ಪಂಜಾಬ್‌ನ ನಿರ್ಧಾರ," ಎಂದು ಕೂಡಾ ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಇನ್ನು ಇದಕ್ಕೂ ಮುನ್ನ ಮಾತನಾಡಿದ್ದ ಪಂಜಾಬ್‌ ಕಾಂಗ್ರೆಸ್‌ ಘಟಕದ ಮುಖ್ಯಸ್ಥ, ಸಿಎಂ ಆಕಾಂಕ್ಷಿ ನವ್‌ಜೋತ್‌ ಸಿಂಗ್‌ ಸಿಧು, "ಇಂದು ಮುಖ್ಯಮಂತ್ರಿಯನ್ನು ಘೋಷಣೆ ಮಾಡುವ ಸುಸಂದರ್ಭ," ಎಂದು ಹೇಳಿದ್ದರು.

Punjab Poll: Charanjit Channi Will Be the Congress’ CM Candidate Announces Rahul Gandhi

"ಇದು ಎಲ್ಲ ಗೊಂದಲಗಳನ್ನು ನಿವಾರಣೆ ಮಾಡಿ, ಸಿಎಂ ಘೋಷಣೆ ಮಾಡುವ ಸಮಯವಾಗಿದೆ. ಯಾರು ಗೊಂದಲವನ್ನು ಹುಟ್ಟು ಹಾಕುತ್ತಾರೆ ಅವರು ಭಾರೀ ಬೆಲೆ ತೆರಬೇಕಾಗುತ್ತದೆ," ಎಂದು ಎಚ್ಚರಿಕೆಯನ್ನು ನೀಡಿದ್ದರು. ಈ ಬೆನ್ನಲ್ಲೇ ಎದ್ದು ಬಂದ ಚರಣ್‌ಜೀತ್‌ ಸಿಂಗ್‌ ಚನ್ನಿ, ನವಜೋತ್‌ ಸಿಂಗ್‌ ಸಿಧುರನ್ನು ಅಪ್ಪಿದ್ದರು.

ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್ (ಐವಿಆರ್‌ಎಸ್) ಮೂಲಕ ಈ ಸಮೀಕ್ಷೆ ನಡೆದಿದೆ. ಮೊಬೈಲ್ ಸಂಪರ್ಕ ಹೊಂದಿರುವ ಸುಮಾರು 1.5 ಕೋಟಿ ಮತದಾರರಿಗೆ ಐವಿಆರ್‌ಎಸ್ ಸಂದೇಶವನ್ನು ಕಳುಹಿಸಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಮತದಾರರಿಗೆ ಮೂರು ಆಯ್ಕೆಗಳನ್ನು ನೀಡಲಾಗಿದೆ. ಒಂದನೇ ಆಯ್ಕೆ ನವಜೋತ್ ಸಿಂಗ್ ಸಿಧು, ಎರಡನೇ ಆಯ್ಕೆ ಚರಣ್‌ಜೀತ್‌ ಸಿಂಗ್‌ ಚನ್ನಿ ಹಾಗೂ ಮೂರನೇ ಆಯ್ಕೆ ಮುಖ್ಯಮಂತ್ರಿ ಅಭ್ಯರ್ಥಿ ಬೇಡ ಎಂಬುವುದಾಗಿತ್ತು. ಇನ್ನು ಎಲ್ಲಾ 117 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು, ಎಐಸಿಸಿ ಮುಖಂಡರು ಹಾಗೂ ಸಮೀಕ್ಷಾ ತಂಡಗಳ ಮೂಲಕವೂ ಪ್ರತಿಕ್ರಿಯೆ ಕೇಳಲಾಗುತ್ತಿದೆ. ಈ ಸಮೀಕ್ಷೆಯಲ್ಲಿ ಹೆಚ್ಚಿನ ಜನರು ಚರಣ್‌ಜೀತ್‌ ಸಿಂಗ್‌ ಚನ್ನಿಗೆ ಮತ ನೀಡುವ ಮೂಲಕ ಕಾಂಗ್ರೆಸ್‌ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. (ಒನ್‌ಇಂಡಿಯಾ ಸುದ್ದಿ)

Recommended Video

      ವಿರಾಟ್ ಮಾತಿಗೆ ರೋಹಿತ್ ಏನಂದ್ರು: ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆದ ಮಾತು ಫುಲ್ ವೈರಲ್ | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+