Breaking; ಪಂಜಾಬ್ ಸಿಎಂ ಭಗವಂತ್ ಮಾನ್ ವಿವಾಹ, ಸಂಪ್ರದಾಯಗಳು ಆರಂಭ
ಚಂಡೀಗಢ, ಜುಲೈ 07; ಪಂಬಾಬ್ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ನಾಯಕ ಭಗವಂತ್ ಮಾನ್ ವಿವಾಹ ಸಮಾರಂಭ ಚಂಡೀಗಢದಲ್ಲಿ ನಡೆಯುತ್ತಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವಾರು ಎಎಪಿ ನಾಯಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.
ಚಂಡೀಗಢದಲ್ಲಿರುವ ಭಗವಂತ್ ಮಾನ್ ನಿವಾಸದಲ್ಲಿ ವಿವಾಹದ ಸಂಪ್ರದಾಯಗಳು ಗುರುವಾರ ಆರಂಭವಾಗಿವೆ. ಡಾ. ಗುರುಪ್ರೀತ್ ಕೌರ್ ಜೊತೆ ಭಗವಂತ್ ಮಾನ್ ವಿವಾಹ ನಡೆಯುತ್ತಿದೆ.
ಸರಳವಾಗಿ ವಿವಾಹ ಕಾರ್ಯಕ್ರಮ ನಡೆಯುತ್ತಿದೆ. ಕುಟುಂಬದವರು ಮತ್ತು ಆಪ್ತರು ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಆರು ವರ್ಷಗಳ ಹಿಂದೆ ವಿಚ್ಛೇಧನ ಪಡೆದಿದ್ದ ಮಾನ್ ಈಗ ಎರಡನೇ ವಿವಾಹವಾಗುತ್ತಿದ್ದಾರೆ.

ಭಗವಂತ್ ಮಾನ್ ಮೊದಲ ಪತ್ನಿ ಅಮೆರಿಕದಲ್ಲಿ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದಾರೆ. ಮಾರ್ಚ್ 16ರಂದು ಭಗವಂತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕಾರ್ಯಕ್ರಮಕ್ಕೆ ಇಬ್ಬರೂ ಮಕ್ಕಳು ಆಗಮಿಸಿದ್ದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಎಎಪಿ ನಾಯಕ ರಾಘವ್ ಚಡ್ಡಾ ಸೇರಿದಂತೆ ಹಲವಾರು ಎಎಪಿಯ ನಾಯಕರು ಭಗವಂತ್ ಮಾನ್ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.
48 ವರ್ಷದ ಭಗವಂತ್ ಮಾನ್ ಡಾ. ಗುರುಪ್ರೀತ್ ಕೌರ್ ಜೊತೆ ವಿವಾಹವಾಗುತ್ತಿದ್ದಾರೆ. ಸಿಖ್ ಸಂಪ್ರದಾಯದಂತೆ ವಿವಾಹದ ಸಂಪ್ರದಾಯಗಳು ಆರಂಭವಾಗಿವೆ. 2015ರಲ್ಲಿ ಭಗವಂತ್ ಮಾನ್ ಮೊದಲ ಪತ್ನಿಗೆ ವಿಚ್ಛೇಧನ ನೀಡಿದ್ದರು.
32 ವರ್ಷದ ಡಾ. ಗುರುಪ್ರೀತ್ ಕೌರ್ ಹರ್ಯಾಣ ರಾಜ್ಯದ ಕುರಕ್ಷೇತ್ರ ಜಿಲ್ಲೆಯವರು. ತಂದೆ ಇಂದ್ರಜಿತ್ ಸಿಂಗ್ ನಾಥ್ ರೈತರು. ಈ ಹಿಂದೆ ಅವರು ಗ್ರಾಮದ ಸರ್‌ಪಂಚ್ ಆಗಿ ಕಾರ್ಯ ನಿರ್ವಹಣೆ ಮಾಡಿದ್ದರು.
ಡಾ. ಗುರುಪ್ರೀತ್ ಕೌರ್ 2013ರಲ್ಲಿ ಎಂಬಿಬಿಎಸ್ ಕೋರ್ಸ್‌ಗೆ ಸೇರಿದ್ದರು. 2018ರಲ್ಲಿ ಕೋರ್ಸ್ ಪೂರ್ಣಗೊಳಿಸಿದ್ದಾರೆ. ಫಿಜಿಷಿಯನ್ ಆಗಿ ಅವರು ಪ್ರಸ್ತುತ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
Chandigarh | Wedding rituals underway of Punjab CM Bhagwant Mann with Dr. Gurpreet Kaur pic.twitter.com/4QjnNsRXtg
— ANI (@ANI) July 7, 2022












Click it and Unblock the Notifications