ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NewsX ಚುನಾವಣಾಪೂರ್ವ ಸಮೀಕ್ಷೆ: ಪಂಜಾಬ್‌ನಲ್ಲಿ ಕಾಂಗ್ರೆಸ್ 'ಕೈ' ತಪ್ಪಲಿದೆ ಅಧಿಕಾರ

|
Google Oneindia Kannada News

ಚಂಡೀಗಢ, ಡಿಸೆಂಬರ್ 22: ಪಂಜಾಬ್ ವಿಧಾನಸಭೆ ಚುನಾವಣೆ 2022ರಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವ ಮುನ್ಸೂಚನೆ ಸಿಕ್ಕಿದೆ. ಪೋಲ್ ಸ್ಟ್ರಾಟ್-ನ್ಯೂಸ್ ಎಕ್ಸ್ ನಡೆಸಿರುವ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಆಮ್ ಆದ್ಮಿ ಪಕ್ಷ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಲಿದೆ ಎಂದು ಹೇಳಿದೆ.

NewsX ಚುನಾವಣಾಪೂರ್ವ ಸಮೀಕ್ಷೆ: ಗೋವಾದಲ್ಲಿ ಬಿಜೆಪಿಗೆ ಗದ್ದುಗೆNewsX ಚುನಾವಣಾಪೂರ್ವ ಸಮೀಕ್ಷೆ: ಗೋವಾದಲ್ಲಿ ಬಿಜೆಪಿಗೆ ಗದ್ದುಗೆ

ಪಂಜಾಬ್ ವಿಧಾನಸಭೆ 117 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಶೇ.35.20ರಷ್ಟು ಮತಗಳೊಂದಿಗೆ 40 ರಿಂದ 45 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ. ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ ಪಂಜಾಬ್ ವರೆಗೆ ಹರಡಲಿದೆ. ಪಂಜಾಬ್‌ನಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿರುವ ಆಮ್ ಆದ್ಮಿ ಪಕ್ಷವು ಶೇ.38.83ರಷ್ಟು ಮತಗಳೊಂದಿಗೆ 47 ರಿಂದ 52 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಅನ್ನು ಕಡಿಮೆ ಅಂತರದಲ್ಲಿ ಸೋಲಿಸುತ್ತದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯು ಭವಿಷ್ಯ ನುಡಿದಿದೆ.

 Polstrat-NewsX Pre-Poll Survey: Who’s winning Punjab Assembly Election?

ಕಾಂಗ್ರೆಸ್ ಹಾಗೂ ಆಪ್ ಹೊರತಾಗಿ ಶಿರೋಮಣಿ ಅಕಾಲಿ ದಳವು ಶೇ.21.01ರಷ್ಟು ಮತಗಳೊಂದಿಗೆ 22 ರಿಂದ 26 ಸ್ಥಾನಗಳನ್ನು ಗೆಲ್ಲಲಿದೆ. ಆದರೆ ರಾಷ್ಟ್ರೀಯ ಪಕ್ಷ ಎನಿಸಿಕೊಂಡಿರುವ ಬಿಜೆಪಿ ಶೇ.2.3ರಷ್ಟು ಮತಗಳೊಂದಿಗೆ 1 ರಿಂದ 2 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯು ಭವಿಷ್ಯ ನುಡಿದಿದೆ.

ಪಂಜಾಬ್‌ನಲ್ಲಿ ಚುನಾವಣಾ ವಿಷಯಗಳೇನು?:
Polstrat-NewsX ಪೂರ್ವ-ಚುನಾವಣೆ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ಅನ್ನು ತೊರೆಯುವ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ನಿರ್ಧಾರವನ್ನು ಶೇ.35.70ರಷ್ಟು ಜನರು ವಿರೋಧಿಸಿದ್ದರೆ, ಶೇ.27.50ರಷ್ಟು ಮಂದಿ ಬೆಂಬಲಿಸಿದ್ದಾರೆ.
ಇದರ ಹೊರತಾಗಿ ರಾಜ್ಯದಲ್ಲಿ ಉದ್ಯೋಗ, ಕೃಷಿ ಕಾಯ್ದೆಗಳು, ಕನಿಷ್ಠ ಬೆಂಬಲ ಬೆಲೆ, ವಿದ್ಯುತ್, ನೀರು, ರಸ್ತೆ, ಮಾಫಿಯಾ ಮತ್ತು ಮಾದಕ ವಸ್ತುಗಳು ಪ್ರಮುಖ ಚುನಾವಣಾ ವಿಷಯಗಳಾಗಿವೆ. ಶೇ.39.20ರಷ್ಟು ಜನರ ಪ್ರಕಾರ ಉದ್ಯೋಗವೇ ಪ್ರಮುಖ ವಿಷಯ ಆಗಿರುತ್ತದೆ. ಶೇ.19.20ರಷ್ಟು ಮತದಾರರು ಮಾತ್ರ ಮುಂಬರುವ ಚುನಾವಣೆಯಲ್ಲಿ ವಿವಾದಿತ ಕೃಷಿ ಕಾಯ್ದೆಗಳು ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು ಗಮನದಲ್ಲಿ ಇಟ್ಟುಕೊಂಡಿರುತ್ತಾರೆ ಎಂದು ತಿಳಿದು ಬಂದಿದೆ.
ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ಕ್ರಮವನ್ನು ಶೇ.59.90ರಷ್ಟು ಮಂದಿ ಬೆಂಬಲಿಸಿದರೆ, ಶೇ.14.30ರಷ್ಟು ಜನರು ವಿರೋಧಿಸಿದ್ದಾರೆ.

ಮುಂದಿನ ಮುಖ್ಯಮಂತ್ರಿ ಯಾರು?:
ಪಂಜಾಬ್‌ನಲ್ಲಿ ಮೂರರಲ್ಲಿ ಒಬ್ಬರು ಹೊಸಬರಿಗೆ ಮುಖ್ಯಮಂತ್ರಿ ಸ್ಥಾನವನ್ನು ಸಿಗಬೇಕು ಎಂದು ಬಯಸುತ್ತಿದ್ದಾರೆ. 2022ರ ಚುನಾವಣೆ ನಂತರದಲ್ಲಿ ಹೊಸ ಮುಖಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಶೇ.33.60ರಷ್ಟು ಜನರು ಎದುರು ನೋಡುತ್ತಿದ್ದಾರೆ. ಇದರ ಹೊರತಾಗಿ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಪರ ಶೇ.16.70, ನವಜೋತ್ ಸಿಂಗ್ ಸಿಧು ಪರ ಶೇ.9.80ರಷ್ಟು, ಚರಂಜಿತ್ ಸಿಂಗ್ ಚನ್ನಿ ಪರ ಶೇ.22.20ರಷ್ಟು ಮತ್ತು ಸುಖ್ಬೀರ್ ಸಿಂಗ್ ಬಾದಲ್ ಪರ ಶೇ.17.70ರಷ್ಟು ಜನರು ಮತ ನೀಡಿದ್ದಾರೆ.

English summary
Polstrat-NewsX Pre-Poll Survey: Who’s winning Punjab Assembly Election?. Polstrat-NewsX.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X