ಪಂಜಾಬ್ ಸ್ಥಳೀಯ ಚುನಾವಣೆ; ಇತಿಹಾಸ ಸೃಷ್ಟಿಸಿದ ಕಾಂಗ್ರೆಸ್; ಬಿಜೆಪಿಗೆ ಮುಖಭಂಗ

ಚಂಡೀಗಢ, ಫೆಬ್ರವರಿ 17: ಪಂಜಾಬ್ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಈ ಬಾರಿ ದಾಖಲೆಯನ್ನೇ ಬರೆದಿದೆ. ಏಳು ಪುರಸಭೆಗಳಲ್ಲಿ ಆರರಲ್ಲಿ ಅಧಿಕಾರ ಹಿಡಿದಿದ್ದು, ಬಿಜೆಪಿಯನ್ನು ಹಿಂದಿಕ್ಕಿ ಭರ್ಜರಿ ಜಯ ಪಡೆದುಕೊಂಡಿದೆ.

ಮೋಗಾ, ಹೋಷಿಯಾರ್‌ಪುರ, ಕಾಪುರ್ತಲ, ಅಬೋಹರ್, ಪಥನ್‌ಕಾಟ್, ಬತಿಂದಾ ಪುರಸಭೆಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಬಿಜೆಪಿ ಹಿನ್ನಡೆ ಸಾಧಿಸಿದ್ದು, ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಯ ಪರಿಣಾಮ ಇದು ಎನ್ನಲಾಗಿದೆ.

ಬತಿಂದಾದಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಇತಿಹಾಸವೇ ಸೃಷ್ಟಿಯಾಗಿದೆ. 53 ವರ್ಷಗಳಲ್ಲಿ ಇದೇ ಮೊದಲ ಬಾರಿ ಬತಿಂದಾ ಕಾಂಗ್ರೆಸ್ ಪಕ್ಷದ ಮೇಯರ್ ಪಡೆದುಕೊಂಡಿದೆ. ಬತಿಂದಾ ಲೋಕಸಭಾ ಕ್ಷೇತ್ರವನ್ನು ಶಿರೋಮಣಿ ಅಕಾಲಿ ದಳದ ಹರಸಿಮ್ರತ್ ಬಾದಲ್ ಪ್ರತಿನಿಧಿಸಿದ್ದು, ಈಚೆಗೆ ಬಿಜೆಪಿಯಿಂದ ಎಸ್‌ಎಡಿ ಮೈತ್ರಿ ಕಳಚಿಕೊಂಡಿತ್ತು. ಕಾಂಗ್ರೆಸ್ ಶಾಸಕ ಹಾಗೂ ರಾಜ್ಯ ಹಣಕಾಸು ಸಚಿವ ಮನಪ್ರೀತ್ ಸಿಂಗ್ ಬಾದಲ್ ಬತಿಂದಾ ಪ್ರತಿನಿಧಿಸಿದ್ದರು.

Congress Created History In Punjab Urban Body Polls

ಸದ್ಯದ ಬೆಳವಣಿಗೆಯಲ್ಲಿ ಬಿಜೆಪಿಗೆ ಪಂಜಾಬ್‌ನಲ್ಲಿ ಭಾರೀ ಹಿನ್ನಡೆ ದೊರೆತಿದೆ.

ಫೆಬ್ರವರಿ 14ರಂದು 109 ನಗರಸಭೆ, ನಗರ ಪಂಚಾಯಿತಿ ಹಾಗೂ ಏಳು ಪುರಸಭೆಗಳಿಗೆ ಚುನಾವಣೆ ನಡೆದಿದ್ದು, 71.39% ಮತದಾನ ನಡೆದಿತ್ತು. ಕೆಲವು ಬೂತ್‌ಗಳಲ್ಲಿ ಮಂಗಳವಾರ ಮರುಮತದಾನ ನಡೆದಿತ್ತು. 9,222 ಸದಸ್ಯರಲ್ಲಿ ಕಾಂಗ್ರೆಸ್ 2,037 ಸದಸ್ಯರು ಚುನಾವಣೆಗೆ ಸ್ಪರ್ಧಿಸಿದ್ದರು. ಬಿಜೆಪಿ 1003 ಸದಸ್ಯರೊಂದಿಗೆ ಕಣಕ್ಕೆ ಇಳಿದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+