ಚಂಡೀಗಢವನ್ನು ತಕ್ಷಣ ಪಂಜಾಬ್‌ಗೆ ವರ್ಗಾಯಿಸಲು ಸಿಎಂ ಮಾನ್ ನಿರ್ಣಯ ಮಂಡನೆ
ಚಂಡೀಗಢ, ಏಪ್ರಿಲ್ 1: ಚಂಡೀಗಢವನ್ನು ತಕ್ಷಣವೇ ಪಂಜಾಬ್‌ಗೆ ವರ್ಗಾವಣೆ ಮಾಡಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಪಂಜಾಬ್ ರಾಜ್ಯ ವಿಧಾನಸಭೆಯ ಒಂದು ದಿನದ ವಿಶೇಷ ಅಧಿವೇಶನದಲ್ಲಿ ನಿರ್ಣಯವನ್ನು ಮಂಡನೆ ಮಾಡಿದ್ದಾರೆ.
ಚಂಡೀಗಢವು ಪಂಜಾಬ್ ಮತ್ತು ಹರಿಯಾಣದ ಜಂಟಿ ರಾಜಧಾನಿಯಾಗಿದೆ. ಚಂಡೀಗಢದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದ ಸೇವಾ ನಿಯಮಗಳು ಅನ್ವಯ ಆಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ ಮಾಡಿದ ಬೆನ್ನಲ್ಲೇ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಈ ನಿರ್ಣಯವನ್ನು ಮಂಡಿಸಿದ್ದಾರೆ.
ಸಂವಿಧಾನದಲ್ಲಿ ಮಂಡನೆ ಮಾಡಿರುವ ಫೆಡರಲಿಸಂನ ತತ್ವಗಳಿಗೆ ಗೌರವ ನೀಡಬೇಕು ಎಂದು ಇಂದು ಪಂಜಾಬ್ ರಾಜ್ಯ ವಿಧಾನಸಭೆಯ ಅಧಿವೇಶನದಲ್ಲಿ ನಿರ್ಣಯವನ್ನು ಮಂಡನೆ ಮಾಡುತ್ತಾ ಹೇಳಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಚಂಡೀಗಢದ ಆಡಳಿತದ ಸಮತೋಲನ ಮತ್ತು ಇತರ ಸಾಮಾನ್ಯ ಆಸ್ತಿಗಳಿಗೆ ಭಂಗ ತರುವಂತಹ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದಿದ್ದಾರೆ.

ಭಗವಂತ್ ಮಾನ್ ನಿರ್ಣಯದಲ್ಲಿ ಏನಿದೆ?
"ಪಂಜಾಬ್ ಮರುಸಂಘಟನೆ ಕಾಯಿದೆ, 1966ರ ಮೂಲಕ ಪಂಜಾಬ್ ಅನ್ನು ಮರುಸಂಘಟನೆ ಮಾಡಬೇಕು. ಇದರಲ್ಲಿ ಪಂಜಾಬ್ ರಾಜ್ಯವನ್ನು ಹರಿಯಾಣ ರಾಜ್ಯವಾಗಿ ಮರುಸಂಘಟಿಸಲಾಯಿತು. ಚಂಡೀಗಢದ ಕೇಂದ್ರಾಡಳಿತ ಪ್ರದೇಶ ಮತ್ತು ಪಂಜಾಬ್‌ನ ಕೆಲವು ಭಾಗಗಳನ್ನು ಅಂದಿನ ಕೇಂದ್ರಾಡಳಿತ ಪ್ರದೇಶವಾದ ಹಿಮಾಚಲ ಪ್ರದೇಶಕ್ಕೆ ನೀಡಲಾಯಿತು," ಎಂದು ನಿರ್ಣಯದಲ್ಲಿ ಉಲ್ಲೇಖ ಮಾಡಲಾಗಿದೆ.
ನಿರ್ಣಯವನ್ನು ಓದಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಸೌಹಾರ್ದತೆ ಕಾಪಾಡಲು ಮತ್ತು ಜನರ ಭಾವನೆಗಳನ್ನು ಗಣನೆಗೆ ತೆಗೆದುಕೊಂಡು ಚಂಡೀಗಢವನ್ನು ತಕ್ಷಣವೇ ಪಂಜಾಬ್‌ಗೆ ವರ್ಗಾಯಿಸಲು ಕೇಂದ್ರ ಸರ್ಕಾರಕ್ಕೆ ವಿಷಯ ಪ್ರಸ್ತಾಪಿಸಲು ಈ ಸದನವು ಮತ್ತೊಮ್ಮೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ ಎಂದರು.

ಪಂಜಾಬ್ ಮತ್ತು ಹರಿಯಾಣದ ಅಧಿಕಾರಿಗಳು ಯಾವಾಗಲೂ 60:40 ಅನುಪಾತದಲ್ಲಿ ನಿರ್ವಹಣೆ ಮಾಡಲಾಗುತ್ತದೆ. ಆದರೆ, ಇತ್ತೀಚೆಗೆ ಕೇಂದ್ರ ಸರ್ಕಾರ ಚಂಡೀಗಢಕ್ಕೆ ಹೊರಗಿನ ಅಧಿಕಾರಿಗಳನ್ನು ನಿಯೋಜನೆ ಮಾಡಿದೆ. ಚಂಡೀಗಢ ಆಡಳಿತದ ನೌಕರರಿಗೆ ಕೇಂದ್ರ ನಾಗರಿಕ ಸೇವಾ ನಿಯಮಗಳನ್ನು ಪರಿಚಯಿಸಿದೆ. ಇದು ಹಿಂದಿನ ತಿಳುವಳಿಕೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಈ ನಿರ್ಣಯದಲ್ಲಿ ಉಲ್ಲೇಖ ಮಾಡಲಾಗಿದೆ.












Click it and Unblock the Notifications