ಹೆಂಡತಿಗೆ ಮೋಸ ಮಾಡಿದ ಗಂಡಂದಿರ ವಿರುದ್ಧ ಸಮರ ಸಾರಿರುವ ಅಧಿಕಾರಿ

ಚಂಡೀಘಡ, ಜನವರಿ 02: ಹೆಂಡತಿಗೆ ಮೋಸ ಮಾಡಿ ಪರಾರಿಯಾಗಿರುವ ಗಂಡಂದಿರ ವಿರುದ್ಧ ಸರ್ಕಾರಿ ಅಧಿಕಾರಿಯೊಬ್ಬರು ಸಮರ ಸಾರಿದ್ದಾರೆ.

ಮದುವೆಯಾಗಿ ವಿದೇಶಕ್ಕೆ ಹೋಗಿಬರುತ್ತೇನೆಂದು ನಂಬಿಸಿ ಸಂಪರ್ಕ ಕಡಿದುಕೊಂಡಿರುವ ಮೋಸಗಾರ ಗಂಡಸರ ವಿರುದ್ಧ ಸಮರ ಸಾರಿರುವ ಹರಿಯಾಣಾ ರಾಜ್ಯದ ಅಧಿಕಾರಿಯೊಬ್ಬರು ಹೀಗೆ ಹೆಂಡತಿಯರಿಗೆ ಮೋಸ ಮಾಡಿ ಪರಾರಿಯಾಗಿರುವವರ ಪಾಸ್‌ಪೋರ್ಟ್ ಅನ್ನು ರದ್ದು ಮಾಡುತ್ತಿದ್ದಾರೆ. ಇದನ್ನು ಇವರು ಸ್ವಂತ ಆಸಕ್ತಿಯಿಂದ ಮಾಡುತ್ತಿದ್ದಾರೆ.

ಚಂಡೀಘಡದ ಪಾಸ್‌ಪೋರ್ಟ್‌ ಕಚೇರಿಯ ಅಧಿಕಾರಿ ಸಿಬಾಶ್ ಕಬಿರಾಜ್ ಹೀಗೆ ತಮ್ಮ ಹೆಂಡತಿಯರಿಗೆ ಮೋಸ ಮಾಡಿ ವಿದೇಶಕ್ಕೆ ಪರಾರಿಯಾದ ಹರಿಯಾಣದ ಗಂಡಸರಿಗೆ ದುಸ್ವಪ್ನವಾಗಿದ್ದಾರೆ. ಅಷ್ಟೆ ಅಲ್ಲ, ಹೀಗೆ ಗಂಡಂದಿರಿಂದ ಮೋಸ ಹೋದ ಹೆಣ್ಣು ಮಕ್ಕಳು ಈ ಬಗ್ಗೆ ಅರಿವು ಮೂಡಿಸಲು, ಮೋಸ ಹೋದ ಹೆಣ್ಣುಮಕ್ಕಳಿಗೆ ಸಾಂತ್ವಾಸ ತುಂಬುವಂತೆಯೂ ಮಾಡಿದ್ದಾರೆ.

A Officer Helping Women Who Left By Abandoned By Their Husband

ಯಾರದ್ದೇ ಆಗಲಿ ಪಾಸ್‌ಪೋರ್ಟ್‌ ರದ್ದು ಮಾಡಲು ಕೇಂದ್ರ ಸರ್ಕಾರದ ಅನುಮತಿ ಬೇಕಾಗುತ್ತದೆ. ಅದಕ್ಕೆ ಸಾಕಷ್ಟು ನಿಯಮಗಳಿವೆ. ಪಾಸ್‌ಪೋರ್ಟ್‌ ರದ್ದು ಸುಲಭವಲ್ಲ, ಹಾಗಾಗಿ ಅಧಿಕಾರಿ ಕಬಿರಾಜ್, ಮಹಿಳೆಯರಿಗೆ ಒಂದು ಕಂಪ್ಯೂಟರ್ ಮತ್ತು ಪ್ರಿಂಟರ್ ಕೊಟ್ಟು ಕೂರಿಸಿ ಯಾರಿಗೆ ದೂರು ನೀಡಿ ಹೇಗೆ ಒತ್ತಡ ಹೇರಿದರೆ ಮೋಸ ಮಾಡಿ ಓಡಿ ಹೋಗಿರುವ ಗಂಡನ ಪಾಸ್‌ಪೋರ್ಟ್‌ ರದ್ದಾಗುತ್ತದೆ ಎಂದು ಮಾಹಿತಿ ನೀಡುತ್ತಾರೆ. ಪಾಸ್‌ಪೋರ್ಟ್‌ ಆಫೀಸ್‌ನಲ್ಲಿರುವ ಇತರ ಮಹಿಳೆಯರು (ಗಂಡನಿಂದ ಮೋಸಹೋದವರು) ಮಹಿಳೆಗೆ ಸಹಾಯ ಮಾಡುತ್ತಾರೆ.

ಕಬಿರಾಜ್ ಮಾರ್ಗದರ್ಶನದಲ್ಲಿ ಮಹಿಳೆಯರು ಸುಮಾರು 400 ಮಂದಿಯ ಪಾಸ್‌ಪೋರ್ಟ್ ರದ್ದು ಮಾಡಿಸಿದ್ದಾರೆ. 5000 ಕ್ಕೂ ಹೆಚ್ಚು ಮಹಿಳೆಯರು ತಮ್ಮ ಗಂಡಿಂದಿರುವ ತಮ್ಮನ್ನು ತ್ಯಜಿಸಿರುವುದಾಗಿ ವಿದೇಶಾಂಗ ಕಾರ್ಯಾಲಯಕ್ಕೆ ದೂರು ಸಹ ಸಲ್ಲಿಸಿದ್ದಾರೆ.

ಕೆಲಸಕ್ಕಾಗಿ ವಿದೇಶಕ್ಕೆ ಹಾರುವ ಛಾಳಿ ಹರಿಯಾಣದಲ್ಲಿ ಹೆಚ್ಚಿದೆ, ಪಂಜಾಬ್‌ ನಲ್ಲೂ ಹೆಚ್ಚಿದೆ. ಹಾಗಾಗಿ ವರ್ಷಕ್ಕೆ ಸಾವಿರಾರು ಮಂದಿ ಇಲ್ಲಿ ಮದುವೆಯಾಗಿ ವರದಕ್ಷಿಣೆ ಹಣದಲ್ಲಿ ವಿದೇಶಕ್ಕೆ ಹಾರಿಕೊಳ್ಳುತ್ತಾರೆ. ನಂತರ ಪತ್ನಿಯರೊಂದಿಗೆ ಸಂಪರ್ಕ ಕಡಿದುಕೊಳ್ಳುತ್ತಾರೆ.

ಪ್ರತಿ ದಿನ ಇಂಥಹಾ ದೂರುಗಳು ಬರಲು ಪ್ರಾರಂಭವಾದ ಮೇಲೆ ಕಬಿರಾಜ್ ಅವರು ಮಹಿಳೆಯರಿಗೆ ಪಾಸ್‌ಪೋರ್ಟ್‌ ರದ್ದಿನ ನಿಯಮ ತಿಳಿಸಿ, ಕೆಲವು ಸಂತ್ರಸ್ತೆಯರಿಗೆ ತರಬೇತಿ ನೀಡಿ ಉಳಿದವರಿಗೆ ಮಾರ್ಗದರ್ಶನ ಮಾಡುವಂತೆ ಮಾಡಿ, ಪಾಸ್‌ಪೋರ್ಟ್‌ ಆಫೀಸ್‌ನಲ್ಲಿಯೇ ಇವರಿಗೆ ಸ್ಥಳಾವಕಾಶ ಸಹ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+