ಅಕ್ರಮ ಸಂಬಂಧ:ಪತಿಯ ಆತ್ಮಹತ್ಯೆಗೆ ಕಾರಣಳಾದ ಪತ್ನಿಯ ಬಂಧನ

ಚಾಮರಾಜನಗರ, ಮಾರ್ಚ್ 26: ಪರಪುರುಷನ ಜತೆ ಅಕ್ರಮ ಸಂಬಂಧ ಹೊಂದುವ ಮೂಲಕ ಪತಿಯ ಆತ್ಮಹತ್ಯೆಗೆ ಕಾರಣಳಾಗಿದ್ದ ಪತ್ನಿಯನ್ನು ಬಂಧಿಸಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ತಿಮ್ಮರಾಜಿಪುರ ಗ್ರಾಮದಲ್ಲಿ ನಡೆದಿದೆ. ತಿಮ್ಮರಾಜೀಪುರ ಗ್ರಾಮದ ನಿವಾಸಿ ಕೆಂಪಲಿಂಗೇಗೌಡ ಎಂಬಾತನ ಪತ್ನಿ ರಾಜೇಶ್ವರಿ ಎಂಬಾಕೆಯೇ ಬಂಧಿತ ಆರೋಪಿ.

ಈಕೆಯ ಪತಿ ಕೆಂಪಲಿಂಗೇಗೌಡ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದನು. ಈ ನಡುವೆ ಸಾಲ ಮಾಡಿ ಮನೆಯನ್ನು ನಿರ್ಮಿಸಿದ್ದನು. ಮಕ್ಕಳಿಬ್ಬರು ಹೊರಗೆ ಕೆಲಸ ಮಾಡಿಕೊಂಡಿದ್ದರು. ಆದರೆ ಪತಿ-ಪತ್ನಿ ನಡುವೆ ಹೊಂದಾಣಿಕೆಯಿರಲಿಲ್ಲ ಎನ್ನಲಾಗಿದೆ.

ಇದಕ್ಕೆ ಆಕೆ ವ್ಯಕ್ತಿಯೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದೇ ಕಾರಣ ಎಂದು ಹೇಳಲಾಗಿದ್ದು, ಈ ವಿಚಾರಕ್ಕಾಗಿ ಆಗಾಗ್ಗೆ ಜಗಳ ನಡೆಯುತ್ತಿತ್ತು. ಅಕ್ರಮ ಸಂಬಂಧ ಹೊಂದಿದ ವಿಚಾರಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ನಡೆಸಿ ಪರಪುರುಷನ ವ್ಯಕ್ತಿಯೊಂದಿಗಿನ ಸಂಬಂಧವನ್ನು ಬಿಡುವಂತೆ ತಾಕೀತು ಮಾಡಲಾಗಿತ್ತು. ಆದರೂ ತಲೆಕೆಡಿಸಿಕೊಳ್ಳದ ರಾಜೇಶ್ವರಿ ಆತನೊಂದಿಗೆ ಮನೆಯಿಂದ ಹೊರಗೆ ಹೋಗಿ ಬಂದಿದ್ದಳು.

ಈ ಬಗ್ಗೆ ವಿಚಾರಿಸಿದಾಗ ಪತಿಯಿಂದ ನನಗೆ 3 ಲಕ್ಷ ರೂ. ಜೀವನಾಂಶ ಕೊಡಿಸಿ, ನಾನು ಅವನ ಜತೆ ಹೋಗುತ್ತೇನೆ ಎಂದು ಹೇಳಿದ್ದಳು. ಇದಕ್ಕೆ ಪತಿ ಈಗಾಗಲೇ ಮನೆ ಕಟ್ಟಲು ಸಾಲ ಮಾಡಿದ್ದು ಅದನ್ನು ತೀರಿಸಲಾಗದೆ ಒದ್ದಾಡುತ್ತಿದ್ದೇವೆ. ನಿನಗೆ 3 ಲಕ್ಷ ರೂ. ಎಲ್ಲಿಂದ ಕೊಡಲಿ ಎಂದು ಮರುತ್ತರ ನೀಡಿದ್ದರು. ಆಗ ಮನೆ ಮಾರಿ ಹಣ ಕೊಡುವಂತೆ ಕೇಳಿದ್ದಳು.

Wife was reason of her husband death

ಇದಕ್ಕೆ ಒಪ್ಪದಿದ್ದಾಗ ಆತನನ್ನು ಹೀನಾಯವಾಗಿ ನಿಂದಿಸಿದ್ದಳು. ಇದರಿಂದ ಬೇಸತ್ತ ಪತಿ ಕೆಂಪಲಿಂಗೇಗೌಡ ಮಾ.23ರಂದು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು.

ಆತ್ಮಹತ್ಯೆಗೆ ಸಂಬಂಧಿಸಿದಂತೆ ಪುತ್ರ ರವಿ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ತಮ್ಮ ತಾಯಿ ರಾಜೇಶ್ವರಿಯು ಕೆಂಪನಪಾಳ ಗ್ರಾಮದ ಲಿಂಗರಾಜು ಎಂಬುವವನ ಜತೆ ಅಕ್ರಮ ಸಂಬಂಧ ಹೊಂದಿದ್ದೇ ತಂದೆಯ ಆತ್ಮಹತ್ಯೆಗೆ ಕಾರಣ ಎಂದು ದೂರು ನೀಡಿದ್ದನು.

ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ರಾಜೇಶ್ವರಿಯನ್ನು ಬಂಧಿಸಿ ಆಕೆಯ ಪ್ರಿಯಕರ ಲಿಂಗರಾಜು ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+