Get Updates
Get notified of breaking news, exclusive insights, and must-see stories!

Srinivasa Prasad: ವಿ.ಶ್ರೀನಿವಾಸ ಪ್ರಸಾದ್ ಅಂತಿಮ ದರ್ಶನ ಎಲ್ಲಿ? ಬೆಂಬಲಿಗರು, ಅಭಿಮಾನಿಗಳು ಹೇಳೋದೇನು?

ಚಾಮರಾಜನಗರ, ಏಪ್ರಿಲ್‌, 29: ಗಡಿಜಿಲ್ಲೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ, ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್ (76) ಅವರು ಯೋಸಹಜ ಖಾಯಿಲೆ ಹಿನ್ನೆಲೆ ಭಾನುವಾರ ತಡರಾತ್ರಿ ನಿಧನರಾಗಿದ್ದು, ಇಂದು ಅವರ ಅಂತಿಮ ದರ್ಶನಕ್ಕೆ ಚಾಮರಾಜನಗರದಲ್ಲೇ ವ್ಯವಸ್ಥೆ ಮಾಡಬೇಕೆಂದು ಬೆಂಬಲಿಗರು, ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಈ ಸಂಬಂಧ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ನಿವಾಸಕ್ಕೆ ತೆರಳಿ ಮನವಿ ಮಾಡಿರುವ ಅಭಿಮಾನಿಗಳು ಪ್ರಸಾದ್ ಪಾರ್ಥಿವ ಶರೀರವನ್ನು ಚಾಮರಾಜನಗರಕ್ಕೆ ತಂದು ಇಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಬೇಕು ಎಂದು ಕೋರಿದ್ದಾರೆ.

Where is Srinivasa Prasad s last Respect What did supporters and fans say

ಚಾಮರಾಜನಗರದಲ್ಲಿ ಅವರು ಸುದೀರ್ಘ ರಾಜಕಾರಣ ಮಾಡಿದ್ದಾರೆ, ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ 6 ಬಾರಿ ಸಂಸದರಾಗಿದ್ದಾರೆ. ಆ ಕಾರಣದಿಂದ, ಅವರ ಅಂತಿಮ ದರ್ಶನಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಬೇಕು, ಈ ಬಗ್ಗೆ ಡಿಸಿ ಅವರಿಗೆ ಮನವಿ ಮಾಡಲಾಗಿದ್ದು, ಅವರ ಕುಟುಂಬದ ಜೊತೆ ಮಾತನಾಡುವುದಾಗಿ ಹೇಳಿದ್ದಾರೆ ಎಂದು ದಲಿತ ಮುಖಂಡ ಮಂಜುನಾಥ್ ತಿಳಿಸಿದರು.

ಇಡೀ ಭಾರತದಲ್ಲಿ ದಲಿತ ಸೂರ್ಯ, ಸ್ವಾಭಿಮಾನಿ ರಾಜಕಾರಣಿ ಎಂದು ಹೆಸರಾಗಿದ್ದ ಶ್ರೀನಿವಾಸಪ್ರಸಾದ್ ನಮ್ಮ ಜಿಲ್ಲೆಯ ಸಂಸದರು. ಅವರ ಪಾರ್ಥೀವ ಶರೀರವನ್ನು ಚಾಮರಾಜನಗರಕ್ಕೆ ತರಲೇಬೇಕು ಎಂದು ಜಾನಪದ ಗಾಯಕ ನರಸಿಂಹಮೂರ್ತಿ ಒತ್ತಾಯಿಸಿದ್ದಾರೆ.

ಇನ್ನು, ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ಪಾರ್ಥಿವ ಶರೀರ ಮೈಸೂರಿನ ಜಯಲಕ್ಷ್ಮಿಪುರಂನ ನಿವಾಸದಲ್ಲಿ ಇರಿಸಲಾಗಿದ್ದು, ಅಭಿಮಾನಿಗಳು, ರಾಜಕೀಯ ಮುಖಂಡರು ಅಂತಿಮ ದರ್ಶನ ಮಾಡುತ್ತಿದ್ದಾರೆ. ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮೈಸೂರಿಗೆ ಭೇಟಿ ಕೊಟ್ಟು ಅಂತಿಮ ದರ್ಶನ ಪಡೆಯಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ವಿ.ಶ್ರೀನಿವಾಸ್‌ ಪ್ರಸಾದ್‌ ಕೊಡುಗೆ ಅಪಾರ: ಸ್ವಾಭಿಮಾನಿ ರಾಜಕಾರಣಿ ಅಂತಲೇ ಹೆಸರುವಾಸಿಯಾಗಿದ್ದ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ರಾಜಕಾರಣದಲ್ಲಿ ತುಂಬಾ ಹೆಸರು ಮಾಡಿದವರಾಗಿದ್ದಾರೆ. ಅಷ್ಟೇ ಅಲ್ಲದೆ ಇವರು ನಂಜನಗೂಡಿಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಈಗಲೂ ಕೂಡ ಈ ಕೊಡುಗೆಗಳ ಬಗ್ಗೆ ಇಲ್ಲಿನ ಬಾಯಲ್ಲಿ ಕೇಳಿಬರುತ್ತಲೇ ಇವೆ.

ಮೈಸೂರು ಜಿಲ್ಲೆಯ ನಂಜನಗೂಡು ವಿ.ಶ್ರೀನಿವಾಸ ಪ್ರಸಾದ್ ಅವರ ನೆಚ್ಚಿನ ಕ್ಷೇತ್ರವಾಗಿತ್ತು. ಕಂದಾಯ ಸಚಿವರಾಗಿದ್ದ ವೇಳೆ ರಾಜ್ಯದಲ್ಲಿಯೇ ತಾಲೂಕು ಮಟ್ಟದ ಅತ್ಯಂತ ಸುಸಜ್ಜಿತ ಕಂದಾಯ ಭವನವನ್ನು ನಿರ್ಮಿಸಿದ್ದರು. ಅಷ್ಟೇ ಅಲ್ಲದೆ 8.5 ಕೋಟಿ ಅಂದಾಜು ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ, 10.5 ಕೋಟಿ ಅಂದಾಜು ವೆಚ್ಚದಲ್ಲಿ ಊಟಿಯ ಬಟಾನಿಕಲ್ ಗಾರ್ಡನ್ ಮಾದರಿಯ ಸಸ್ಯ ಕಾಶಿ ನಿರ್ಮಾಣಕ್ಕೆ ಚಾಲನೆ ಕೊಟ್ಟ ಹೆಗ್ಗಳಿಕೆ ಇವರದ್ದಾಗಿದೆ.

ಕಳೆದ ಒಂದು ವಾರದಿಂದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಮೈಸೂರಿನ ಜಯಲಕ್ಷ್ಮಿಪುರಂ ನಿವಾಸಕ್ಕೆ ಮೃತದೇಹವನ್ನು ಸೋಮವಾರ ಬೆಳಗ್ಗೆ 8 ಗಂಟೆಗೆ ತರಲಾಗುವುದು. ನಂತರ ಸಾರ್ವಜನಿಕ‌ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

1947ರಲ್ಲಿ ಮೈಸೂರಿನ ಅಶೋಕಪುರಂನಲ್ಲಿ ಜನಿಸಿದ ಶ್ರೀನಿವಾಸ ಪ್ರಸಾದ್ ಅವರು ಶಾರದ ವಿಲಾಸ ಶಾಲಾ -ಕಾಲೇಜಿನಲ್ಲಿ ತಮ್ಮ ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಪೂರೈಸಿದ್ದರು. ನಂತರ ಬಿಎಸ್ಸಿ ವ್ಯಾಸಂಗ ಮಾಡಿದ್ದ ಅವರು ವಿದ್ಯಾರ್ಥಿ ಜೀವನದಲ್ಲೇ ಸಂಘಟನೆ ಹಾಗೂ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಐದು ದಶಕಗಳ ರಾಜಕೀಯ ಹಾದಿ ಸವೆಸಿರುವ ಅವರು ಹಲವಾರು ಸಂದರ್ಭದಲ್ಲಿ ಪಕ್ಷಾಂತರ ಮಾಡಿದರೂ ಪಕ್ಷ ನಿಷ್ಠೆ, ವಿಚಾರ ನಿಷ್ಠೆಯಲ್ಲಿ ಬದಲಾಗಿಲ್ಲ. 1977ರಿಂದ 1979ರವರೆಗೆ ಜನತಾ ಪಾರ್ಟಿ, 1979ರಿಂದ 1983ರವರೆಗೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಇಂದಿರಾ), 1996ರಿಂದ 1997ರವರೆಗೆ ಸ್ವತಂತ್ರ, 1998ರಿಂದ 1999ರವರೆಗೆ ಸಮತಾ ಪಾರ್ಟಿ, 1999ರಿಂದ 2004ರವರೆಗೆ ಸಂಯುಕ್ತ ಜನತಾದಳದಿಂದ ಸಂಸದರಾಗಿ ಆಯ್ಕೆಯಾಗಿದ್ದರು. 2008, 2013ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು. 2019ರಲ್ಲಿ‌ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದರು.

ವಿ.ಶ್ರೀನಿವಾಸ ಪ್ರಸಾದ್ ಅವರು 50 ವರ್ಷ ರಾಜಕೀಯ ಜೀವನವನ್ನು ಕಂಡಿದ್ದಾರೆ. ಇದರಲ್ಲಿ 6 ಬಾರಿ ಸಂಸದರಾಗಿ, ಎರಡು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

2013ರಲ್ಲಿ ಶ್ರೀನಿವಾಸ ಪ್ರಸಾದ್ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಸಚಿವರಾಗಿರು. ಅಲ್ಲದೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಕಂದಾಯ ಸಚಿವರಾಗಿದ್ದಾಗ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಆಡಳಿತದಲ್ಲಿ ಹಲವಾರು ಬದಲಾವಣೆಗೂ ಕಾರಣರಾಗಿದ್ದರು.

ಸಿದ್ದರಾಮಯ್ಯ ಅವರ ಸಚಿವ ಸಂಪುಟದಿಂದ ಏಕಾಏಕಿ ಕೈಬಿಟ್ಟರೆಂದು ಅಸಮಾಧಾನಗೊಂಡು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ವೇಳೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ನಂಜನಗೂಡು ಉಪ ಚುನಾವಣೆ ಎದುರಿಸಿ ಪರಾಭವಗೊಂಡರು. ನಂತರ 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಚಾಮರಾಜನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯ ಗಳಿಸಿ ರಾಜಕೀಯ ನಿವೃತ್ತಿ ಪಡೆದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+