IAF Plane Crash: ಭೋಗಪುರದ ಬಳಿ ಭಾರತದ ವಾಯುಸೇನೆ ಲಘು ವಿಮಾನ ಪತನ, ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

ಚಾಮರಾಜನಗರ, ಜೂನ್‌, 01: ಚಾಮರಾಜನಗರ ಜಿಲ್ಲೆಯ ಭೋಗಪುರ ಗ್ರಾಮದ ಬಳಿ ಭಾರತದ ವಾಯು ಸೇನೆಯ ಲಘು ವಿಮಾನ ಪತನವಾಗಿದ್ದು, ಸದ್ಯ ಈ ಘಟನೆಯಲ್ಲಿ ಪೈಲಟ್‌ಗಳಿಬ್ಬರೂ ಪ್ರಾಣಪಾಯದಿಂದ ಪಾರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಇನ್ನು ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ಏನು ಹೇಳಿದ್ದಾರೆ ಅನ್ನುವ ವಿವರವನ್ನು ಗಮನಿಸಿ.

ವಿಮಾನ ತೀರಾ ಸಮೀಪದಲ್ಲೇ ಬಂದಿತ್ತು. ನೋಡುವಷ್ಟರಲ್ಲಿ ಉಲ್ಟಾ ಆಗಿ ಬ್ಲಾಸ್ಟ್ ಆಯಿತು ಎಂದು ವಿಮಾನ ಪತನದ ದೃಶ್ಯವನ್ನು ಕಂಡ ಪ್ರತ್ಯಕ್ಷದರ್ಶಿ ಸೋಮಶೇಖರ್ ಹೇಳಿದ್ದಾರೆ.

IAF Trainer Aircraft Crashed

ಚಾಮರಾಜನಗರ ತಾಲೂಕಿನನ ಭೋಗಾಪುರ ಗ್ರಾಮದಲ್ಲಿ ಪತನಗೊಂಡ ವಿಮಾನದ ಬಗ್ಗೆ ಮಾತನಾಡಿದ ಅವರು, ಸಮೀಪದಲ್ಲೇ ಚಾಮರಾಜನಗರದ ಕಡೆ ವಿಮಾನ ಹೋಯಿತು. ಬಳಿಕ ಮತ್ತೇ ನಮ್ಮ ಊರಿನತ್ತ ಬಂದಿತು. ನೋಡುವಷ್ಟರಲ್ಲಿ ಇಬ್ಬರು ಹೊರ ನೆಗೆದರು. ಕೆಲವೇ ಕ್ಷಣಗಳಲ್ಲಿ ವಿಮಾನ ಉಲ್ಟಾ ಆಗಿ ಬ್ಲಾಸ್ಟ್ ಆಯಿತು. ವಿಮಾನ ಬಿದ್ದ 2 ಕಿಲೋ ಮೀಟರ್‌ ದೂರದಲ್ಲಿ ಇಬ್ಬರು ಪೈಲಟ್‌ಗಳು ಬಿದ್ದಿದ್ದರು. ನಂತರ ಸೇನೆಯವರು ಬರುತ್ತಾರೆ ಎಂದು ತಿಳಿಸಿ ಅವರು ಅಲ್ಲೇ ವಿರಮಿಸುತ್ತಿದ್ದರು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ವಿಮಾನ ಪತನ ಘಟನೆ ಹಿನ್ನೆಲೆ

ಪ್ರತಿಕೂಲ ವಾತಾವರಣದಿಂದಾಗಿ ವಾಯುಸೇನೆಯ ಕಿರಣ್ ಏರ್ ಪಥ್ U692 ವಿಮಾನ ಚಾಮರಾಜನಗರ ತಾಲೂಕಿನ ಭೋಗಾಪುರ ಗ್ರಾಮದಲ್ಲಿ ಪತನಗೊಂಡಿತ್ತು. ಇದೊಂದು ತರಬೇತಿ ವಿಮಾನವಾಗಿದ್ದು, ಭೂಮಿಕಾ ಹಾಗೂ ತೇಜ್ ಪಾಲ್ ಎಂಬವರು ಈ ವಿಮಾನವನ್ನು ಚಲಾಯಿಸುತ್ತಿದ್ದರು.

ವಿಮಾನ ಪತನಗೊಂಡ ವೇಳೆ ಇನ್ನರು ಪೈಲಟ್‌ಗಳು ಪ್ಯಾರಚೂಟ್ ಮೂಲಕ ತಮ್ಮನ್ನು ಬಚಾವ್ ಮಾಡಿಕೊಂಡಿದ್ದು, ಅವರು ವಿಮಾನ ಪತನಗೊಂಡ 2 ಕಿಲೋ ಮೀಟರ್ ದೂರದಲ್ಲಿ ಬಿದ್ದಿದ್ದರು. ಸದ್ಯ, ಈ ಇಬ್ಬರನ್ನು ವಾಯುಸೇನೆಯವರು ಪತ್ತೆಹಚ್ಚಿ ರಕ್ಷಣೆ ಮಾಡಿದ್ದು, ಬೆಂಗಳೂರಿಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಕರೆದೊಯ್ದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಇನ್ನು ಇಬ್ಬರಿಗೂ ಕುತ್ತಿಗೆ ಬಳಿ ಸಣ್ಣಪುಟ್ಟ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+