25 ವರ್ಷಗಳಿಂದ ಕಾಡುಗಳ್ಳನ ಕೊರಳಲ್ಲಿ ನೇತಾಡುತ್ತಿದ್ದ ಹುಲಿ ಉಗುರಿನ ಲಾಕೆಟ್‌, ಆಗ ಆತ ಹೇಳಿದ್ದೇನು ಗೊತ್ತಾ?

ಚಾಮರಾಜನಗರ, ಅಕ್ಟೋಬರ್‌, 26: ಕಾಡುಗಳ್ಳ, ದಂತಚೋರ, ನರಹಂತಕ ವೀರಪ್ಪನ್ ಕೊರಳಲ್ಲೂ ಕೂಡ ಬರೋಬ್ಬರಿ 25 ವರ್ಷಗಳ ತನ‌ಕ ಹುಲಿ ಉಗುರಿನ ಲಾಕೆಟ್‌ವೊಂದು ನೇತಾಡುತ್ತಿತ್ತು.

ಕಾಡುಗಳ್ಳನ ಫೋಟೋಗಳನ್ನು ಸೆರೆಹಿಡಿದ ತಮಿಳುನಾಡಿನ‌ ಪತ್ರಕರ್ತ ಶಿವಸುಬ್ರಹ್ಮಣ್ಣ ಈ ಸಂಬಂಧ ಮಾಹಿತಿ ನೀಡಿದ್ದು, ವೀರಪ್ಪನ್ ಕೊರಳಲ್ಲಿ ಯಾವಾಗಲೂ ಹುಲಿ ಉಗುರಿನ ಲಾಕೆಟ್ ಇರುತ್ತಿತ್ತು. ಬಂಡೀಪುರದಲ್ಲೆಲ್ಲೋ ಸತ್ತು ಬಿದ್ದಿದ್ದ ಹುಲಿಯೊಂದರ ಉಗುರುಗಳನ್ನು ಆತ ಕಿತ್ತಕೊಂಡು ಬಂದು ತಾನೆ ಇಟ್ಟುಕೊಂಡು, ಸ್ನೇಹಿತರಿಗೆ ಕೊಟ್ಟಿದ್ದ. ಉಳಿದಿದ್ದ ಎರಡು ಉಗುರುಗಳಲ್ಲಿ ಸಾವಿರ ರೂಪಾಯಿನಲ್ಲಿ 1 ತೊಲ ಬಂಗಾರದಲ್ಲಿ ಸರ ಮಾಡಿಸಿಕೊಂಡು ಹಾಕಿಕೊಂಡಿದ್ದ ಎಂದು ವೀರಪ್ಪನ್ ಸಂದರ್ಶನ ಸಮಯದಲ್ಲಿ ತಿಳಿಸಿದ್ದ ಎಂದು ಹೇಳಿದ್ದಾರೆ.

veerappan-was-wearing-tiger-nail

ಆನೆಗಳು, ಗಂಧದನ್ನು ಲೂಟಿ ಮಾಡುತ್ತಿದ್ದ ಆತ ಹುಲಿಯನ್ನು ತಾನು ಕೊಂದಿಲ್ಲ‌ ಎಂದು ಹೇಳಿಕೊಂಡಿದ್ದ. ಆತನ ಸಹಚರ ಸೇತುಕುಳಿ ಗೋವಿಂದನ್ ಎದುರಾದ ಹುಲಿಗೆ ಗುಂಡು ಹಾರಿಸಿದ್ದ ಎಂದು ಆತ ತಿಳಿಸಿದ್ದ ಅಂತಾ ಮಾಹಿತಿ ಕೊಟ್ಟಿದ್ದಾರೆ. ಸಾಯುವ ತನಕವೂ ಕೂಡ ಹುಲಿ ಉಗುರಿನ ಲಾಕೆಟ್ ಆತನ ಕೊರಳಲ್ಲಿ ನೇತಾಡುತ್ತಿದ್ದು, ಮೌಢ್ಯತೆಯನ್ನು ನಂಬುತ್ತಿದ್ದ ಆತ ಹುಲಿ ಉಗುರಿನ ಧರಿಸಿದ್ದ ಎನ್ನಲಾಗುತ್ತಿದೆ.

ಹೆಬ್ಬಾಳಕರ್ ಅಳಿಯನ ಕೊರಳಲ್ಲಿಯೂ ಹುಲಿ ಉಗುರಿನ ಪೆಂಡೆಂಟ್

ಹುಲಿ ಉಗುರು ಡಾಲ್‌ ಧರಿಸಿದ ಪ್ರಕರಣದಲ್ಲಿ ಕನ್ನಡ ಕಿರುತೆರೆ ರಿಯಾಲಿಟಿ ಶೋ ಬಿಗ್ ಬಾಸ್ 10 ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಬಂಧನ ಬಳಿಕ, ಸ್ವಾಮೀಜಿ, ಸೆಲೆಬ್ರಿಟಿ, ರಾಜಕಾರಣಿಗಳು ಧರಿಸಿರುವ ಬಗ್ಗೆ ಮಾಹಿತಿಗಳು ಬೆಳಕಿಗೆ ಬರುತ್ತಿವೆ. ಹಾಗೆಯೇ ಹುಲಿ ಉಗುರು ಪ್ರಕರಣ ಇದೀಗ ಕಾಂಗ್ರೆಸ್ ಕೊರಳಿಗೆ ಕೈಹಾಕಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಳಿಯ ಹುಬ್ಬಳ್ಳಿ ಕಾಂಗ್ರೆಸ್ ಯುವ ಮುಖಂಡ ರಜತ್ ಉಳ್ಳಾಗಡ್ಡಿ ಕೊರಳಲ್ಲೂ ಹುಲಿ ಉಗುರು ಪೆಂಡೆಂಟ್ ಇರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂತೋಷ್ ಬಂಧನವಾಯ್ತು, ಇವರ ಬಂಧನ ಯಾವಾಗ? ಕಾನೂನು ಎಲ್ಲರಿಗೂ ಒಂದೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಈ ಪ್ರಕರಣದಿಂದ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಇನ್ನು ವರ್ತೂರು ಸಂತೋಷ್‌ ಬಂಧನದ ಹಿಂದೆ ಷಡ್ಯಂತ್ರ ನಡೆದಿದೆ ಎನ್ನುವ ಆಕ್ರೋಶಗಳು ಭುಗಿಲೆದ್ದಿವೆ. ಹಾಗೆಯೇ ಮದುವೆ ಸಮಯದಲ್ಲಿ ಫೋಟೋ ಶೂಟ್‌ನಲ್ಲಿ ಹುಲಿ ಉಗುರು ಮಾದರಿ ಚೈನ್ ಧರಿಸಿದ್ದ ರಜತ್ ಪೋಟೋ ಈಗ ವೈರಲ್ ಆಗಿದೆ. ಇದವರು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಸಹೋದರಿ ಮಗಳನ್ನು ಮದುವೆಯಾಗಿದ್ದಾರೆ.

ಆದ್ದರಿಂದ ರಜತ್ ಅವರು ರಾಜಕೀಯ ವಲಯದಲ್ಲಿ ಲಕ್ಷ್ಮಿ ಹೆಬ್ಬಾಳಕರ್‌ ಅಳಿಯ ಅಂತಲೇ ಫೇಮಸ್. ಈ ಹಿಂದೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಆಗಿದ್ದರು. ಇದೀಗ ಹುಲಿ ಉಗುರು ಪೆಂಡೆಂಟ್ ಧರಿಸಿರುವ ವಿಚಾರಕ್ಕೆ ಪೇಚಿಗೆ ಸಿಲುಕಿಕೊಂಡಿದ್ದಾರೆ. ಪೆಂಡೆಂಟ್ ಧರಿಸಿದ ವಿಚಾರಕ್ಕೆ ಜಗ್ಗೇಶ್, ನಟ ದರ್ಶನ ಮನೆಮೇಲೆ ದಾಳಿ ಮಾಡಿರುವ ಅರಣ್ಯ ಇಲಾಖೆ ಇದೀಗ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿ ಮನೆ ಮೇಲೂ ದಾಳಿ ಮಾಡುತ್ತಾ? ಎನ್ನುವ ಪ್ರಶ್ನೆಗಳು ಎದ್ದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+