25ವರ್ಷಗಳ ಬಳಿಕ ವೀರಪ್ಪನ್ ಸಹಚರನ ಬಂಧನ!

Posted By: Gururaj
Subscribe to Oneindia Kannada
   Veerappan's Companion Was Arrested 25 Years Later

   ಚಾಮರಾಜನಗರ, ಆಗಸ್ಟ್ 29 : ಕಾಡುಗಳ್ಳ ವೀರಪ್ಪನ್ ಸಹಚರನನ್ನು 25ವರ್ಷಗಳ ಬಳಿಕ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪಾಲಾರ್ ನೆಲಬಾಂಬ್ ಸ್ಫೋಟ ಪ್ರಕರಣದಲ್ಲಿಯೂ ಈತ ಆರೋಪಿಯಾಗಿದ್ದ.

   ಬೆಂಗಳೂರಲ್ಲಿ ಇನ್ಸ್ ಪೆಕ್ಟರ್ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ

   ಶಿವಸ್ವಾಮಿ (52) ಅಲಿಯಾಸ್ ಡಬಲ್ ಗುಂಡಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ವೀರಪ್ಪನ್ ಸಹಚರ. ರಾಮಾಪುರ ಠಾಣೆಯ ಪೊಲೀಸರು ಈತನನ್ನು ಬಂಧಿಸಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಿವಸ್ವಾಮಿ ತಲೆಮರೆಸಿಕೊಂಡಿದ್ದ.

   Veerappan aide Shivaswamy arrested

   ತಮಿಳುನಾಡಿನ ಸತ್ಯಮಂಗಲ ತಾಲೂಕಿನ ನಿವಾಸಿ ಶಿವಸ್ವಾಮಿಯನ್ನು ಈರೋಡ್ ಜಿಲ್ಲೆಯ ಡಿ.ಜಿ.ಪುದುರು ಗ್ರಾಮದಲ್ಲಿ ಭಾನುವಾರ ಬಂಧಿಸಲಾಗಿದೆ. ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ತಲೆಮರೆಸಿಕೊಂಡಿದ್ದ ಈತ ನೇಯ್ಗೆ ವೃತ್ತಿ ಮಾಡಿಕೊಂಡಿದ್ದ.

   ವೀರಪ್ಪನ್ ಜೊತೆ ಸಫಾರಿ ಚಾಲಕ ಮುಖಾಮುಖಿಯಾದ ರೋಚಕ ಕಥೆ

   ಯಾವ ಪ್ರಕರಣಗಳು? : ಶಿವಸ್ವಾಮಿ ಮೂರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಪೊಲೀಸರಿಂದ ತಪ್ಪಿಸಿಕೊಂಡಿದ್ದ ಈತನನ್ನು ಇಪ್ಪತ್ತೈದು ವರ್ಷಗಳ ಬಳಿಕ ಬಂಧಿಸಲಾಗಿದೆ.

   * 1992ರಲ್ಲಿ ನಡೆದ ಗಣಿ ಉದ್ಯಮಿ ಸಂಪಗಿ ರಾಮಯ್ಯ ಪುತ್ರ ರಾಮಮೂರ್ತಿ ಅಹಪರಣ ಪ್ರಕರಣ, ಚಿನ್ನಗೌಂಡರ್ ಅಪಹರಣ ಮತ್ತು ಹತ್ಯೆ ಪ್ರಕರಣದಲ್ಲಿ ಶಿವಸ್ವಾಮಿ ಆರೋಪಿ.

   * 1993ರಲ್ಲಿ ನಡೆದ ಪಾಲಾರ್ ನೆಲಬಾಂಬ್ ಸ್ಫೋಟ ಪ್ರಕರಣದಲ್ಲಿ 124 ಆರೋಪಿಗಳಿದ್ದು, ಶಿವಸ್ವಾಮಿ ಸಹ ಒಬ್ಬ ಆರೋಪಿ. ಈ ಬಾಂಬ್ ಸ್ಫೋಟದಲ್ಲಿ ಇಪ್ಪತ್ತೆರಡು ಮಂದಿ ಸಾವನ್ನಪ್ಪಿದ್ದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Chamarajanagar Ramapura police arrested Shivaswamy (52) an accomplice of Veerappan. Shivaswamy an accused in the Palar bomb blast case.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ