ಲೋಕಸಭಾ ಚುನಾವಣೆ ಎಫೆಕ್ಟ್: ಕೊಳ್ಳೇಗಾಲದಲ್ಲಿ ದಾಖಲೆ ಇಲ್ಲದ ₹1,00,000 ಹಣ ವಶ

ಚಾಮರಾಜನಗರ, ಮಾರ್ಚ್‌, 19: ದಾಖಲೆ ಇಲ್ಲದೇ ಸಾಗಿಸಲಾಗುತ್ತಿದ್ದ 1 ಲಕ್ಷ ರೂಪಾಯಿ ಹಣವನ್ನು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ದಾಸನಪುರ ಚೆಕ್ ಪೋಸ್ಟ್‌ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದಾಸನಪುರ ಚೆಕ್ ಪೋಸ್ಟ್‌ನಲ್ಲಿ ಬೆಂಗಳೂರಿನಿಂದ ಕೊಳ್ಳೇಗಾಲದ ಕಡೆ ಬರುತ್ತಿದ್ದ ಕಾರನ್ನು (KA-51-MW-330) ತಪಾಸಣೆ ಮಾಡಿದ ವೇಳೆ ದಾಖಲೆ ಇಲ್ಲದೆ 1 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ. ಇನ್ನು ಈ ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಮುಂದಿನ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ನಾಗ್ ತಿಳಿಸಿದ್ದಾರೆ.

Unrecorded 1 00 000 money seized in Kollegala

ಆರೋಪಿ ಬಂಧನ: ಅಕ್ರಮವಾಗಿ ಕೊಡಗು ವೈನ್ ಮಾರಾಟ ಮಾಡುತ್ತಿದ್ಧ ಮಾಲು ಸಹಿತ ಆರೋಪಿಯನ್ನು ಬಂಧಿಸಿರುವ ಘಟನೆ ಮೈಸೂರು-ಊಟಿ ಹೆದ್ದಾರಿ ಹಾದು ಹೋಗುವ ಗುಂಡ್ಲುಪೇಟೆ ರಸ್ತೆಯಲ್ಲಿ ನಡೆದಿದೆ.

ಗುಂಡ್ಲುಪೇಟೆ ತಾಲೂಕಿ‌ನ ಬೇಗೂರು ನಿವಾಸಿ ದಿನೇಶ್ ನಾಯ್ಡು ಬಂಧಿತ ಆರೋಪಿ. ಯಾವುದೇ ಪರವಾನಗಿ ಪಡೆಯದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳಿಗೆ ತೆರೆದು ಕೊಡಗು ವೈನ್ ಹಾಗೂ ಸಾಂಬಾರ ಪದಾರ್ಥ ಮಾರಾಟ ಮಾಡುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿ 750 ಮಿಲಿ ಲೀ‌ಟರ್‌ನ 380 ಬಾಟಲಿಗಳು ಸೇರಿ ಒಟ್ಟು 285 ಲೀಟರ್ ವೈನ್ (ಒಟ್ಟು ಮೌಲ್ಯ ₹3,04,000) ವಶಕ್ಕೆ ಪಡೆಯಲಾಗಿದೆ. ಇನ್ನು ಆರೋಪಿಯನ್ನು ನ್ಯಾಯಾಂಗಕ್ಕೆ ಒಪ್ಪಿಸಿ ಅಬಕಾರಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+