ಗುಂಡ್ಲುಪೇಟೆಯಲ್ಲಿ ಅಂಬ್ಯುಲೆನ್ಸ್ ಗೆ ಸಿಲುಕಿ ಕಾಡಂದಿಗಳು ಸಾವು

ಗುಂಡ್ಲುಪೇಟೆ, ಆಗಸ್ಟ್ 14: ವೇಗವಾಗಿ ಸಂಚರಿಸುತ್ತಿದ್ದ ಅಂಬ್ಯುಲೆನ್ಸ್ ವಾಹನಕ್ಕೆ ಸಿಲುಕಿದ ಎರಡು ಕಾಡುಹಂದಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ದೊಡ್ಡತುಪ್ಪೂರು ಗೇಟ್ ಬಳಿ ನಡೆದಿದೆ.

ಸೋಮವಾರ ಸಂಜೆ 4.30ರ ಸಮಯದಲ್ಲಿ ತೆರಕಣಾಂಬಿಯಿಂದ ಗುಂಡ್ಲುಪೇಟೆಗೆ ರೋಗಿಯನ್ನು ಕೊಂಡೊಯ್ಯುತ್ತಿದ್ದ ಅಂಬ್ಯುಲೆನ್ಸ್ ವಾಹನಕ್ಕೆ ರಸ್ತೆ ದಾಟುತ್ತಿದ್ದ ಕಾಡುಹಂದಿಗಳು ಅಡ್ಡ ಬಂದಿವೆ. ಈ ವೇಳೆ 7 ಹಂದಿಗಳ ಪೈಕಿ 5 ಹಂದಿಗಳು ಪಾರಾಗಿದ್ದು ರಸ್ತೆಯ ನಡುವೆ ಚಕ್ರಕ್ಕೆ ಸಿಲುಕಿದ ಎರಡು ಹಂದಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ.

Two wild pigs dead as fall into the ambulance in Gundlupet

ಘಟನೆ ಬಳಿಕ ನಂತರ ಅಂಬುಲೆನ್ಸ್ ವಾಹನ ವೇಗವಾಗಿ ಸಾಗಿದೆ ಎನ್ನಲಾಗಿದೆ. ಆ ನಂತರ ದಾರಿಹೋಕರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದು ಅರಣ್ಯ ಸಿಬ್ಬಂದಿಯು ಹಂದಿಗಳ ಕಳೇಬರವನ್ನು ರಸ್ತೆಯಿಂದ ತೆರವುಗೊಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+