ಗೋಪಿನಾಥಂ ಅರಣ್ಯ ವಲಯದಲ್ಲಿ ಜಿಂಕೆ ಬೇಟೆಗಾರರ ಬಂಧನ
ಕೊಳ್ಳೇಗಾಲ, ಫೆಬ್ರವರಿ. 28 : ಚಾಮರಾಜನಗರಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗೋಪಿನಾಥಂ ಅರಣ್ಯ ವಲಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಣ್ತಪ್ಪಿಸಿ ಜಿಂಕೆ ಬೇಟೆಯಾಡುತ್ತಿದ್ದ ಮೂವರ ಪೈಕಿ ಇಬ್ಬರನ್ನು ಬಂಧಿಸಲಾಗಿದ್ದು. ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.
ಹನೂರು ಸಮೀಪದ ಗೋಪಿನಾಥಂ ಗ್ರಾಮದ ಸುರೇಶ್ ಹಾಗೂ ರಾಘವೇಂದ್ರನ್ ಸಿಕ್ಕಿ ಬಿದ್ದ ಆರೋಪಿಗಳು. ಇನ್ನೊಬ್ಬ ಆರೋಪಿ ಅಯ್ಯಾನ್ ಎಂಬಾತ ದಾಳಿಯ ಸಂದರ್ಭ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.

ಆರೋಪಿಗಳಿಂದ ಸುಮಾರು 30 ಕೆಜಿ ಜಿಂಕೆ ಮಾಂಸ ಹಾಗೂ ಬೇಟೆಗೆ ಬಳಸುತ್ತಿದ್ದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.ಈ ಮೂವರು ಆರೋಪಿಗಳು ಗೋಪಿನಾಥಂ ಅರಣ್ಯ ವಲಯದಲ್ಲಿ ಜಿಂಕೆಯನ್ನು ಬೇಟೆಯಾಡಿ ಮಾಂಸ ಸಾಗಿಸುವ ಪ್ರಯತ್ನ ಮಾಡುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಅರಣ್ಯ ಇಲಾಖೆಗೆ ದೊರೆತಿದಿದ್ದು ಅದರಂತೆ ಎಸಿಎಫ್ ಅಂಕರಾಜು ಅವರ ಮಾರ್ಗದರ್ಶನದಲ್ಲಿ ಆರ್‍ಎಫ್‍ಓ ಶಂಕರ್ ನೇತೃತ್ವದಲ್ಲಿ ಸಿಬ್ಬಂದಿ ಬೈರಾಜು, ಚನ್ನಪ್ಪ, ಸಿದ್ದಾಚಾರಿ, ವೀರಪ್ಪ, ಮಂಜುನಾಥ, ಕುಂಜನಾಯ್ಕ ಅವರನ್ನೊಳಗೊಂಡ ತಂಡ ದಾಳಿ ಮಾಡಿದೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.












Click it and Unblock the Notifications