ಚಾಮರಾಜನಗರ: ರಸ್ತೆ ಮೇಲೆ ಉರುಳಿದ ಮರ; ಮೂರು ಗಂಟೆ ಭಾರಿ ಟ್ರಾಫಿಕ್
ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರ ಸಮೀಪದ ಆಸನೂರು ಬಳಿ ಬೃಹತ್ ಮರ ಬಿದ್ದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋ ಮೀಟರ್ ಗಟ್ಟಲೇ ವಾಹನ ಸಾಲುಗಟ್ಟಿ ನಿಲ್ಲಬೇಕಾಯಿತು.
ಬುಧವಾರ ಸಂಜೆ 4. 15 ಗೆ ಮರ ಉರುಳಿ ಬಿದ್ದಿದ್ದು ಸಂಜೆ 6 ಆದರೂ ಕೂಡ ಮರ ತೆರವು ಕಾರ್ಯಾಚರಣೆ ಮುಂದುವರೆದ ಕಾರಣ 3 ಗಂಟೆಗಳ ವಾಹನಗಳು ನಿಂತಲ್ಲೇ ನಿಂತಿದ್ದವು.

ಕರ್ನಾಟಕ ಹಾಗೂ ತಮಿಳುನಾಡನ್ನು ಬೆಸೆಯುವ ಪ್ರಮುಖ ರಸ್ತೆ ಇದಾಗಿದ್ದು ಎರಡೂ ಬದಿಯಲ್ಲೂ ವಾಹನಗಳು ತೆರಳಲಾರದೇ ಟ್ರಾಫಿಕ್ ನಲ್ಲಿ ಜನರು ಸಿಲುಕಿ ಪರದಾಡಿದರು.












Click it and Unblock the Notifications