ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯರಿಯೂರು ಗ್ರಾಮದಲ್ಲಿ ಹುಲಿಹೆಜ್ಜೆ: ಭಯದಲ್ಲಿ ಗ್ರಾಮಸ್ಥರು

By ಬಿಎಂ ಲವಕುಮಾರ್
|
Google Oneindia Kannada News

ಚಾಮರಾಜನಗರ, ಮೇ.26: ಹುಲಿಯೊಂದು ನೆಮ್ಮದಿಯಾಗಿದ್ದ ಗ್ರಾಮದ ಜನರ ನಿದ್ದೆಗೆಡಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕು ಯರಿಯೂರ್ ಹಾಗೂ ನೇನೆಕಟ್ಟೆ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ಗ್ರಾಮಗಳ ರೈತರ ಜಮೀನುಗಳಲ್ಲಿ ಹುಲಿಯೊಂದರ ಹೆಜ್ಜೆ ಕಂಡುಬಂದಿದ್ದು, ಇದನ್ನು ನೋಡಿದ ಗ್ರಾಮಸ್ಥರು ಈಗ ತಮ್ಮ ಗ್ರಾಮದಲ್ಲಿಯೇ ಹುಲಿ ಓಡಾಡುತ್ತಿದೆ ಎಂದು ತಿಳಿದು ಭಯಭೀತರಾಗಿದ್ದಾರೆ.

Tiger foot prints found in Yariyur

ಸದ್ಯ ಯರಿಯೂರು ಗ್ರಾಮದ ಮಹೇಶ್ ಎಂಬುವರು ಜಮೀನಿನಿಂದ ಮನೆಯತ್ತ ತೆರಳುವಾಗ ಭಾರೀ ಗಾತ್ರದ ಹುಲಿಯನ್ನು ನೋಡಿದ್ದಾರೆ. ಇನ್ನು ನೇನೆಕಟ್ಟೆ ಗ್ರಾಮದ ಸುಬ್ಬಪ್ಪ ಎಂಬುವರ ಜಮೀನಿನಲ್ಲಿ ಕಟ್ಟಿಹಾಕಿದ್ದ ಮೇಕೆಯನ್ನು ಹುಲಿಯೊಂದು ಎತ್ತಿಕೊಂಡು ಹೋದ ಘಟನೆಯೂ ನಡೆದಿದೆ.

Tiger foot prints found in Yariyur

ಮೇಕೆ ಕಾಣದಿದ್ದಾಗ ಅದನ್ನು ಹುಡುಕಿಕೊಂಡು ಹೋದವರಿಗೆ ಈಗ ಹುಲಿ ಅಡ್ಡಾಡಿದ ಹೆಜ್ಜೆಗುರುತುಗಳು ಕಂಡು ಬಂದಿದ್ದು, ಇದನ್ನು ನೋಡಿದ ಮೇಲೆ ರೈತರು ಜಮೀನಿಗೆ ಹೋಗಲು, ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಹುಲಿಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

English summary
Yes its a big cat! Yariyur and Nenekatte villagers in Gundlupet taluk have found foot prints of tiger and the same created lot of fear in the region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X