ಚುನಾವಣಾ ಫಲಿತಾಂಶ : ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ

Posted By:
Subscribe to Oneindia Kannada

ಚುನಾವಣೆ ಮುಗೀತು. ಅದರ ಫಲಿತಾಂಶವೂ ಬಂತು. ಈಗ ಗೆದ್ದವರ ಸಂಭ್ರಮಾಚರಣೆ, ಸೋತವರ ವಿಶ್ಲೇಷಣೆಗಳ ಗೂಡಾಗಿದೆ ನಂಜನಗೂಡು, ಗುಂಡ್ಲುಪೇಟೆ.

ನಾಳೆಯಿಂದ (ಏಪ್ರಿಲ್ 14) ಈ ಎರಡೂ ಊರುಗಳು ಸಹಜ ಸ್ಥಿತಿಗೆ ಮರಳಲಿವೆ. ಚುನಾವಣೆ ಗದ್ದಲ ಸಂಪೂರ್ಣವಾಗಿ ಸ್ತಬ್ಧವಾಗಲಿದೆ. ರೈತರು, ಜನ ಸಾಮಾನ್ಯರು ತಮ್ಮ ತಮ್ಮ ಕೆಲಸಗಳತ್ತ ಇನ್ನು ಹೆಚ್ಚಿನ ಗಮನವಿಟ್ಟು ಕೆಲಸ ಮಾಡತೊಡಗುತ್ತಾರೆ.

ಚುನಾವಣೆ ಗಲಾಟೆ ಸ್ತಬ್ಧಗೊಂಡ ನಂತರವೂ ಇಲ್ಲಿ ಪ್ರಚಾರದ ವೇಳೆ ನಾಯಕರ ಕೆಲ ಹೇಳಿಕೆಗಳು ಅನುರಣಿಸುತ್ತಿವೆ. ಜನರೂ ಅವುಗಳನ್ನು ಮೆಲುಕು ಹಾಕುತ್ತಿದ್ದಾರೆ.

ಈಗಲೂ ಕಟ್ಟೆಗಳ ಮೇಲೆ, ಹೊಲ ಗದ್ದೆಗಳ ಹಾದಿಗಳಲ್ಲಿ, ಮನೆಯ ಪಡಸಾಲೆಗಳಲ್ಲಿ ಈ ನಾಯಕರ ಮಾತುಗಳನ್ನು ಜನರು ಮೆಲುಕು ಹಾಕುತ್ತಿದ್ದಾರೆ.

ನೆನಪಿನ ಚೀಲದಿಂದ ಇಂಥ ಹೇಳಿಕೆಗಳನ್ನು ಹೆಕ್ಕಿತಂದು ಇಲ್ಲಿ ಪಟ್ಟಿ ಮಾಡಲಾಗಿದೆ.

ನೋಟ್ ಇಸ್ಕಳಿ, ವೋಟಿ ಹಾಕ್ಕಳಿ

ನೋಟ್ ಇಸ್ಕಳಿ, ವೋಟಿ ಹಾಕ್ಕಳಿ

- ಇತ್ತೀಚೆಗೆ ಮುಖ್ಯಮಂತ್ರಿಗಳ ವಿರುದ್ದ ವಾಗ್ದಾಳಿ ನಡೆಸಿದ್ದ ಈಶ್ವರಪ್ಪ, ಸಿದ್ದರಾಮಯ್ಯ ಒಬ್ಬ 'ತಲಾಕ್' ರಾಜಕಾರಣಿ. ಅಧಿಕಾರಕ್ಕಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದವರು. ನನಗೆ ಬಿಜೆಪಿ ಮೇಲಿರುವ ನಿಷ್ಠೆಯ ಬಗ್ಗೆ ಸಿದ್ದರಾಮಯ್ಯ ಸರ್ಟಿಫಿಕೇಟ್ ನೀಡಬೇಕಾಗಿಲ್ಲ.

- ಕಾಂಗ್ರೆಸ್ಸಿನವರು ನಿಮಗೆ ದುಡ್ಡು ಕೊಡೋಕೆ ಬಂದ್ರೆ ಬೇಡ ಅನ್ಬೇಡಿ. ಅವರತ್ರ ದುಡ್ಡು ಇಸ್ಕೊಂಡು ಬಿಜೆಪಿಗೆ ವೋಟ್ ಹಾಕಿ. ಡಿ ಕೆ ಶಿವಕುಮಾರ್ ಒಂದು ವೋಟಿಗೆ 4 ಸಾವಿರ ರೂಪಾಯಿ ಕೊಡ್ತಾ ಇದ್ದಾರೆ. ಅವರು ಕೊಟ್ಟ ದುಡ್ಡು ಇಸ್ಕೊಂಡು, ಬಿಜೆಪಿಗೆ ಮತ ಹಾಕಬೇಕು.

- ಇಡೀ ದೇಶ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಮತ್ತು ಅವರ ಕಾರ್ಯಶೈಲಿಯನ್ನು ಒಪ್ಪಿಕೊಂಡಿದೆ. ಒಪ್ಪದೇ ಇರುವವರು ಎಂದರೆ ಇಬ್ಬರು ಮಾತ್ರ, ಒಂದು ಪಾಕಿಸ್ತಾನದವರು ಮತ್ತೊಂದು ಸಿದ್ದರಾಮಯ್ಯ.

- ಸುಳ್ಳು ಮತ್ತು ಪೊಳ್ಳು ಘೋಷಣೆಗಾಗಿ ನೊಬೆಲ್ ಪ್ರಶಸ್ತಿ ಕೊಡುವಂತಿದ್ದರೆ, ಇಡೀ ನಮ್ಮ ಭಾರತ ದೇಶದಲ್ಲಿ ಈ ಪ್ರಶಸ್ತಿ ನೀಡಬೇಕಾಗಿರುವುದು ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ. ಒಂದು ಕಡೆ ಮರಳು ಮಾಫಿಯಾದಿಂದ ಜಿಲ್ಲಾಧಿಕಾರಿಗಳ ಕೊಲೆ ಯತ್ನ ನಡೆಯುತ್ತಿದ್ದರೆ, ಇನ್ನೊಂದೆಡೆ ತಮ್ಮ ಲೋಕೋಪಯೋಗಿ ಸಚಿವರ ಮೂಲಕ ಮರಳುಗಾರಿಕೆಗೆ ಮುಖ್ಯಮಂತ್ರಿಗಳು ಪರೋಕ್ಷ ಬೆಂಬಲ ನೀಡುತ್ತಿದ್ದಾರೆ.

- ನೋ ವೋಟ್‌, ನೋ ಸೀಟ್‌ ಎನ್ನುವುದು ನಮ್ಮ ಧ್ಯೇಯವಾಕ್ಯ. ಯಾರೋ ಪ್ರಭಾವ ಬೀರಿದರೆ ಅಥವಾ ಅಪ್ಪ ಇದ್ದಾರೆಂಬ ಕಾರಣಕ್ಕೆ ಮಗನಿಗೆ ಬಿಜೆಪಿಯಲ್ಲಿ ಟಿಕೆಟ್‌ ಸಿಗುವುದಿಲ್ಲ. ಪಕ್ಷಕ್ಕಾಗಿ ದುಡಿದವರಿಗೆ ಮಾತ್ರ ಟಿಕೆಟ್‌. ಆದರೂ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಮುಸ್ಲಿಮರು ಪಕ್ಷಕ್ಕೆ ಮತ ನೀಡಿದ್ದಾರೆ. ಹಾಗಾಗಿ ಒಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ರಿಜ್ವಾನ್ ಅರ್ಷದ್ ಬಗ್ಗೆ ಈಶ್ವರಪ್ಪ ಟೀಕೆ.

- ದಲಿತರು, ಹಿಂದುಳಿದ ಸಮುದಾಯದವರಿಗೆ ಸಿದ್ದರಾಮಯ್ಯ ಟೋಪಿ ಹಾಕಿದ್ದಾರೆ. ಮುಖ್ಯಮಂತ್ರಿ ದಲಿತರಿಗಾಗಿ ದುಡಿದಿದ್ದಾರೆ ಅಂತ ಸಚಿವ ಆಂಜನೇಯ ಕೋಟ್ ಹಾಕಿ ಸನ್ಮಾನ ಮಾಡಿದರು. ಆದರೆ ಸಮಾಜಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಲ್ಲಿ ಆಂಜನೇಯ ಹಣ ಹೊಡೆದಿದ್ದಾರೆ. ಈ ಕೆಲಸ ಮಾಡಿರೋ ನಿಮ್ಮ ಮಕ್ಕಳು ಮರಿಗೆ ಒಳ್ಳೆಯದಾಗುತ್ತಾ?

ಗೀತಾ ಮಹದೇವ ಪ್ರಸಾದ್ ವಿರುದ್ಧ ಹೇಳಿಕೆ

ಗೀತಾ ಮಹದೇವ ಪ್ರಸಾದ್ ವಿರುದ್ಧ ಹೇಳಿಕೆ

- ಯಾವುದೇ ರಾಜಕಾರಣಿ ಸಚಿವರಾಗಿದ್ದಾಗ ಅವರ ಪತ್ನಿಯರು ಸೌಲಭ್ಯಯುತ ಜೀವನ ನಡೆಸುತ್ತಾರೆ. ಹಾಗೆಯೇ ಗೀತಾ ಮಹದೇವ ಪ್ರಸಾದ್ ಅವರಿಗೆ ಅವರ ಪತಿ (ಮಾಜಿ ಸಚಿವ ಮಹದೇವ ಪ್ರಸಾದ್) ಮರಣ ಹೊಂದಿದ ಮರುದಿನ ಗೂಟದ ಕಾರು ನೆನಪಾಗಿದೆ. ಮಹದೇವ ಪ್ರಸಾದ್ ಅವರ ಸಮಾಧಿಗೆ ಹಾಲು ತುಪ್ಪ ಹಾಕುವಾಗಲೂ ಅವರಿಗೆ ಗೂಟದ ಕಾರು ನೆನಪಾಗಿದೆ. ಗೂಟದ ಕಾರು ಕೈ ತಪ್ಪುವುದನ್ನು ತಪ್ಪಿಸಲು ಚುನಾವಣೆಗೆ ನಿಲ್ಲುತ್ತಿರುವುದಾಗಿ ಅವರು ಹೇಳಿದ್ದಾರೆ. ಗೀತಾ ಮಹದೇವ ಪ್ರಸಾದ್ ಅವರಿಗೆ ಮತ ಹಾಕಿದರೆ ಕ್ಷೇತ್ರದ ಅಭಿವೃದ್ಧಿಗೆ ಎಳ್ಳು ನೀರು ಬಿಟ್ಟಂತೆ.

ಸಿಎಂ ಅವರೇ ನಿಮ್ಮ ಮಾತಿಗೆ ಕಿಮ್ಮತ್ತಿದೆಯೇ?

ಸಿಎಂ ಅವರೇ ನಿಮ್ಮ ಮಾತಿಗೆ ಕಿಮ್ಮತ್ತಿದೆಯೇ?

- ಹಣದ ಧಿಮಾಕಿನಿಂದ,ಮದದಿಂದ ಓಡಾಡುತ್ತಿದ್ದೀರಿ.ಸಿದ್ದರಾಮಯ್ಯನವರಿಗೆ ಜನ ಪಾಠಕಲಿಸಬೇಕಿದೆ. ದಲಿತರಿಗೆ ಮೀಸಲಿಟ್ಟ ಹಣ ಖರ್ಚಾಗಿಲ್ಲ. ವಿಧಾನಸೌಧದಲ್ಲಿ ನಿಮ್ಮ ಮಾತಿಗೆ ಬೆಲೆ ಇದೆಯೇ,ಅಧಿಕಾರಿಗಳು ನಿಮ್ಮ ಮಾತು ಕೇಳುತ್ತಿದ್ದಾರಾ?

- ಗೀತಾ ಮಹದೇವ ಪ್ರಸಾದ್ ಮನೆಗೆ ನಾನು ಹೋಗಿದ್ದು ಮಹದೇವ ಪ್ರಸಾದ್ ನಿಧನದ ವೇಳೆಯೇ. ಸಾಂತ್ವನ ಹೇಳಿದ್ದು ಎರಡೇ ನಿಮಿಷ. ಅದೂ ಧೈರ್ಯ ಹೇಳಿದೆ ಅಷ್ಟೇ. ಸಾವಿನ ಮನೆಯಲ್ಲಿ ರಾಜಕೀಯ ಮಾತನಾಡುವವನು ನಾನಲ್ಲ. ಅವರು ನಮ್ಮ ಸಹೋದರಿ. ಆದರೆ ಅವರು ಅನುಕಂಪ ಗಳಿಸಿ ಮತ ಪಡೆಯುವ ಹುನ್ನಾರ ನಡೆಸುತ್ತಿರುವುದು ಸರಿಯಲ್ಲ.

ಮೈಸೂರು ಮರೆತೇ ಬಿಟ್ರಲ್ಲಾ?

ಮೈಸೂರು ಮರೆತೇ ಬಿಟ್ರಲ್ಲಾ?

- ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಸಿದ್ದರಾಮಯ್ಯ ಅವರು 12 ಬಾರಿ ಬಜೆಟ್ ಮಂಡಿಸಿದ್ದಾರೆ. ಆದರೆ ಕೇವಲ ಬಜೆಟ್ ಮಂಡಿಸಿದರೆ ಮುಗಿದುಹೋಯಿತಾ? ಕಳೆದ ನಾಲ್ಕು ವರ್ಷಗಳಲ್ಲಿ ನೀವು ಮಾಡಿದ್ದೇನು? ಮೈಸೂರು ಜಿಲ್ಲೆಗೆ ಕೊಟ್ಟ ಕೊಡುಗೆ ಏನು ಎಂದು ಪ್ರಶ್ನಿಸಿದರು.

- ಸಾಹುಕಾರ ಚೆನ್ನಯ್ಯ ಚಾವಡಿಯಲ್ಲಿ ಕಾಂಗ್ರೆಸ್ಸಿಗರು ಹಣ ಹಂಚಿದ್ದಾರೆ. ಇಮ್ರಾನ್ ಎಂಬುವರ ಮನೆಯಲ್ಲಿ ಸಂಸದ ಧೃವನಾರಾಯಣ್ ಹಣ ಹಂಚಿದ್ದಾರೆ. ಅಕ್ರಮದಿಂದ ಚುನಾವಣೆ ಗೆಲ್ಲೋಕೆ ಸಿಎಂ ಹೊರಟಿದ್ದಾರೆ. ನಿಮ್ಮವರ ಕಾರು ಬಂದ್ರೆ ಪೊಲೀಸರು ಸೆಲ್ಯೂಟ್ ಹೊಡಿತಾರೆ. ನಮ್ಮವರು ಬಂದರೆ ಕರಪತ್ರವನ್ನೇ ಹರಿದು ಹಾಕ್ತಾರೆ ಸಂಸದೆ ಶೋಭಾ ಕರಂದ್ಲಾಜೆ ತೀವ್ರ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ವಿರುದ್ಧ ಹೇಳಿಕೆ

ಯಡಿಯೂರಪ್ಪ ವಿರುದ್ಧ ಹೇಳಿಕೆ

- ಬಿಜೆಪಿಯವರಿಗೆ ಚುನಾವಣೆಯ ಫಲಿತಾಂಶದ ಬಗ್ಗೆ ಗಾಬರಿಯಾದಂತಿದೆ. ಆದ್ದರಿಂದ ಮಾಜಿ ಮುುಖ್ಯಮಂತ್ರಿ ಯಡಿಯೂರಪ್ಪ ಅವರು ಉಪ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿಯೇ ಠಿಕಾಣಿ ಹೂಡಿದ್ದಾರೆ.

ಯಡಿಯೂರಪ್ಪ ವಿರುದ್ಧ ಟೀಕಾಸ್ತ್ರ

ಯಡಿಯೂರಪ್ಪ ವಿರುದ್ಧ ಟೀಕಾಸ್ತ್ರ

- ಯಡಿಯೂರಪ್ಪರವರು ಅಧಿಕಾರದಲ್ಲಿದ್ದಾಗ 15 ವಿಧಾನಸಭಾ ಕ್ಷೇತ್ರಗಳನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದು ಮತದಾರರನ್ನು ನಂಬಿಸಿದ್ದರು. ಚುನಾವಣೆ ಬಳಿಕ ಕ್ಷೇತ್ರವನ್ನು ತಬ್ಬಲಿ ಮಾಡಿ ಹೋಗಿದ್ದಾರೆ. ಈಗ ಲೋಕಸಭಾ ಅಧಿವೇಶನ ನಡೆಯುತ್ತಿದ್ದರೂ ಅಲ್ಲಿ ಭಾಗವಹಿಸದ ಯಡಿಯೂರಪ್ಪ, ಇಲ್ಲೇ ಠಿಕಾಣಿ ಹೂಡಿರುವ ಹಿಂದಿನ ಉದ್ದೇಶವೇನು ?

ಇಂಥ ಕೆಟ್ಟ ಸರ್ಕಾರ ನೋಡಿರಲಿಲ್ಲ

ಇಂಥ ಕೆಟ್ಟ ಸರ್ಕಾರ ನೋಡಿರಲಿಲ್ಲ

- ನಾನು ನೋಡಿದ ಅತಿ ಕೆಟ್ಟ ಸರ್ಕಾರ ಇದು ಎಂದು ವಿಷಾದದಿಂದ ಹೇಳಬಯಸುತ್ತೇನೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ಬಂದೊದಗಿದ್ದು, ನೀವು(ಮಾಧ್ಯಮ) ಹುಡುಕುವುದಕ್ಕೆ ಸಹಾಯ ಮಾಡಿ.

ಕೃಷ್ಣ ಕಾಂಗ್ರೆಸ್ ತೊರೆದಿದ್ದು ನಷ್ಟ ತಂದಿಲ್ಲ

ಕೃಷ್ಣ ಕಾಂಗ್ರೆಸ್ ತೊರೆದಿದ್ದು ನಷ್ಟ ತಂದಿಲ್ಲ

- ಕೃಷ್ಣ ಅವರ ಬಿಜೆಪಿ ಸೇರ್ಪಡೆ ನಮ್ಮ ನಷ್ಟವೂ ಅಲ್ಲ, ಬಿಜೆಪಿಯ ಲಾಭವೂ ಅಲ್ಲ. ಬಿಜೆಪಿಯಲ್ಲಿ ಇರುವ ಅವರು ಏನಂದು ಕೊಳ್ತಾರೋ ಗೊತ್ತಿಲ್ಲ. ಆದರೆ ನಮಗಂತೂ ಖಂಡಿತಾ ನಷ್ಟವಲ್ಲ. ಫಲಿತಾಂಶವು ನನ್ನ ಮಾತಿನ ಅರ್ಥವೇನು ಅನ್ನೋದನ್ನು ತೋರಿಸುತ್ತೆ.

- ಎಸ್ಸೆಂ ಕೃಷ್ಣ ಅವರು ಹೇಳಿದಂತೆ ನಮ್ಮ ಸರಕಾರಕ್ಕೆ ದೃಷ್ಟಿಯೂ ಇಲ್ಲ, ದೂರದೃಷ್ಟಿಯೂ ಇಲ್ಲ, ಆದರೆ ಅವರು ಮುಖ್ಯಮಂತ್ರಿ ಆಗಿದ್ದಾಗ ಏನಾಯಿತು? ಸ್ವತಃ ಅವರೇ ಮದ್ದೂರು ಬಿಟ್ಟು, ಬೆಂಗಳೂರಿನ ಚಾಮರಾಜಪೇಟೆಯಿಂದ ಸ್ಪರ್ಧಿಸಿದರು. ಮದ್ದೂರು ಅವರ ಸ್ವಂತ ಕ್ಷೇತ್ರ. ಅದೂ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆದ ನಂತರ ಏಕೆ ಕ್ಷೇತ್ರ ಬದಲಾವಣೆ ಮಾಡಿದರು? ಅವರ ಸಂಪುಟದಲ್ಲಿದ್ದ ಮೂವತ್ತು ಸಚಿವರು ಏಕೆ ಚುನಾವಣೆ ಸೋತರು. 140 ಶಾಸಕರನ್ನು ಹೊಂದಿದ್ದ ಕಾಂಗ್ರೆಸ್ 60ಕ್ಕೆ ಏಕೆ ಕುಸಿಯಿತು? ಅದು ಅವರ ದೃಷ್ಟಿಕೋನದ ಫಲಿತಾಂಶವೇ? ಅಥವಾ ದೇಶದ ನಂಬರ್ ಒನ್ ಸರಕಾರ ಎಂದು ಆಗಿದ್ದರ ಕಾರಣವೆ?

ಕೃಷ್ಣ ವಿರುದ್ಧ ವಾಗ್ದಾಳಿ

ಕೃಷ್ಣ ವಿರುದ್ಧ ವಾಗ್ದಾಳಿ

- ''ಮನೆಯ ಯಜಮಾನ ತನಗಿಂತ ಚಿಕ್ಕವರಿಗೆ ಮದುವೆ ಮಾಡಿಸಬೇಕು. ಆದರೆ, ತಾನೇ ಮದುವೆ ಆಗ್ತೀನಿ ಅಂದ್ರೆ ಹೇಗೆ'' ಎಂದು ಅವರು ಕೃಷ್ಣ ಅವರ ಬಗ್ಗೆ ಕೊಂಕು ಮಾತುಗಳನ್ನಾಡಿದರು. ಈಗ ಬಿಜೆಪಿ ಸೇರಿದ ಮಾತ್ರಕ್ಕೆ ತಮಗೆ ಅಧಿಕಾರ, ಗೌರವ ಸ್ಥಾನಮಾನಗಳನ್ನು ನೀಡಿದ ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದರಲ್ಲಿ ಏನಿದೆ ಅರ್ಥ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After election, the statement of various political leaders are echoing across the the two constituencies Gundlupete and Nanjanagudu. Here are list of those statemets. ಚುನಾವಣೆ ಗದ್ದಲ ಮುಗಿದರೂ ಅನುರಣಿಸುತ್ತಿವೆ ನಾಯಕರ ಹೇಳಿಕೆ.
Please Wait while comments are loading...