T-20 World Cup Final 2024: ಟೀಂ ಇಂಡಿಯಾಗೆ ಗಡಿಜಿಲ್ಲೆ ಜನರು ಶುಭಾಶಯ ಕೋರಿದ್ದು ಹೀಗೆ
ಚಾಮರಾಜನಗರ, ಜೂನ್, 29: ಟಿ-20 ವಿಶ್ವಕಪ್‌ನಲ್ಲಿ ಅಜೇಯವಾಗಿ ಫೈನಲ್ ಹಂತಕ್ಕೆ ತಲುಪಿರುವ ಭಾರತ ತಂಡಕ್ಕೆ ಚಾಮರಾಜನಗರ ಜಿಲ್ಲೆಯ ಜನರು ಗೆದ್ದು ಬಾ ಭಾರತ ಎಂದು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
ಶಾಲಾ-ಕಾಲೇಜುಗಳಲ್ಲಿ ಭಾರತ ಧ್ವಜ ಹಿಡಿದು ಟೀಂ ಇಂಡಿಯಾಗೆ ಶುಭಾಷಯ ಕೋರಿದ್ದಾರೆ. ಜೊತೆಗೆ, ಹರಳುಕೋಟೆ ಆಂಜನೇಯ ದೇವಾಸ್ಥಾನದಲ್ಲಿ ಕ್ರಿಕೆಟ್ ಪ್ರೇಮಿಗಳು ವಿಶೇಷ ಪೂಜೆ ಸಲ್ಲಿಸಿ ರೋಹಿತ್ ಬಳಗ ಟ್ರೋಫಿ ತರಲಿ ಎಂದು ಹಾರೈಸಿದ್ದಾರೆ.

ನಮ್ಮ ಟೀಂ ಇಂಡಿಯಾ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ತೋರುತ್ತಿದ್ದಾರೆ. ಒಬ್ಬರು ಎಡವಿದರೂ, ಇನ್ನೊಬ್ಬರು ಎದುರಾಳಿ ತಂಡಗಳನ್ನು ಕಟ್ಟಿಹಾಕುತ್ತಿದ್ದು, ಈ ಬಾರಿ ಭಾರತ ವಿಶ್ವಕಪ್ ಗೆಲ್ಲಲಿದೆ ಎಂದು ಜೆಎಸ್ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಮಹಾದೇವಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ಫೈನಲ್ ಪಂದ್ಯದಲ್ಲಿ ರನ್ ಮೆಷಿನ್ ಕೊಹ್ಲಿ ಮತ್ತೇ ಫಾರ್ಮ್‌ಗೆ ಮರಳಲಿದ್ದು, ರೋಹಿತ್ ಸೆಂಚುರಿ ಬಾರಿಸಲಿದ್ದಾರೆ. ಸ್ಪಿನರ್ಸ್ ಹಾಗೂ ಬೂಮ್ರಾ ದಾಳಿಗೆ ದಕ್ಷಿಣ ಆಫ್ರಿಕಾ ಧೂಳಿಪಟ ಆಗಲಿದೆ ಎಂದು ಗಡಿಜಿಲ್ಲೆ ಕ್ರಿಕೆಟ್ ಆಟಗಾರರು ಜೋಶ್‌ನಲ್ಲಿದ್ದಾರೆ.
ಒಟ್ಟಿನಲ್ಲಿ ರೋಹಿತ್ ಬಳಗ ಭಾರತಕ್ಕೆ ಮತ್ತೊಂದು ವಿಶ್ವಕಪ್ ಗರಿ ತರಲಿ ಎಂಬುದು ಕ್ರಿಕೆಟ್ ಆಸಕ್ತರ ನಿರೀಕ್ಷೆಯಾಗಿದ್ದು, ಭರ್ಜರಿ ಸೆಲೆಬ್ರೇಷನ್‌ಗೂ ತಯಾರಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಯಜ್ವೇಂದ್ರ ಚಹಾಲ್, ಸಂಜು ಸ್ಯಾಮ್ಸನ್, ಮೊಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್.
ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಆನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ, ಒಟ್ನೀಲ್ ಬಾರ್ಟ್‌ಮನ್, ಜೆರಾಲ್ಡ್ ಕೋಟ್ಜೆ ಫಾರ್ಟುಯಿನ್, ರಯಾನ್ ರಿಕೆಲ್ಟನ್.












Click it and Unblock the Notifications