ಪೋಷಕರು ಬುದ್ಧಿ ಹೇಳಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಕೊಳ್ಳೇಗಾಲದ ಎಸ್ ಎಸ್ ಎಲ್ಸಿ ವಿದ್ಯಾರ್ಥಿನಿ
ಚಾಮರಾಜನಗರ, ಮೇ 20: ಮೊಬೈಲ್ ಬಳಸದಂತೆ ಪೋಷಕರು ಬುದ್ಧಿಮಾತು ಹೇಳಿದ್ದಕ್ಕೆ ಮನನೊಂದು ಎಸ್ ಎಸ್ ಎಲ್ಸಿ ವಿದ್ಯಾರ್ಥಿನಿ ನೇಣಿಗೆ ಶರಣಾದ ಘಟನೆ ಇಲ್ಲಿಗೆ ಸಮೀಪದ ಕೊಳ್ಳೇಗಾಲದಲ್ಲಿ ಮಂಗಳವಾರ ನಡೆದಿದೆ.
ಪಟ್ಟಣದ ದೇವಾಂಗಪೇಟೆಯ ಚೌಡೇಶ್ವರಿ ಗುಡಿ ಬೀದಿಯ ನಿವಾಸಿ ಲೋಕೇಶ್ ಎಂಬುವರ ಪುತ್ರಿ ದರ್ಶಿನಿ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ಎರಡು ತಿಂಗಳಿನಿಂದ ಆರಾಮಾಗಿದ್ದೀಯ. ಇದೀಗ ಎಸ್ ಎಸ್ ಎಲ್ಸಿ ಪರೀಕ್ಷೆ ದಿನಾಂಕ ನಿಗದಿ ಆಗಿದೆ. ಓದಿಕೊಳ್ಳುವುದನ್ನು ಬಿಟ್ಟು ಬರೀ ಮೊಬೈಲ್ ನಲ್ಲೇ ಆಟವಾಡಿಕೊಂಡಿದ್ದರೆ ಪರೀಕ್ಷೆ ಹೇಗೆ ಪಾಸ್ ಮಾಡುತ್ತೀಯ ಎಂದು ಪೋಷಕರು ಬುದ್ಧಿ ಮಾತು ಹೇಳಿದ್ದಾರೆ. ಇಷ್ಟಕ್ಕೇ ಬೇಸರಗೊಂಡ ಈಕೆ ಮನೆಯೊಳಗೆ ಹೋಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.












Click it and Unblock the Notifications