ಶ್ರೀ ಹಿಂದೂ -ಮುಸ್ಲಿಂ ಮಹಾಗಣಪತಿ ವಿಸರ್ಜನೆ: ಕೆ.ಬಿದರೆಯಲ್ಲಿ ಮನೆ ಮಾಡಿದ ಸಂಭ್ರಮ

ಚಿಕ್ಕಮಗಳೂರು, ಸೆಪ್ಟೆಂಬರ್‌ 28: ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕೆ.ಬಿದರೆ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಸಮಾಜದವರು ಒಟ್ಟಾಗಿ ಸೇರಿ ಶ್ರೀ ಹಿಂದೂ -ಮುಸ್ಲಿಂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಪ್ರತಿಷ್ಠಾಪನೆ ಮಾಡಲಾದ ಗಣೇಶನ ವಿಗ್ರಹವನ್ನು ಇಂದು ಅದ್ಧೂರಿಯಾಗಿ ವಿಸರ್ಜನೆ ಮಾಡಲಾಯಿತು.

ಈ ಕೆ.ಬಿದರೆ ಗ್ರಾಮದ ವಿಶೇಷತೆ ಎಂದರೆ ಇಲ್ಲಿ 70% ಹಿಂದೂಗಳು ಮತ್ತು 30% ಮುಸ್ಲಿಂ ಬಾಂಧವರು ಇದ್ದಾರೆ. ರಂಜಾನ್ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಮುಸ್ಲಿಂ ಬಾಂಧವರು ಹಾಗೂ ಹಿಂದೂಗಳು ಜೊತೆಗೆ ಸೇರಿ ಆಚರಣೆ ಮಾಡುತ್ತಾರೆ. ಅದೇ ರೀತಿ ಗಣಪತಿ ಹಬ್ಬವನ್ನು ಹಿಂದೂಗಳ ಜೊತೆಗೆ ಸೇರಿ ಮುಸ್ಲಿಂ ಭಾಂದವರು ಆಚರಣೆ ಮಾಡುವುದು ವಿಶೇಷವಾಗಿದೆ.

shri-hindu-muslim-mahaganapati

ಇನ್ನು ವೇದಿಕೆ ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ಮಠದ ಸ್ವಾಮಿಗಳು ಮತ್ತು ಮಸೀದಿ ಧರ್ಮ ಗುರುಗಳು ಈ ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇನ್ನು ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತಾನಾಡಿದ ಕಡೂರು ಶಾಸಕ 'ಕೆಎಸ್ ಆನಂದ್ ಇಡೀ ಕರ್ನಾಟಕ ರಾಜ್ಯದಲ್ಲೇ ಮೊದಲ ಬಾರಿಗೆ ಹಿಂದೂ ಮುಸ್ಲಿಂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡುತ್ತಿರುವುದು ನನಗೆ ತುಂಬಾ ಖುಷಿಯಾಗಿದೆ, ಇದೆ ರೀತಿ ಒಗ್ಗಟಾಗಿ ಎಲ್ಲರೂ ಇರಬೇಕು' ಎಂದರು .

ಸಂಸ್ಕೃತ ಕಲಿಯಲು ಕಾಫಿನಾಡಿಗೆ ಬಂದ ಇಸ್ರೇಲ್ ವಿದ್ಯಾರ್ಥಿಗಳು

ಚಿಕ್ಕಮಗಳೂರು : ಇಸ್ರೇಲ್‌ನಲ್ಲಿ ಸಂಸ್ಕೃತ ದಲ್ಲೇ ಪಿಎಚ್ ಡಿ ಪಡೆದಿರುವ ಉಪನ್ಯಾಸಕ ರಫಿ ತಮ್ಮ 9 ವಿದ್ಯಾರ್ಥಿಗಳೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ. ಅದರಲ್ಲೂ ರಾಜ್ಯದ ಚಿಕ್ಕಮಗಳೂರಿನ ಹಿರೇಮಗಳೂರಿನಲ್ಲಿರುವ ಕೋದಂಡ ರಾಮ ಸ್ವಾಮಿ ದೇವಾಲಯದಲ್ಲಿ ಸಂಸ್ಕೃತ ಕಲಿಕೆ ಮಾಡಿದ್ದಾರೆ.

ಈ 9ಮಂದಿ ವಿದ್ಯಾರ್ಥಿಗಳು ಇಸ್ರೇಲ್ ನಲ್ಲಿ 2ನೇ ವರ್ಷದ ಬಿ.ಎ ಪದವಿ, ಮೊದಲನೇ ವರ್ಷದ ಎಂ.ಎ ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಪನ್ಯಾಸಕ ರಫಿ,ತನ್ನ ವಿದ್ಯಾರ್ಥಿಗಳಿಗೆ ಭಾರತದ ಸಂಸ್ಕೃತ, ಭಾಷೆ, ಆಚಾರ-ವಿಚಾರ ತಿಳಿಯಲು ವಿದ್ಯಾರ್ಥಿಗಳೊಂದಿಗೆ ಆಗಮಿಸಿದ್ದಾರೆ.

ಭಾರತೀಯ ಜನರೇ ಭಾರತೀಯ ಸನಾತನ ಸಂಸ್ಕೃತಿಯನ್ನು ವಿರೋಧಿಸುತ್ತಿರುವ ಇಂಥ ದಿನದಲ್ಲಿ, ದಿನದಿಂದ ದಿನಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗಿ ನಾವು-ನಮ್ಮದೆಂಬುದರ ಅರಿವಿಲ್ಲದೆ ಬದುಕುತ್ತಿರುವ ಭಾರತೀಯ ಜನರುಗಳು. ಇಲ್ಲಿಗೆ ಸಂಸ್ಕೃತ ಕಲಿಯಲು ಬಂದಿರುವ ಈ ವಿದ್ಯಾರ್ಥಿಗಳನ್ನು ನೋಡಿ ಕಲಿಯುವುದು ಸಾಕಷ್ಟಿದೆ.

ಇಸ್ರೇಲ್ ವಿದ್ಯಾರ್ಥಿಗಳು ಸದ್ಯ ಸಂಸ್ಕೃತದಲ್ಲೇ ಮಾತನಾಡುವಷ್ಟು ಸಮರ್ಥರಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ನಮ್ಮ ಭಾಷೆ ಗೊತ್ತಿಲ್ಲ, ಕರ್ನಾಟಕದಲ್ಲಿ ಸ್ನೇಹಿತರು-ಸಂಬಂಧಿಕರು ಇಲ್ಲ. ಇಲ್ಲಿನ ಊಟ-ತಿಂಡಿಯ ಅರಿವಿಲ್ಲ. ಆದರೂ ಹಿರೇಮಗಳೂರಿನಲ್ಲಿ ಉಳಿದುಕೊಂಡು ಸಂಸ್ಕೃತ ಕಲಿಯುತ್ತಿರುವ ಇವರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+