• search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲೆಮಹದೇಶ್ವರ ಬೆಟ್ಟದಲ್ಲಿ 27 ದಿನಕ್ಕೆ 1.70 ಕೋಟಿ ರೂ. ಸಂಗ್ರಹ!

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಜುಲೈ 15: ರಾಜ್ಯದ ಪ್ರಮುಖ ಮತ್ತು ಹೆಚ್ಚು ಆದಾಯ ಹೊಂದಿರುವ ದೇವಾಲಯಗಳಲ್ಲಿ ಒಂದಾಗಿರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕೋಟ್ಯಂತರ ರೂ ನಗದು, ಕೆ.ಜಿಗಟ್ಟಲೇ ಬೆಳ್ಳಿ ಸಂಗ್ರಹವಾಗಿದೆ.

ಗುರುವಾರ ಬೆಳಗ್ಗೆಯಿಂದ ಸಂಜೆವರೆಗೆ ಹುಂಡಿ ಎಣಿಕೆ ಕಾರ್ಯ ನಡೆದಿದ್ದು ಕೇವಲ 27 ದಿನಗಳಲ್ಲಿ 1,70,65,814 ರೂ. ಸಂಗ್ರಹವಾಗಿದೆ. ಇದರಲ್ಲಿ ನಾಣ್ಯಗಳೇ 9 ಲಕ್ಷದಷ್ಟಿದೆ‌. ಇದರೊಂದಿಗೆ 80 ಗ್ರಾಂ ಚಿನ್ನ ಹಾಗೂ 1.4 ಕೆಜಿ ಬೆಳ್ಳಿಯನ್ನು ಏಳುಮಲೆ ಒಡೆಯನಿಗೆ ಭಕ್ತರು ಕಾಣಿಕೆ ರೂಪದಲ್ಲಿ ಅರ್ಪಿಸಿದ್ದಾರೆ.

ತುಮಕೂರಿನಲ್ಲಿ 949 ವರ್ಷಗಳ ಹಿಂದಿನ ದೇವಸ್ಥಾನವೇ ಮಂಗಮಾಯ!ತುಮಕೂರಿನಲ್ಲಿ 949 ವರ್ಷಗಳ ಹಿಂದಿನ ದೇವಸ್ಥಾನವೇ ಮಂಗಮಾಯ!

ಮಲೆಮಹದೇಶ್ವರ ಬೆಟ್ಟದಲ್ಲಿ ವಿವಿಧ ಸೇವೆ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ವಾರಾಂತ್ಯ ಮತ್ತು ಸೋಮವಾರದಂದು ಭಕ್ತರ ದಂಡೇ ಹರಿದು ಬಂದು ಕೇವಲ ಚಿನ್ನದ ರಥ, ಲಡ್ಡು ಮಾರಾಟ ಹಾಗೂ ಇತರ ಸೇವೆಗಳಿಂದಲೇ ದಿನವೊಂದಕ್ಕೆ ಲಕ್ಷಾಂತರ ರೂ. ಹೆಚ್ಚು ಆದಾಯ ಬರುತ್ತಿದೆ.

ಹುಂಡಿ ಎಣಿಕೆ ವೇಳೆ ಹಣ ಕದ್ದ ಆರೋಪ
ಇನ್ನು ಹುಂಡಿ ಎಣಿಕೆಯ ವೇಳೆ ಹಣ ಕದ್ದ ಆರೋಪದಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಲೆ ಮಹದೇಶ್ವರ ಬೆಟ್ಟದ ನಿವಾಸಿಯಾದ ಪುದೂರು ಗ್ರಾಮದ ಪನೀರ್ ಸೆಲ್ವಂ ಬಂಧಿತ ಆರೋಪಿ. ಈತ ಪ್ರಾಧಿಕಾರದ ಡಿ ಗ್ರೂಪ್ ನೌಕರನೆಂದು ತಿಳಿದುಬಂದಿದೆ.

ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ನೌಕರರು ಭಾಗವಹಿಸಿದ್ದು, ಇದರಲ್ಲಿ ಪನೀರ್ ಸೆಲ್ವಂ ಕೂಡ ಇದ್ದನು. ಎಣಿಕೆಯ ವೇಳೆ ಸಂಗ್ರಹವಾದ ಹಣವನ್ನು ಜೋಡಿಸಿ ಟೇಬಲ್‍ನಲ್ಲಿ ಇಡಲಾಗಿತ್ತು. ಆದರೆ ಎಣಿಕೆ ಕಾರ್ಯದಲ್ಲಿ ಪನೀರ್ ಸೆಲ್ವಂನ ವರ್ತನೆಯ ಮೇಲೆ ಅನುಮಾನ ವ್ಯಕ್ತವಾಯಿತು. ಈ ಬಗ್ಗೆ ಆತನನ್ನು ಪರಿಶೀಲಿಸಿದಾಗ ಜೇಬಿನಲ್ಲಿ 500ರೂನ 80 ನೋಟುಗಳುಳ್ಳ 40 ಸಾವಿರ ರೂ ಇತ್ತು. ಈ ಬಗ್ಗೆ ಅಧಿಕಾರಿಗಳು ವಿಚಾರಿಸಲಾಗಿ ಆತ ಎಟಿಎಂನಿಂದ 20 ಸಾವಿರ ರೂ ಹಾಗೂ ಬೇರೆ ವ್ಯಕ್ತಿಯಿಂದ 20 ಸಾವಿರ ರೂ ಪಡೆದಿರುವುದಾಗಿ ತಿಳಿಸಿದ್ದಾನೆ.

Rs 1.7 Crore Hundi Collection at Mahadeshwara Hills Temple

ಆದರೆ, ಹುಂಡಿ ಎಣಿಕೆಯಲ್ಲಿ ಭಾಗವಹಿಸುವವರು ಹಣವನ್ನು ಹೊಂದುವಂತಿಲ್ಲ ಎಂಬ ನಿಯಮವಿದೆ. ಹಾಗಿದ್ದರೂ ಹಣವನ್ನು ಹೊಂದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದ್ದರಿಂದ ಪ್ರಾಧಿಕಾರದ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಆತನನ್ನ ಬಂಧಿಸಲಾಗಿದೆ. ಈ ಸಂಬಂಧ ಮಲೆಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Male Mahadeshwara Temple at M.M. Hills has collection of ₹1.7 crore by way of donation and contribution during the last 27 days. Hundi also yielded 80 gram of gold and 1.4 kg of silver.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X