ದೇಶ ಕಾಯ್ದು ಊರಿಗೆ ವಾಪಸ್ಸಾದ ಸೈನಿಕನ ಹೊತ್ತು ಮೆರೆಸಿದ ಜನ
ಚಾಮರಾಜನಗರ, ಆಗಸ್ಟ್ 14: ವರ್ಷಾನುಗಟ್ಟಲೆ ದೇಶದ ಗಡಿ ಕಾದು ಸೇನೆ ಮಾಡಿ ಸ್ವಂತ ಊರಿಗೆ ವಾಪಸ್ಸಾದ ಸೈನಿಕನನ್ನು ಊರಿನ ಜನ ಭರ್ಜರಿಯಾಗಿ ಸ್ವಾಗತ ಮಾಡಿದ್ದಾರೆ.
22 ವರ್ಷ ಸೇನೆಯಲ್ಲಿ ಕೆಲಸ ಮಾಡಿ ಊರಿಗೆ ವಾಪಸ್ಸಾದ ಚಾಮರಾಜನಗರದ ಮಂಜುನಾಥ್. ಆರ್ ಅವರನ್ನು ಊರಿನ ಜನ ಹೆಗಲ ಮೇಲೆ ಹೊತ್ತುಕೊಂಡು, ಹಾರ ತುರಾಯಿಗಳನ್ನು ಹಾಕಿ ಜಯಕಾರಗಳನ್ನು ಕೂಗಿ ಸ್ವಾಗತಿಸಿದ್ದಾರೆ.

ಚಾಮರಾಜನಗರದಲ್ಲಿಯೇ ಹುಟ್ಟಿದ ಮಂಜುನಾಥ ಅವರು ಎಳವೆಯಿಂದಲೇ ಇದ್ದ ಸೈನ್ಯಕ್ಕೆ ಸೇರುವ ಆಸೆಯಂತೆ 1996ರಲ್ಲಿ ಸೈನ್ಯಕ್ಕೆ ಸೇರಿದರು. ಆ ನಂತರ ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಪೂಂಚ್ ಸೆಕ್ಟರ್, ಎಲ್‌ಓಸಿ, ಅಮರನಾಥ ಯಾತ್ರೆ, ವಿಜಯ್ ಪೂಂಚ್, ಉರಿ ಸೆಕ್ಟರ್, ದೆಹಲಿ ಇನ್ನೂ ಹಲವು ಕಠಿಣಾತಿಕಠಿಣ ಸ್ಥಳಗಳಲ್ಲಿ ಸೇವೆ ಮಾಡಿ ಇದೀಗ ನಿವೃತ್ತರಾಗಿ ಊರಿಗೆ ವಾಪಸ್ಸಾಗಿದ್ದಾರೆ.

ತಮಗಾಗಿ ಇಷ್ಟು ವರ್ಷಗಳ ಕಾಲ ಗಡಿ ಕಾದ ಸೈನಿಕನಿಗೆ ಭಾರಿ ಸ್ವಾಗತ ನೀಡಿದ ಊರ ಜನ, ತಮ್ಮ ಹೆಗಲ ಮೇಲೆ ಸೈನಿಕನನ್ನು ಹೊತ್ತುಕೊಂಡು, ಹಾರ ತುರಾಯಿಗಳನ್ನು ಹಾಕಿ, ಜಯಕಾರಗಳನ್ನು ಕೂಗಿ ಮೆರವಣಿಗೆ ಮಾಡಿದ್ದಾರೆ. ಊರ ದೇವರಿಗೆ ನಮಿಸಿದ ನಿವೃತ್ತ ಸೈನಿಕ ಮಂಜುನಾಥ ಜನರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.












Click it and Unblock the Notifications