ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ ರಾಯಭಾರಿ ಆಗಲು ಸಿದ್ಧ: ರಾಘವೇಂದ್ರ ರಾಜ್‌ಕುಮಾರ್

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ನವೆಂಬರ್‌, 04: ಚೆಲುವ ಚಾಮರಾಜನಗರ ರಾಯಭಾರಿ ಆಗುವ ಅವಕಾಶ ಸಿಕ್ಕರೇ ಕಣ್ಣಿಗೆ ಒತ್ತಿಕೊಂಡು ನಿಭಾಯಿಸುತ್ತೇನೆ. ನಾನು ಚೆಲುವ ಚಾಮರಾಜನಗರ ರಾಯಭಾರಿಯಾಗಲು ಸಿದ್ಧ ಎಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದರು.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ರಾಜ್‌ಕುಮಾರ್ ಚೆಲುವ ಚಾಮರಾಜನಗರ ರಾಯಭಾರಿ ಆಗಿದ್ದರು. ಅದನ್ನು ತಮ್ಮ ಕುಟುಂಬದ ಯಾರಾದರೂ ಮುಂದುವರಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಪುನೀತ್ ರಾಜ್‌ಕುಮಾರ್ ಆಗಲು ಸಾಧ್ಯವಿಲ್ಲ. ಆದರೆ ರಾಯಭಾರಿ ಆಗುವ ಅವಕಾಶ ಸಿಕ್ಕರೇ ಖಂಡಿತವಾಗಿಯೂ ನನ್ನ ಕಣ್ಣಿಗೆ ಒತ್ತಿಕೊಂಡು ನಿಭಾಯಿಸಿಕೊಂಡು ಹೋಗುತ್ತೇನೆ. ಅಣ್ಣನಾಗಿ ಅದನ್ನು ನೆರವೇರಿಸಿಕೊಂಡು ಹೋಗುತ್ತೇನೆ ಎಂದರು.

ಬಳ್ಳಾರಿಯಲ್ಲಿ ಅಪ್ಪು ಪ್ರತಿಮೆ ಅನಾವರಣಗೊಳಿಸಿದ ಗಾಲಿ ಜನಾರ್ದನ ರೆಡ್ಡಿಬಳ್ಳಾರಿಯಲ್ಲಿ ಅಪ್ಪು ಪ್ರತಿಮೆ ಅನಾವರಣಗೊಳಿಸಿದ ಗಾಲಿ ಜನಾರ್ದನ ರೆಡ್ಡಿ

ಚಾಮರಾಜನಗರಕ್ಕೆ ಬರಲು ಅವಕಾಶ ಮಾಡಿಕೊಡುವಂತೆ ಆಗಾಗ್ಗೆ ದೇವರಲ್ಲಿ ಕೇಳಿಕೊಳ್ಳುತ್ತೇನೆ. ನಮ್ಮ ಕುಟುಂಬಕ್ಕೆ ಎರಡು ಕರ್ನಾಟಕ ರತ್ನ ಬರಲು ಅಭಿಮಾನಿಗಳೇ ಕಾರಣ. ಚಾಮರಾಜನಗರಕ್ಕೆ ಬಂದರೆ ಮನೆಗೆ ಬಂದ ಖುಷಿ ಆಗುತ್ತದೆ ಎಂದರು. ಗಂಧದಗುಡಿ ಚಿತ್ರ ಪರಿಸರ ಉಳಿಸಿ, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿ ಎಂಬ ಸಂದೇಶವನ್ನು ಕೊಡಲಿದೆ. ಅದನ್ನು ಅಭಿಮಾನಿಗಳು ಪಾಲಿಸಿದರೆ ಪುನೀತ್‌ಗೆ ಗೌರವ ಸಲ್ಲಿಸಿದಂತೆ ಆಗುತ್ತದೆ ಎಂದು ರಾಘಣ್ಣ ಹೇಳಿದ್ದಾರೆ.

ಪುನೀತ್‌ ಆಯ್ಕೆಗೆ ತಿರ್ಮಾನಿಸಿದ್ದ ಜಿಲ್ಲಾಡಳಿತ

ಪುನೀತ್‌ ಆಯ್ಕೆಗೆ ತಿರ್ಮಾನಿಸಿದ್ದ ಜಿಲ್ಲಾಡಳಿತ

ಜಿಲ್ಲೆಯ ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಜಿಲ್ಲಾಡಳಿತ ರೂಪಿಸಿದ್ದ 'ಚೆಲುವ ಚಾಮರಾಜನಗರ"ಕ್ಕೆ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ರಾಯಭಾರಿ ಆಗಿದ್ದರು. ಆಗಿನ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರ ವಿಶೇಷ ಆಸಕ್ತಿಯಿಂದ "ಚೆಲುವ ಚಾಮರಾಜನಗರ" ಯೋಜನೆ ರೂಪುಗೊಂಡಿತ್ತು. ಇದಕ್ಕೆ ರಾಯಭಾರಿಯನ್ನಾಗಿ ಯಾರನ್ನು ಮಾಡಬೇಕು ಎಂಬ ಪ್ರಶ್ನೆ ಜಿಲ್ಲಾಡಳಿತದ ಮುಂದೆ ಬಂದಾಗ, ಜಿಲ್ಲೆಯವರೇ ಆದ ವರನಟ ಡಾ.ರಾಜ್‌ಕುಮಾರ್ ಅವರ ಪುತ್ರ ಪುನೀತ್ ರಾಜ್‌ಕುಮಾರ್ ಅವರೇ ಇದಕ್ಕೆ ಸೂಕ್ತ ಎಂದು ಜಿಲ್ಲಾಡಳಿತ ತೀರ್ಮಾನ ಕೈಗೊಂಡಿತ್ತು. ಆ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಸುರೇಶ್ ಕುಮಾರ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಖುದ್ದು ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿ ಮಾಡಿ ವಿಷಯ ಪ್ರಸ್ತಾಪಿಸಿದ್ದರು.

ಹುಬ್ಬಳ್ಳಿಯಲ್ಲಿ ಪುನೀತ್‌ ರಾಜ್‌ಕುಮಾರ್‌ ನೆನೆದು ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿಹುಬ್ಬಳ್ಳಿಯಲ್ಲಿ ಪುನೀತ್‌ ರಾಜ್‌ಕುಮಾರ್‌ ನೆನೆದು ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿ

ಸಂತೋಷದಿಂದ ಒಪ್ಪಿಗೆ ಸೂಚಿಸಿದ್ದ ಅಪ್ಪು

ಸಂತೋಷದಿಂದ ಒಪ್ಪಿಗೆ ಸೂಚಿಸಿದ್ದ ಅಪ್ಪು

ಇದಕ್ಕೆ ಸಂತೋಷದಿಂದಲೇ ಒಪ್ಪಿಗೆ ಸೂಚಿಸಿದ ಪುನೀತ್ ರಾಜ್‌ಕುಮಾರ್ "ಚಲುವ ಚಾಮರಾಜ ನಗರ"ದ ರಾಯಭಾರಿ ಆಗಿದ್ದರು. ಯೋಜನೆಯ ಅನುಷ್ಠಾನಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಸುದ್ದಿಗೋಷ್ಠಿ ಕರೆದಿದ್ದರು. ಈ ಸಂದರ್ಭದಲ್ಲಿ ಬೇರೆಡೆ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಪುನೀತ್ ರಾಜ್‌ಕುಮಾರ್ ಆನ್‌ಲೈನ್ ಲೈವ್‌ನಲ್ಲಿ ಆಗಿನ ಸಚಿವ ಸುರೇಶ್‌ಕುಮಾರ್ ಹಾಗೂ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರೊಂದಿಗೆ ಮಾತನಾಡಿದ್ದರು.

ಅಪ್ಪು ನೆನೆದು ಕಂಬನಿ ಮಿಡಿಯುತ್ತಿದೆ ಜನತೆ

ಅಪ್ಪು ನೆನೆದು ಕಂಬನಿ ಮಿಡಿಯುತ್ತಿದೆ ಜನತೆ

ಈ ವೇಳೆ ಪುನೀತ್ ರಾಜ್‌ಕುಮಾರ್ ಮಾತನಾಡಿದ್ದು, "ಚೆಲುವ ಚಾಮರಾಜನಗರದ ರಾಯಭಾರಿಯನ್ನಾಗಿ ನನ್ನನ್ನು ಆಯ್ಕೆ ಮಾಡಿರುವುದು ಬಹಳ ಖುಷಿ ತಂದಿದೆ. ಇದಕ್ಕೆ ಬಹಳ ಸಂತೋಷದಿಂದ ಒಪ್ಪಿದ್ದೇನೆ. ತಂದೆಯ ತವರಾದ ಚಾಮರಾಜನಗರ ಎಂದರೆ ನನಗೆ ಬಹಳ ಇಷ್ಟ. ಜಿಲ್ಲೆಯ ರಾಯಭಾರಿ ಮಾಡಿರು ವುದಕ್ಕೆ ಹೆಮ್ಮೆ ಪಡುತ್ತೇನೆ" ಎಂದಿದ್ದರು. ಜಿಲ್ಲೆಯ ರಾಯಭಾರಿ ಆಗಿದ್ದ ಪುನೀತ್ ರಾಜ್‌ಕುಮಾರ್ ಅವರನ್ನು ಚಾಮರಾಜ ನಗರಕ್ಕೆ ಆಹ್ವಾನಿಸಿ ಕಾರ್ಯಕ್ರಮ ಮಾಡಬೇಕು ಎಂದು ಜಿಲ್ಲಾಡಳಿತ ತೀರ್ಮಾನಿಸಿತ್ತು. ಈ ವೇಳೆ ಕೊರೊನಾ ಕಾರಣ ಕಾರ್ಯಕ್ರಮ ರೂಪುಗೊಳ್ಳಲಿಲ್ಲ. ಜಿಲ್ಲೆಯ ಪ್ರವಸೋದ್ಯಮ ಅಭಿವೃದ್ಧಿಗೊಳಿಸಲು ರೂಪುಗೊಂಡಿದ್ದ "ಚೆಲುವ ಚಾಮರಾಜನಗರ"ದ ರಾಯಭಾರಿ ಆಗಿದ್ದ ಪುನೀತ್ ರಾಜ್‌ಕುಮಾರ್ ಇನ್ನು ನೆನಪು ಮಾತ್ರ. ಅವರ ಅಕಾಲಿಕ ಮರಣಕ್ಕೆ ಜಿಲ್ಲೆಯ ಜನತೆ ಅಲ್ಲದೇ, ಇಡೀ ರಾಜ್ಯದ ಜನತೆ ಕಂಬನಿ ಮಿಡಿಯುತ್ತಿದ್ದಾರೆ.

ಶ್ರೀಮಂತ ಸಾಂಸ್ಕೃತಿಕ ಪರಂಪರೆ ಇಲ್ಲಿದೆ

ಶ್ರೀಮಂತ ಸಾಂಸ್ಕೃತಿಕ ಪರಂಪರೆ ಇಲ್ಲಿದೆ

ಇದು ಪೂರ್ವ ಪಶ್ಚಿಮ ಘಟ್ಟಗಳ ಬೆಸುಗೆಯ ವಿಶಿಷ್ಟ ತಾಣವಾದ ಚಾಮರಾಜನಗರ ಜಿಲ್ಲೆ ಪಾಕೃತಿಕವಾಗಿ ಶ್ರೀಮಂತ ಜಿಲ್ಲೆಯಾಗಿದೆ. ಅಪ್ರತಿಮ ನೈಸರ್ಗಿಕ ಸಂಪತ್ತು ಹಾಗೂ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸ್ವತ್ತು ಹೊಂದಿರುವ ಕೆಲವೇ ಜಿಲ್ಲೆಗಳ ಪೈಕಿ ಚಾಮರಾಜನಗರವೂ ಒಂದು ಬಂಡೀಪುರ, ಬಿಳಿಗಿರಿ ರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯ, ಮಲೆಮಹದೇಶ್ವರ ವನ್ಯಧಾಮ, ಭರಚುಕ್ಕಿ ಜಲಪಾತ, ಹೊಗೇನಕಲ್ ಜಲಪಾತ, ಮಲೆಮಹದೇಶ್ವರಬೆಟ್ಟ, ತಮಿಳುನಾಡು ಗಡಿಯಲ್ಲಿರುವ ಪುಣಜನೂರು ಸೂಕ್ಷ್ಮ ಅರಣ್ಯ ಪ್ರದೇಶದಂತಹ ಪ್ರಾಕೃತಿಕ ಸೊಬಗನ್ನು ಹೊಂದಿದೆ. ಜನಪದ ಸಂಸ್ಕೃತಿಯನ್ನೂ ಇಂದಿಗೂ ಜೀವಂತವಾಗಿರಿಸಿಕೊಂಡಿದ್ದು, ಹತ್ತಾರು ಐತಿಹಾಸಿಕ ಹಾಗೂ ಪಾರಂಪರಿಕ ಸ್ಥಳಗಳನ್ನೂ ತನ್ನ ತೆಕ್ಕೆಯಲ್ಲಿಟ್ಟುಕೊಂಡಿದೆ.

English summary
Actor Raghavendra Rajkumar said in Chamarajanagar ready to become Chaluva Chamarajanagar development ambassador. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X