ಬಿಪಿಎಲ್ ಕಾರ್ಡ್ ರದ್ದು ನಿರ್ಧಾರ: ಚಾಮರಾಜನಗರದಲ್ಲಿ ಕನ್ನಡಪರ ಹೋರಾಟಗಾರರ ನಿಲುವೇನು?
BPL Card: ಈಗಾಗಲೇ ಹಲವು ಜಿಲ್ಲೆಗಳಲ್ಲಿ ನಕಲಿ ದಾಖಲೆ ನೀಡಿ ಪಡೆದಂತಹ ಬಿಪಿಎಲ್ ಕಾರ್ಡ್‌ಗಳನ್ನು ರಾಜ್ಯ ಸರ್ಕಾರ ರದ್ದು ಮಾಡುತ್ತಾ ಬರುತ್ತಿದೆ. ಅಲ್ಲದೇ, ಇಂತಹವರನ್ನು ಎಪಿಎಲ್‌ಗೆ ಸೇರ್ಪಡೆ ಮಾಡುವ ಕೆಲಸವನ್ನು ಮಾಡುತ್ತಿದೆ. ಮತ್ತೊಂದೆಡೆ ಬಡವರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಹಲವೆಡೆ ಆಕ್ರೊಶಗಳು ಭುಗಿಲೆದ್ದಿವೆ.
ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುತ್ತಿರುವುದನ್ನು ಖಂಡಿಸಿ ಕನ್ನಡಪರ ಹೋರಾಟಗಾರರು ತಮಟೆ ಬಾರಿಸಿ ಅಕ್ರೋಶ ಹೊರಹಾಕಿದ ಘಟನೆ ಗಡಿಜಿಲ್ಲೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರದ ಜಿಲ್ಲಾಡಳಿತ ಮುಂಭಾಗ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಜಮಾಯಿಸಿದ ಕನ್ನಡಪರ ಹೋರಾಟಗಾರರು ರಾಜ್ಯ ಸರ್ಕಾರ, ಸಿಎಂ ಸಿದ್ದರಾಮಯ್ಯ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಅವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಯಾವುದೇ ಕಾರಣಕ್ಕೂ ಕೂಡ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಬಾರದು. ರದ್ದು ಪಡಿಸುವುದನ್ನು ನಿಲ್ಲಿಸದಿದ್ದರೇ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಕನ್ನಡಪರ ಹೋರಾಟಗಾರರು ಎಚ್ಚರಿಕೆ ಸಂದೇಶವನ್ನು ರವಾನಿಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೊಶ ಹೊರಹಾಕಿದ್ದಾರೆ.
ಬಿಪಿಎಲ್ ಕಾರ್ಡ್‌ನಿಂದಾಗಿ ಅನಾರೋಗ್ಯ ಸಮಸ್ಯೆ ಉಳ್ಳವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತುಂಬಾ ಸಹಾಯ ಆಗುತ್ತಿದೆ. ಒಂದು ವೇಳೆ ಬಿಪಿಎಲ್ ರದ್ದಾದರೆ, ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಆಕ್ರೋಶ ಹೊರಹಾಕಿದರು. ಈ ಹಿಂದೆಯೂ ಸಹ ಚಾಮರಾಜನಗರದಲ್ಲಿ ಬಿಪಿಎಲ್ ಕಾರ್ಡ್ ರದ್ದು ಖಂಡಿಸಿ ಪ್ರತಿಭಟನೆ ನಡೆಸಿದ್ದರು.
ಶ್ರೀಮಂತರ ಬಳಿಯಿರುವ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿ. ಆದರೆ, ನಡವರ ಬಳಿಯಿರುವ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಪಡಿಸಬೇಡಿ, ಇದರಿಂದಲೇ ಒಂದೊತ್ತು ಊಟ ಮಾಡುತ್ತಿದ್ದಾರೆ. ಅಲ್ಲದೆ, ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಲು ಇದು ಬಡವರಿಗೆ ಈ ಕಾರ್ಡ್ ತುಂಬಾ ಅಗತ್ಯವಾಗಿದೆ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರು.
ಸರ್ಕಾರದ ವಿರುದ್ಧ ಆಕ್ರೊಶ: ಬಿಪಿಎಲ್ ಕರ್ಡ್‌ಗಳನ್ನು ಅವೈಜ್ಞಾನಿಕವಾಗಿ ರದ್ದು ಪಡಿಸಲಾಗುತ್ತಿದೆ ಎಂದು ಆರೋಪಿಸಿ ಕನ್ನಡಪರ ಹೋರಾಟಗಾರರು ತಮಟೆ ಬಾರಿಸಿ, ರಸ್ತೆ ತಡೆದು ಆಕ್ರೋಶ ಇತ್ತೀಚೆಗಷ್ಟೇ ಹೊರಹಾಕಿದ ಘಟನೆ ಚಾಮರಾಜನಗರದಲ್ಲಿ ನಡೆದಿತ್ತು.
ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ತಮಟೆ ಬಾರಿಸಿ ಆಹಾರ ಇಲಾಖೆ ವಿರುದ್ಧ ಘೋಷಣೆ ಕೂಗಿ ಕಿಡಿಕಾರಿದರು. ಬಿಪಿಎಲ್ ಕಾರ್ಡ್‌ಗಳನ್ನು ಮನಬಂದಂತೆ ರದ್ದು ಮಾಡಿ ಬಡವರ ಬಾಯಿಗೆ ಮಣ್ಣು ಹಾಕುತ್ತಿದ್ದಾರೆ. ಈ ಕಾರ್ಟ್‌ಗಳನ್ನು ಅವೈಜ್ಞಾನಿಕವಾಗಿ ರದ್ದು ಮಾಡಿದ್ದು, ಅರ್ಹರಿಗೆ ಮತ್ತೇ ಕಾರ್ಡ್ ನೀಡಬೇಕು. ಇಲ್ಲದಿದ್ದರೇ ನಿರಂತರವಾಗಿ ಧರಣಿ ಮಾಡಬೇಕಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.
ಪಡಿತರ ಚೀಟಿಯ ಪ್ರಯೋಜನಗಳು: ಪಡಿತರ ಚೀಟಿಯು ಉಚಿತ ಅಥವಾ ಕಡಿಮೆ ವೆಚ್ಚದ ಪಡಿತರವನ್ನು ಪಡೆಯುವುದಕ್ಕೆ ಮಾತ್ರವಲ್ಲ, ಅದರ ಮೂಲಕ ಇತರ ಅನೇಕ ಸೌಲಭ್ಯಗಳನ್ನು ಸಹ ಪಡೆಯಬಹುದಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.
* ಅರ್ಹರಿಗೆ ಮಾತ್ರ ವಿವಿಧ ಆಹಾರ ಪದಾರ್ಥಗಳ ಉಚಿತ ವಿತರಣೆ ಮಾಡಲಾಗುತ್ತದೆ.
* ಪಡಿತರ ಚೀಟಿದಾರರು ಸರ್ಕಾರ ನಿಗದಿಪಡಿಸಿದ ಅಗ್ಗದ ದರದಲ್ಲಿ ಆಹಾರ ಪದಾರ್ಥಗಳನ್ನು ಪಡೆಯುತ್ತಾರೆ.
* ಪಡಿತರ ಚೀಟಿಯ ಮೂಲಕ ಸರ್ಕಾರದ ವಿವಿಧ ಯೋಜನೆಗಳನ್ನು ಪಡೆಯಬಹುದು.
* ಪಡಿತರ ಚೀಟಿಯನ್ನು ಗುರುತಿನ ಪುರಾವೆಯಾಗಿ ಬಳಸಬಹುದು.
* ಅನೇಕ ಯೋಜನೆಗಳಲ್ಲಿ ಪಡಿತರ ಚೀಟಿದಾರರು ಸಾಲದ ಮೇಲೆ ಸಬ್ಸಿಡಿಯನ್ನು ಸಹ ಪಡೆಯುತ್ತಾರೆ.
* ಕೆಲವು ರಾಜ್ಯಗಳಲ್ಲಿ ಪಡಿತರ ಚೀಟಿದಾರರು ಆರೋಗ್ಯ ವಿಮೆಯ ಪ್ರಯೋಜನವನ್ನು ಸಹ ಪಡೆಯುತ್ತಾರೆ.
* ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಪಡಿತರ ಚೀಟಿಗಳ ಮೂಲಕವೂ ಪಡೆಯಬಹುದಾಗಿದೆ.
* ಪಡಿತರ ಚೀಟಿದಾರರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಕೆಲವು ಯೋಜನೆಗಳಿವೆ.












Click it and Unblock the Notifications