ಪ್ರತಾಪ್ ಸಿಂಹ ಕೂಡ ಮಹಿಷನ ವಂಶಸ್ಥ, ಅವರಿಗೆ ನಿಜವಾದ ಇತಿಹಾಸವೇ ಗೊತ್ತಿಲ್ಲ: ಬಿಎಸ್‌ಪಿ ಮುಖಂಡ
ಚಾಮರಾಜನಗರ, ಅಕ್ಟೋಬರ್, 05: ಪ್ರತಾಪ್ ಸಿಂಹ ಕೂಡ ಮಹಿಷನ ವಂಶಸ್ಥರೇ ಎಂದು ಬಿಎಸ್‌ಪಿ ಮುಖಂಡ ಹ.ರಾ.ಮಹೇಶ್ ಚಾಮರಾಜನಗರದಲ್ಲಿ ವ್ಯಂಗ್ಯವಾಡಿದ್ದಾರೆ.
ಚಾಮರಾಜನಗರದಲ್ಲಿ ಮಾಧ್ಯಮವರೊಟ್ಟಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಮನುವಾದಿ ಹಿನ್ನೆಲೆಯಿಂದ ಬಂದವರು. ಆದರೆ, ಅವರು ಸಹ ಮಹಿಷನ ವಂಶಸ್ಥರೇ ಆಗಿದ್ದಾರೆ. ಆದರೆ ಬಿಜೆಪಿಯ ಮನುವಾದ, ಬ್ರಾಹ್ಮಣವಾದದೊಳಗೆ ಸಿಲುಕಿದ್ದಾರೆ ಎಂದು ಸಂಸದ ವಿರುದ್ಧ ಕಿಡಿಕಾರಿದರು. ಇನ್ನು ಪ್ರತಾಪ್ ಸಿಂಹಗೆ ನಿಜವಾದ ಇತಿಹಾಸ ಗೊತ್ತಿಲ್ಲ, ಅದು ಅರಿವಾದರೆ ಮಹಿಷ ದಸರಾಗೆ ಅವರೇ ಮುಂದಾಗುತ್ತಾರೆ. ಮೈಸೂರು ಸಂಸದರಿಗೆ ಇತಿಹಾಸ ಅರ್ಥೈಸುವ ಕೆಲಸ ಮಾಡುತ್ತೇವೆ ಎಂದು ಟಾಂಗ್ ಕೊಟ್ಟಿದ್ದಾರೆ.

ಮೈಸೂರು ಶಾಸಕ ಶ್ರೀವತ್ಸ ಅವರು ಯಾವತ್ತು ಬದಲಾಗುವುದಿಲ್ಲ. ಯಾಕಂದರೆ ಅವರು ಮಹಿಷ ರಾಕ್ಷಸ ಎಂದು ಪ್ರತಿಬಿಂಬಿಸಿದ ಸಮುದಾಯಕ್ಕೆ ಸೇರಿದವರು.ಹಾಗಾಗಿ ಅವರು ಬದಲಾಗುವುದು ಡೌಟ್, ಆದರೆ ಪ್ರತಾಪ್ ಸಿಂಹ ಇವತ್ತಲ್ಲ ನಾಳೆ ಬದಲಾಗುತ್ತಾರೆ ಎಂದರು.
ಮುಂದಿನ ದಿನಗಳಲ್ಲಿ ಸಂಸದರಿಗೆ ಮಹಿಷನ ಇತಿಹಾಸ ತಿಳಿಸುತ್ತೇವೆ. ಆ ಮೂಲಕ ಸಂಸದರ ವಿಶ್ವಾಸ ತೆಗೆದುಕೊಂಡು ಮಹಿಷ ದಸರಾ ಆಚರಿಸುತ್ತೇವೆ. ಈಗ ಅವರು ಒಂದು ರಾಜಕೀಯ ಪಕ್ಷದಲ್ಲಿರುವುದರಿಂದ ಅಲ್ಲಿನ ಸಿದ್ಧಾಂತ ನಂಬಬೇಕಾಗುತ್ತೆ. ಕೆ.ಎಸ್.ಭಗವಾನರ ಒಕ್ಕಲಿಗರೆಲ್ಲ ಬೌದ್ಧರು ಎಂಬ ಪುಸ್ತಕ ಓದಿದರೆ, ಇತಿಹಾಸ ತಜ್ಞರ ಪುಸ್ತಕ ಓದಿದ್ರೆ ಖಂಡಿತ ಪ್ರತಾಪ್ ಸಿಂಹ ಬದಲಾಗುತ್ತಾರೆ ಎಂದು ಹೇಳಿದರು.
ಮಹಿಷ ದಸರಾ ವಿರೋಧಿಸಲು ಅವರಿಗೆ ಹಕ್ಕಿದೆ, ಅದೇ ರೀತಿ ಆಚರಣೆ ಮಾಡಲು ನಮಗೂ ಹಕ್ಕಿದೆ. ನಾವು ಮಹಿಷ ದಸರಾ ಆಚರಣೆ ಮಾಡೇ ಮಾಡುತ್ತೀವಿ ಎಂದರು.
135 ಕಿ.ಮೀ. ದೀಪಾಲಂಕಾರ
ಈ ಬಾರಿಯ ದಸರಾ ಮಹೋತ್ಸವದ ವೇಳೆ ಮೈಸೂರು ನಗರ ವಿದ್ಯುದೀಪಗಳಿಂದ ಝಗಮಗಿಸಲಿದ್ದು, ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳೊಂದಿಗೆ ಚಂದ್ರಯಾನ ಅನಾವರಣಗೊಳ್ಳಲಿದೆ.
ನಗರದ ಪ್ರಮುಖ ರಸ್ತೆಗಳ ಅರಮನೆ ಸುತ್ತ ಸೇರಿದಂತೆ ಸಯ್ಯಾಜಿ ರಾವ್ ರಸ್ತೆ, ಬಿಎನ್ ರಸ್ತೆ, ಇರ್ವೀನ್ ರಸ್ತೆ, ಆಲ್ಬರ್ಟ್ ವಿಕ್ಟರ್ ರಸ್ತೆ, ಜೆಎಲ್‌ಬಿ ರಸ್ತೆ, ಚಾಮರಾಜ ಜೋಡಿ ರಸ್ತೆ ಸೇರಿದಂತೆ ಹೊರ ವಲಯದಲ್ಲಿನ ಪ್ರಮುಖ ಹೆದ್ದಾರಿಗಳನ್ನು ಸೇರಿಸಿಕೊಂಡು 135 ಕಿ.ಮೀ. ಉದ್ದದ ರಸ್ತೆಗೆ ದೀಪಾಲಂಕಾರ ಮಾಡಲಾಗುತ್ತಿದೆ. ಜೊತೆಗೆ ನಗರ ವ್ಯಾಪ್ತಿಯಲ್ಲಿರುವ ಪ್ರಮುಖ 119 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ.
ಅಕ್ಟೋಬರ್ 15ರಿಂದ 24ರವರೆಗೆ ನಡೆಯುವ ನವರಾತ್ರಿ ವೇಳೆ ದೀಪಾಲಂಕಾರದಿಂದ ಮೈಸೂರು ಕಂಗೊಳಿಸಲಿದೆ. ಕಳೆದ ಬಾರಿ ದೀಪಾಲಂಕಾರದ ವೀಕ್ಷಣೆ ಅವಧಿಯನ್ನು ಪ್ರವಾಸಿಗರ ಕೋರಿಕೆ ಮೇರೆಗೆ ವಿಸ್ತರಿಸಲಾಗಿತ್ತು. ಈ ಬಾರಿಯೂ ವೀಕ್ಷಣೆಯ ಅವಧಿಯನ್ನು ವಿಸ್ತರಿಸಲು ಸೆಸ್ಕ್ ನಿರ್ಧರಿಸಿದೆ.
ನಗರದ ದೊಡ್ಡಕೆರೆ ಮೈದಾನ, ಕೆ.ಆರ್.ವೃತ್ತ, ಚಾಮರಾಜ ವೃತ್ತ, ಜಯಚಾಮರಾಜ ವೃತ್ತ(ಹಾರ್ಡಿಂಜ್), ರಾಮಸ್ವಾಮಿ ವೃತ್ತ, ರೈಲ್ವೆ ನಿಲ್ದಾಣ ಸಮೀಪ, ಗನ್‌ಹೌಸ್, ಎಲ್‌ಐಸಿ ವೃತ್ತ ಸೇರಿದಂತೆ ವಿವಿಧೆಡೆ ವಿದ್ಯುತ್ ದೀಪಗಳಿಂದಲೇ ಮಾಡಿರುವ 30ಕ್ಕೂ ಹೆಚ್ಚು ಆಕೃತಿಗಳನ್ನು ನಿರ್ಮಿಸಲಾಗುತ್ತಿದೆ.
ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಮತ್ತು ಹಾಸನ ಜಿಲ್ಲೆಗಳ ವಿದ್ಯಾರ್ಥಿಗಳು ರಾಷ್ಟ್ರಪ್ರೇಮ, ದೇಶಭಕ್ತಿ, ಪರಿಸರ ಪ್ರೇಮ, ಭಾವೈಕ್ಯತೆ, ಸಂವಿಧಾನದ ಆಶಯಗಳ ಕುರಿತಾದ ನೃತ್ಯರೂಪಕಗಳನ್ನು ಪ್ರದರ್ಶಿಸುವ ಮೂಲಕ ರಂಜಿಸಲಿದ್ದಾರೆ.
ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಅಕ್ಟೋಬರ್ 6ರಿಂದ ಯುವ ಸಂಭ್ರಮ ನಡೆಯಲಿದೆ. ಚಂದನವದ ತಾರಾ ದಂಪತಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿದ್ದಾರೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತಿಯಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ವೇಳೆ ಸಚಿವರಾದ ಕೆ.ವೆಂಕಟೇಶ್, ಶಿವರಾಜ ಸಂಗಪ್ಪ ತಂಗಡಗಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಶಾಸಕ ಕೆ.ಹರೀಶ್ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ದಸರಾ ಆಚರಣೆ ಸಂಬಂಧ ಈವರೆಗೆ 10 ಸಭೆಗಳನ್ನು ಮಾಡಿದ್ದೇನೆ. 18 ಸಮಿತಿಗಳನ್ನು ರಚಿಸಲಿದ್ದೇವೆ. ಸದಸ್ಯರನ್ನು ಕೂಡ ನೇಮಕ ಮಾಡಲಾಗುವುದು. ಯುವಕರನ್ನು ಆಕರ್ಷಿಸಲು ಯುವ ಸಂಭ್ರಮ ಮತ್ತು ಯುವ ದಸರಾ ಕಾರ್ಯಕ್ರಮಗಳು ಇರಲಿವೆ ಎಂದು ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಸರಾಗೆ 18 ಕೋಟಿ ಅನುದಾನ ನೀಡಿದೆ. ಅಗತ್ಯವಿದ್ದರೆ ಹೆಚ್ಚಿನ ಅನುದಾನ ನೀಡಲಿದೆ. ಕಳೆದ ದಸರಾಗಿಂತ ಕಡಿಮೆ ಹಣವನ್ನು ಖರ್ಚು ಮಾಡುವ ಗುರಿ ಹೊಂದಿದ್ದೇವೆ. ಪ್ರಾಯೋಜಕತ್ವಕ್ಕೆ ಆದ್ಯತೆ ಕೊಡುತ್ತೇವೆ ಎಂದು ಹೇಳಿದರು. ಒಂದು ಆಹಾರ ಮೇಳ ಇರಲಿದೆ. ಮತ್ತೊಂದು ಕಡೆ ಆಯೋಜನೆಗೆ ಆಲೋಚನೆ ಮಾಡುತ್ತೇವೆ. ಕವಿಗೋಷ್ಠಿ, ಯುವ ಸಂಭ್ರಮದಲ್ಲಿ ಒಳ್ಳೆಯ ಸಂದೇಶ ಕೊಡಬೇಕು. ಬಹುತ್ವ ಭಾರತ, ಭಾರತದ ಸಂವಿಧಾನದ ಆಶಯ, ಸಾಮರಸ್ಯದ ಸಂದೇಶವನ್ನು ಯುವ ಜನತೆಯ ಮೂಲಕ ಜನತೆಗೆ ತಿಳಿಸಲಿದ್ದೇವೆ ಎಂದರು.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications