ಪೊಲೀಸರ ಮೇಲೆ ದೂರು ಹಾಕಿದ ವಿಷಪ್ರಸಾದ ಆರೋಪಿ ಅಂಬಿಕಾ

ಚಾಮರಾಜನಗರ, ಡಿಸೆಂಬರ್ 21: ಪ್ರಸಾದಕ್ಕೆ ವಿಷಬೆರೆಸಿ 16 ಜೀವಗಳನ್ನು ಬಲಿ ಪಡೆದ ಗುರುತರ ಆರೋಪ ಹೊತ್ತಿರುವ ಅಂಬಿಕಾ ಇಂದು ಮಹಜರು ಮಾಡುವ ವೇಳೆ ಹುಚ್ಚಾಟ ಮೆರೆದಿದ್ದಾಳೆ.

ಪೊಲೀಸರ ಸುಪರ್ದಿಯಲ್ಲಿರುವ ಅಂಬಿಕಾಳನ್ನು ಇಂದು ಆಕೆಯ ಮನೆಗೆ ಕರೆತಂದು ಮಹಜರು ಮಾಡಲಾಯಿತು. ಆ ವೇಳೆ ಮನೆಯ ಬಳಿ ಊರ ಜನರು, ಮಾಧ್ಯಮದವರು ಸೇರಿದ್ದರು, ಈ ಸಮಯ ಜೋರಾಗಿ ಕೂಗಾಡಿದ ಅಂಬಿಕ ಪೊಲೀಸರು ನನ್ನ ಮೇಲೆ ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಎಂದು ಕೂಗಾಡಿದ್ದಾಳೆ.

ಪೊಲೀಸರೆ ನಮ್ಮ ಮನೆಯಲ್ಲಿ ವಿಷದ ಬಾಟಲಿಯನ್ನಿಟ್ಟಿದ್ದಾರೆ, ಬೇಕೆಂದೇ ಅವರು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅವರು ಕೂಗಾಡಿದ್ದಾರೆ. ಈ ವೇಳೆ ಮಹಿಳಾ ಪೊಲೀಸರು ಅಂಬಿಕಾಳನ್ನು ಎಳೆದುಕೊಂಡು ಹೋಗಿದ್ದಾರೆ.

poison prasadam case accused Ambika said police making false alligation on her

ವಿಷಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ, ಮಾದೇಶ, ದೊಡ್ಡಯ್ಯ ಅವರನ್ನು ಪ್ರಮುಖ ಆರೋಪಿಗಳನ್ನಾಗಿ ಬಂಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+