ಚಾಮರಾಜನಗರ: ಆನೆ ತುಳಿತದಿಂದ ಬಾಲಕ ಮೃತಪಟ್ಟರೂ ಬಾರದ ಪರಿಹಾರ: ಶಾಸಕ ಸಿ.ಪುಟ್ಟರಂಗಶೆಟ್ಟಿ ಆಕ್ರೋಶ

ಚಾಮರಾಜನಗರ, ಜುಲೈ, 25: ಆನೆ ತುಳಿತಕ್ಕೆ ಬಾಲಕ ಮೃತಪಟ್ಟರೂ ಮೊದಲ ಕಂತಿನ ಪರಿಹಾರ ನೀಡದ ಅರಣ್ಯಾಧಿಕಾರಿಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಬೆವರಿಳಿಸಿ ತರಾಟೆಗೆ ತೆಗೆದುಕೊಂಡರು.

ಚಾಮರಾಜನಗರ ತಾಲೂಕಿನ ಎತ್ತೆಗೌಡನದೊಡ್ಡಿ ಗ್ರಾಮದಲ್ಲಿ ಇತ್ತೀಚೆಗೆ ಆನೆ ತುಳಿತದಿಂದ ಗಾಯಗೊಂಡಿದ್ದ ಬಾಲಕ ಇಂದು ಅಸುನೀಗಿದ್ದಾನೆ. ಇನ್ನು ಮೃತ ಬಾಲಕನ ಮನೆಗೆ ಶಾಸಕರು ಭೇಟಿ ನೀಡಿದ ವೇಳೆ, ಮೊದಲ ಕಂತಿನ ಹಣ ಬಾರದಿರುವುದು ತಿಳಿದು ಎಸಿಎಫ್ ಸುರೇಶ್ ಹಾಗೂ ಆರ್‌ಎಫ್ಒ ನಿಸಾರ್ ಅಹಮದ್ ಅವರನ್ನು ತರಾಟೆಗೆ ತೆಗೆದುಕೊಂಡರು. ಸೋಲಿಗರನ್ನು ಕಂಡರೇ ಯಾಕೆ ನಿರ್ಲಕ್ಷ್ಯ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

No compensation for family of boy death by elephant attack in EtteGoudanaDoddy, MLA outrage

ಅಲ್ಲದೆ ಆನೆ ದಾಳಿ ಮಾಡಿ ತಿಂಗಳಾದರೂ ಮೊದಲ ಕಂತಿನ ಹಣ ಕೊಟ್ಟಿಲ್ಲ. ನಿಮ್ಮ ಡಿಸಿಎಫ್ ಅವರಿಗೆ ಈ ಘಟನೆನೇ ಗೊತ್ತಿಲ್ಲವೇ, ಡಾಕುಮೆಂಟ್ ಕೊಡಲು ಅವರಿಗೇನು ಗೊತ್ತು? ನೀವು ಕಲೆಕ್ಟ್ ಮಾಡಬೇಕು. ಎಂಎಲ್‌ಸಿ ಕೇಸ್ ಆಗಿಲ್ಲವೇ ಎಂದು ಪ್ರಶ್ನಸಿ ಬೆವರಿಳಿಸಿದರು. ಹಾಗೆಯೇ ಕೂಡಲೇ ಮೊದಲ ಕಂತಿನ ಹಣ ಹಾಗೂ ಉಳಿದ ಹಣವನ್ನು ಫಲಾನುಭವಿಗೆ ಕೊಡಿ ಎಂದು ಸೂಚಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+