ಸಿದ್ದರಾಮಯ್ಯ ಅವರಿವರು ಕಟ್ಟುವ ಗೂಡಲ್ಲಿ ರಾಜಕಾರಣ ಮಾಡುತ್ತಾರೆ-ಶ್ರೀರಾಮುಲು

ಚಾಮರಾಜನಗರ, ಅಕ್ಟೋಬರ್‌ 27: ಸಿದ್ದರಾಮಯ್ಯ ಅವರಿವರು ಕಟ್ಟುವ ಗೂಡಲ್ಲಿ ರಾಜಕಾರಣ ಮಾಡುವವರು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆಯವರನ್ನು ತುಳಿದು ಸಿದ್ದರಾಮಯ್ಯ ರಾಜಕಾರಣ ಮಾಡುತ್ತಾರೆ. ಸಿದ್ದರಾಮಯ್ಯ, ದೇವೇಗೌಡರನ್ನು, ಪರಮೇಶ್ವರ್ ಅವರನ್ನು ತುಳಿದ್ದಾಗಿದೆ. ಈಗ ಡಿ.ಕೆ ಶಿವಕುಮಾರ್‌ ಅವರನ್ನು ತುಳಿಯಲು ಹೊರಟಿದ್ದಾರೆ. ಯಾವುದೇ ಶ್ರಮ ಹಾಕದೆ ಅವರಿವರು ಕಟ್ಟುವ ಗೂಡಲ್ಲಿ ಸಿದ್ದರಾಮಯ್ಯ ರಾಜಕಾರಣ ಮಾಡುತ್ತಾರೆ ಎಂದು ಲೇವಡಿ ಮಾಡಿದರು.

ಮಾತು ಮುಂದುವರಿಸಿದ ಅವರು, ಜಾತಿಗಳ ಹೆಸರು, ಮಹಾನ್ ಪುರುಷರ ಹೆಸರು ಹೇಳಿಕೊಂಡು ಸಿದ್ದರಾಮಯ್ಯ ರಾಜಕಾರಣ ಮಾಡುತ್ತಾರೆ. ಆದರೆ ಅವರ ಸರ್ಕಾರ ಇದ್ದಾಗ ಮಾತ್ರ ಅವರು ಮೀಸಲಾತಿ ಕೊಡಲಿಲ್ಲ. ನಮ್ಮ ಸರ್ಕಾರ ಮೀಸಲಾತಿ ಹೆಚ್ಚಿಸಿದ ಮೇಲೆ, ಈ ಪ್ರೋತ್ಸಾಹ ಕೊಟ್ಟಿದ್ದೇವೆ. ಸಲಹೆ ಕೊಟ್ಟಿದ್ದೇವೆ ಎನ್ನುತ್ತಾರೆ. ಆದರೆ ಮೀಸಲಾತಿ ಹೆಚ್ಚು ಮಾಡಬೇಕೆನ್ನುವ ಇಚ್ಛಾಶಕ್ತಿ ಅವರಿಗೆ ಇರಲಿಲ್ಲ ಎಂದು ಟೀಕಿಸಿದರು.

 Chamarajanagara: Minister Sriramulu Lashes Out At Siddaramaiah

ಇನ್ನುಕಾನೂನು ಬದ್ಧವಾಗಿ ಏನನ್ನು ಮಾಡಬೇಕು ಎಲ್ಲಾ ಕ್ರಮಗಳನ್ನು ಬೊಮ್ಮಾಯಿ ಸರ್ಕಾರ ತೆಗೆದುಕೊಂಡಿದ್ದು, ಈಗಾಗಲೇ ನಾವು ಹೊಸ ಮೀಸಲಾತಿಯಲ್ಲಿದ್ದೇವೆ. ಕಾನೂನುತ್ಮಾಕವಾಗಿ ಗಟ್ಟಿಗೊಳಿಸುತ್ತಿದ್ದೇವೆ. ಮೀಸಲಾತಿ ವಿಚಾರದಲ್ಲಿ ಯಾರಿಗೂ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದರು.

ಇನ್ನು ಈಗಾಗಲೇ ದೇಶದಲ್ಲಿ ಕಾಂಗ್ರೆಸ್‌ ಅನ್ನು ಜನರು ತಿರಸ್ಕರಿಸಿದ್ದು, ಕರ್ನಾಟಕದಲ್ಲೂ ಈ ಬಾರಿ ಎಲ್ಲಾ ಸಮುದಾಯವು ಕಾಂಗ್ರೆಸ್ ಅನ್ನು ತಿರಸ್ಕರಿಸಲಿದೆ. ರಾಯಚೂರಿನಲ್ಲಿ ಗೊಲ್ಲ ಸಮುದಾಯಕ್ಕೆ ಸಿದ್ದರಾಮಯ್ಯ ಅಪಮಾನ ಮಾಡಿದ್ದು, ಕೂಡಲೇ ಅವರು ಕ್ಷಮೆ ಕೇಳಬೇಕು. ಸಿದ್ದರಾಮಯ್ಯ ಗೊಲ್ಲ ಸಮುದಾಯದ ನಾಯಕರಿಗೆ ಅಪಮಾನ ಮಾಡಿರುವುದು ಖಂಡನೀಯ ಎಂದು ಆಕ್ರೋಶ ಹೊರಹಾಕಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+