ಗುಂಡ್ಲುಪೇಟೆಯಲ್ಲಿ ಬುಲೆಟ್ ಗೆ ಲಾರಿ ಡಿಕ್ಕಿ: ಬುಲೆಟ್ ಸವಾರ ಸಾವು

By: ಚಾಮರಾಜ ನಗರ ಪ್ರತಿನಿಧಿ
Subscribe to Oneindia Kannada

ಗುಂಡ್ಲುಪೇಟೆ: ಲಾರಿಯೊಂದು ಬುಲೆಟ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬುಲೆಟ್ ಸವಾರ ಸಾವನ್ನಪ್ಪಿದಲ್ಲದೆ, ಬುಲೆಟ್ ಸಂಪೂರ್ಣ ಹೊತ್ತಿ ಉರಿದ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಮದ್ದೂರು ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಮೃತಪಟ್ಟ ಸವಾರ ಬೆಂಗಳೂರಿನ ವಿನೋಬನಗರದ ನಿವಾಸಿ ಆನಂದರಮಣ (32) ಎಂದು ಗುರುತಿಸಲಾಗಿದೆ.

ವೈರಲ್ ಆಯ್ತು ಮೈಸೂರಿನಲ್ಲಿ ನಡೆದ ಆ ಅಪಘಾತದ ದೃಶ್ಯ

ಈತ ಬೆಂಗಳೂರಿನ ಮಾಲ್ ವೊಂದರಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತನ್ನ ಸ್ನೇಹಿತರೊಂದಿಗೆ ಶನಿವಾರ ಬೆಂಗಳೂರಿನಿಂದ ಕೇರಳದತ್ತ ಪ್ರವಾಸ ಕೈಗೊಂಡಿದ್ದರು.

man dies in an accident in Gundlupet region

ಭಾನುವಾರ ಕೇರಳದ ವೈನಾಡು ಮತ್ತು ಎಡಕಲ್ಲು ಗುಡ್ಡವನ್ನು ನೋಡಿಕೊಂಡು ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದಾಗ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪಿಯ ಮದ್ದೂರು ಅರಣ್ಯ ಪ್ರದೇಶದ ಕ್ಯಾಲಿಕೆಟ್ ಹೆದ್ದಾರಿಯಲ್ಲಿ ಗುಂಡ್ಲುಪೇಟೆಯಿಂದ ಕೇರಳ ಕಡೆಗೆ ಹೋಗುತ್ತಿದ್ದ ರಾಜಸ್ತಾನ ಮೂಲದ ಲಾರಿ ಡಿಕ್ಕಿ ಹೊಡೆದಿದೆ.

ಪರಿಣಾಮ ಆನಂದರಮಣ ನೆಲಕ್ಕೆ ಬಿದ್ದಿದ್ದು, ತಲೆ ಹಾಗೂ ಕೈಗೆ ಬಲವಾದ ಗಾಯವಾಗಿದೆ. ಗಂಭೀರ ಗಾಯಗೊಂಡಿದ್ದ ಆತನನ್ನು ಆಂಬ್ಯುಲೆನ್ಸ್ ನಲ್ಲಿ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದು, ಆದರೆ ಪ್ರಯೋಜನವಾಗದೆ ಮಾರ್ಗ ಮಧ್ಯೆ ಸಾವನಪ್ಪಿದ್ದಾನೆಂದು ಹೇಳಲಾಗಿದೆ.

ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಇಂಧನ ಸೋರಿಕೆಯಾಗಿ ಬುಲೆಟ್‍ ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಘಟನೆ ನಂತರ ಲಾರಿ ಚಾಲಕ ಮತ್ತು ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು, ಗುಂಡ್ಲುಪೇಟೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a tragic incident a 32 year man from Vinoba Nagar, Bengaluru met an accident in Gundlupet region in Chamarajanagar district, dies.
Please Wait while comments are loading...