ಮಲೈ ಮಹದೇಶ್ವರ ದೇವಸ್ಥಾನದಲ್ಲಿ ಸೆ. 17ರಿಂದ ಮಹಾಲಯ ಜಾತ್ರೆ
ಚಾಮರಾಜನಗರ, ಸೆಪ್ಟೆಂಬರ್ 17: ಚಾಮರಾಜನಗರ ಜಿಲ್ಲೆಯ ಧಾರ್ಮಿಕ ಕ್ಷೇತ್ರ ಮಲೈ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದಿನಿಂದ (ಸೆ. 17) ಹಲವು ಮಹಾಲಯ ಜಾತ್ರೆ ಆರಂಭವಾಗಿದೆ. ಸೆಪ್ಟೆಂಬರ್ 21 ರವರೆಗೆ ಮಹಾಲಯ ಜಾತ್ರೆ ನಡೆಯಲಿದೆ.
ಇದಾಗಿ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 2 ರವರೆಗೆ ದಸರಾ ಜಾತ್ರೆ, ಅಕ್ಟೋಬರ್ 17 ರಿಂದ 21 ರವರೆಗೆ ದೀಪಾವಳಿ ಜಾತ್ರೆ ನಡೆಯಲಿದೆ.

ಅಕ್ಟೋಬರ್ 22 ರಿಂದ 23 ರವರೆಗೆ 1ನೇ ಕಾರ್ತಿಕ ಸೋಮವಾರ, ಅಕ್ಟೋಬರ್ 29 ರಿಂದ 30 ರವರೆಗೆ 2ನೇ ಕಾರ್ತಿಕ ಸೋಮವಾರ, ನವೆಂಬರ್ 5 ರಿಂದ 6 ರವರೆಗೆ 3ನೇ ಕಾರ್ತಿಕ ಸೋಮವಾರ, ನವೆಂಬರ್ 12 ರಿಂದ 13 ರವರೆಗೆ 4ನೇ ಕಾರ್ತಿಕ ಸೋಮವಾರ ಹಾಗೂ ನವೆಂಬರ್ 16 ರಿಂದ 18 ರವರೆಗೆ ಎಣ್ಣೆ ಮಜ್ಜನ ಮತ್ತು ಅಮಾವಾಸ್ಯೆ ಜಾತ್ರೆಗಳು ನಡೆಯಲಿದೆ ಎಂದು ಶ್ರೀ ಮಲೈ ಮಹೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.
ಮಲೈ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ನಡೆಯುವ ವಾರ್ಷಿಕ ಜಾತ್ರೆಗಳಾದ ಮಹಾಲಯ, ದಸರಾ, ದೀಪಾವಳಿ, ಕಾರ್ತಿಕ ಸೋಮವಾರ ವಾರ್ಷಿಕ ಜಾತ್ರೆಗಳು ವಿಜೃಂಭಣೆಯಿಂದ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.












Click it and Unblock the Notifications