Get Updates
Get notified of breaking news, exclusive insights, and must-see stories!

ವೈರಲ್ ವಿಡಿಯೋ: ಪ್ರೇಮಿಗಳ ಆಲಿಂಗನ-ಚುಂಬನ ಬೈಕ್ ರೈಡ್‌ಗೆ ಕಣ್ಮುಚ್ಚಿಕೊಂಡ ಜನ

ಚಾಮರಾಜನಗರ, ಏಪ್ರಿಲ್ 22: ಕೆಲವು ಪ್ರೇಮಿಗಳು ಅಕ್ಕಪಕ್ಕ ಯಾರಿರುತ್ತಾರೆ ಎಂಬುದನ್ನು ಮರೆತು ಸಾರ್ವಜನಿಕ ಸ್ಥಳದಲ್ಲಿ "ಮೈ'' ಮರೆತಿರುತ್ತಾರೆ. ಜನರಿರುವುದನ್ನು ಗಮನಿಸದೇ ಬಸ್ ನಿಲ್ದಾಣ, ರಸ್ತೆ, ಪಾರ್ಕ್‌ನಂತಹ ಸ್ಥಳದಲ್ಲಿ ಆಗಾಗ ಮುತ್ತಿನಾಟದಲ್ಲಿ ತೊಡಗಿಕೊಳ್ಳುವುದನ್ನು ನೋಡಿರುತ್ತೇವೆ.

ಹರೆಯದ ವಯಸ್ಸಿನಲ್ಲಿ ಪ್ರೀತಿಯ ಬಲೆಗೆ ಬಿದ್ದ ಪ್ರೇಮಿಗಳಿಗೆ ಜಗವೆಲ್ಲಾ ಕುರುಡಾಗಿರುತ್ತದೆ. ಸದ್ಯ ಪ್ರೇಮಿಗಳಿಬ್ಬರು ಹಾಡಹಗಲೇ ರಸ್ತೆಯಲ್ಲಿ ಬೈಕ್ ಮೇಲೆ ಕುಳಿತು ಮುತ್ತಿನ ಮತ್ತಿನಾಟ ಪ್ರದರ್ಶಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪ್ರೀತಿ ಪ್ರೇಮದ ಅಮಲಿನಲ್ಲಿದ್ದ ಪ್ರೇಮಿಗಳು ಥೇಟ್ ಸಿನಿಮಾ ಶೈಲಿಯಲ್ಲಿ ಬೈಕ್‌ನಲ್ಲಿ ಜಾಲಿ ರೈಡ್ ಮಾಡಿದ್ದು, ಇದನ್ನು ನೋಡಿದವರು ಎಂಥ ಕಾಲ ಬಂತಪ್ಪಾ ಎಂದು ಕಣ್ಮುಚ್ಚಿಕೊಂಡಿದ್ದಾರೆ.

ಇಷ್ಟಕ್ಕೂ ಇಂತಹದೊಂದು ಜಾಲಿ ರೈಡ್ ನಡೆದಿದ್ದು ಚಾಮರಾಜನಗರದ ಗುಂಡ್ಲುಪೇಟೆ ರಸ್ತೆಯಲ್ಲಿ. ಸಾಮಾನ್ಯವಾಗಿ ಪ್ರೀತಿ ಮಾಡುವುವಾಗ ಜಗತ್ತೇ ಕತ್ತಲು ಎಂಬ ಮಾತಿದೆ. ಅದೇ ರೀತಿಯಲ್ಲಿಯೇ ಜಾಲಿರೈಡ್ ನಡೆದಿದೆ. ಇಬ್ಬರು ಪ್ರೇಮಿಗಳು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ರಸ್ತೆಯಲ್ಲಿ ಜಾಲಿ ರೈಡ್ ಹೋಗಿದ್ದಾರೆ.

Chamarajanagar: Lovers Romance on Running Bike; Video Goes viral

ಆದರೆ, ವಿಷ್ಯ ಅದಷ್ಟೇ ಆಗಿದ್ದರೆ ಇದೆಲ್ಲ ಪೀಠಿಕೆ ಹೇಳುವಂತೆ ಇರಲಿಲ್ಲ. ಆದರೆ ಆ ಜಾಲಿ ರೈಡ್ ಹೇಗಿತ್ತೆಂದರೆ, ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನು ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಎದುರಾಗಿ ಕೂರಿಸಿಕೊಂಡು ಬೈಕ್ ಓಡಿಸುತ್ತಿದ್ದರೆ, ಆಕೆ ಆತನನ್ನು ಬಿಗಿಯಾಗಿ ಅಪ್ಪಿ ಉನ್ಮಾನದಲ್ಲಿ ತೇಲುತ್ತಿದ್ದಳು. ಇದು ನೋಡಿದವರು ಇವರಿಗೇನು ಬಂತು ಎಂದು ಹಿಡಿ ಶಾಪ ಹಾಕುತ್ತಿದ್ದರು.

ಗುಂಡ್ಲುಪೇಟೆ ರಸ್ತೆಯಲ್ಲಿ ಪಲ್ಸರ್ ಬೈಕ್‌ನಲ್ಲಿ ಹೊರಟಿದ್ದ ಈ ಜೋಡಿ ಜಗತ್ತನ್ನೇ ಮರೆತು ಪ್ರೇಮಲೋಕದಲ್ಲಿ ಮುಳುಗಿದ್ದರು. ರಸ್ತೆ ಮೇಲೆ ಬಸ್, ಲಾರಿಯಂತಹ ಯಾವುದೇ ವಾಹನ ಬಂದರೂ ಲೆಕ್ಕಿಸದೇ ಇಬ್ಬರೂ ಜಾಲಿಯಾಗಿ ರೈಡ್ ಮಾಡಿದ್ದಾರೆ.

Chamarajanagar: Lovers Romance on Running Bike; Video Goes viral

ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತ ಯುವತಿ ತನ್ನ ಪ್ರಿಯಕರನನ್ನು ತಬ್ಬಿಕೊಂಡು ಚುಂಬಿಸುತ್ತಿರುವ ದೃಶ್ಯವೂ ನಡೆಯಿತು. ಈ ಪ್ರೇಮಿಗಳ ಪ್ರಣಯದಾಟವನ್ನು ದಾರಿಹೋಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಬೈಕ್ ಚಾಮರಾಜನಗರದ್ದೇ ನೋಂದಣಿ ಸಂಖ್ಯೆ ಹೊಂದಿದ್ದು, ಇದು ಯಾವ ಊರಿನ ಪ್ರೇಮಿಗಳು ಎಂಬುದು ಗೊತ್ತಾಗಬೇಕಿದೆ.

ಇಷ್ಟಕ್ಕೂ ಸಾರ್ವಜನಿಕ ಸ್ಥಳದಲ್ಲಿ ಇದೆಲ್ಲಾ ಬೇಕಿತ್ತಾ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Recommended Video

      David Warner ಔಟ್ ಆದರೂ ಪಿಚ್ ಬಿಟ್ಟು ಹೋಗಲಿಲ್ಲ | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+