ಬಿಜೆಪಿಗೆ ಮುಳುವಾದ ನಾಯಕರ ಬೇಜವಾಬ್ದಾರಿ ಹೇಳಿಕೆಗಳು

Posted By:
Subscribe to Oneindia Kannada

ಬಿಜೆಪಿ ಹಾಗೂ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯ ಕಣವಾಗಿದ್ದ ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.

ಬಿಜೆಪಿಗೆ ಹಿನ್ನಡೆಯಾಗಿದೆ. ಈ ಸೋಲಿಗೆ ಕಾರಣವೇನು ಎಂದು ಕೆಲವಾರು ಮಂದಿ ವಿಶ್ಲೇಷಣೆಗಿಳಿದಿದ್ದಾರೆ. ಕೆಲವರು ಕಾಂಗ್ರೆಸ್ ಹಣ ಚೆಲ್ಲಾಡಿದ್ದೇ ಬಿಜೆಪಿ ಸೋಲಿಗೆ ಕಾರಣ ಎಂದಿದ್ದರೆ, ಕೆಲವರು ಈಶ್ವರಪ್ಪ ಹಾಗೂ ಯಡಿಯೂರಪ್ಪ ಅವರ ಹೊಂದಾಣಿಕೆಯಿಲ್ಲದಿದ್ದಕ್ಕೇ ಬಿಜೆಪಿಗೆ ಸೋಲಾಯಿತು ಎನ್ನುವವರಿದ್ದಾರೆ.

ಗ್ಯಾಲರಿ: ಕಾಂಗ್ರೆಸ್ಸಿನ ಡಬ್ಬಲ್ ಧಮಾಕ, 2 ಕ್ಷೇತ್ರಗಳು ಕೈವಶ

ಇದೆಲ್ಲದರ ಜತೆಗೆ, ಚುನಾವಣಾ ಪ್ರಚಾರದ ವೇಳೆ ಬಿಜೆಪಿ ನಾಯಕರಿಂದ ಬಂದ ಕೆಲ ಆಕ್ಷೇಪಾರ್ಹ ಹೇಳಿಕೆಗಳು ಬಿಜೆಪಿಗೆ ತೀವ್ರ ಹಿನ್ನಡೆ ತಂದಿವೆ ಎಂದೂ ಹೇಳಲಾಗುತ್ತಿದೆ.[ಎರಡು ಬಾರಿ ಸೋತು ಗೆದ್ದ ಕಳಲೆ ಕೇಶವಮೂರ್ತಿ ಯಾರು?]

ಇವುಗಳಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಗೀತಾ ಮಹದೇವ ಪ್ರಸಾದ್ ಬಗ್ಗೆ ಹೇಳಿದ ಮಾತು, ಈಶ್ವರಪ್ಪ ಅವರ ಕೆಲವು ಕುಹಕದ ಮಾತುಗಳೂ ಸೇರಿವೆ ಎಂದೂ ಪಟ್ಟಿ ಮಾಡಲಾಗುತ್ತಿದೆ. ಇದರೊಂದಿಗೆ, ಯಡಿಯೂರಪ್ಪ ಅವರು ಗೀತಾ ಮಹದೇವ ಪ್ರಸಾದ್ ಅವರಿಗೆ ಮಾತುಕೊಟ್ಟು ಆನಂತರ ಅದಕ್ಕೆ ತಪ್ಪಿದರು ಎಂದೂ ಹೇಳಲಾಗುತ್ತಿದೆ.

ಹಾಗಾದರೆ, ಬಿಜೆಪಿ ಸೋಲಿಗೆ ಕಾರಣವಾದ ಹೇಳಿಕೆಗಳು ಅಥವಾ ಅಂಶಗಳು ಯಾವುವು? ಆ ಹೇಳಿಕೆಗಳು ಮತದಾರರ ಮೇಲೆ ಅದ್ಯಾವ ಪರಿ ಪರಿಣಾಮ ಬೀರಿರಬಹುದು ಎಂಬುದರ ಊಹಾತ್ಮಕ ವಿಶ್ಲೇಷಣೆ ಇಲ್ಲಿ ನಿಮಗಾಗಿ.....

ಸ್ಪಷ್ಟನೆ ನೀಡಿದರೂ ಪರಿಣಾಮ ಬೀರಲಿಲ್ಲ

ಸ್ಪಷ್ಟನೆ ನೀಡಿದರೂ ಪರಿಣಾಮ ಬೀರಲಿಲ್ಲ

ಪತಿ ಮಹದೇವ ಪ್ರಸಾದ್ ಅವರ ನಿಧನದ ಹಿನ್ನೆಲೆಯಲ್ಲಿ ದುಃಖದ ಮಡುವಿನಲ್ಲಿದ್ದ ಗೀತಾ ಮಹದೇವ ಪ್ರಸಾದ್ ಬಗ್ಗೆ ಹೇಳಬಾರದಿದ್ದ ಹೇಳಿಕೆಯೊಂದನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ಕೊಟ್ಟುಬಿಟ್ಟಿದ್ದರು.

ಗುಂಡ್ಲುಪೇಟೆಯ ಹಳ್ಳಿಯೊಂದರಲ್ಲಿ ಪ್ರಚಾರ ಮಾಡುವಾಗ ಪ್ರತಾಪ್ ಅವರು, '' ಮಹದೇವ ಪ್ರಸಾದ್ ಅವರ ಸಮಾಧಿಗೆ ಹಾಲು ತುಪ್ಪ ಹಾಕುವಾಗ ಗೀತಾ ಅವರಿಗೆ ಗೂಟದ ಕಾರು ನೆನಪಾಗಿದೆ. ಗೂಟದ ಕಾರು ಕೈ ತಪ್ಪುವುದನ್ನು ತಪ್ಪಿಸಲು ಚುನಾವಣೆಗೆ ನಿಲ್ಲುತ್ತಿದ್ದಾರೆ'' ಎಂದು ಹೇಳಿದ್ದರು. ಇದೇ ಭಾರೀ ವಿವಾದಕ್ಕೆ ಕಾರಣವಾಯಿತು.
ಆನಂತರ ಪ್ರತಾಪ್ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದರಾದರೂ ಇದು ಮತದಾರರ ಮೇಲೆ ಬೀರಿರಬಹುದಾದ ಗಾಢವಾದ ಪರಿಣಾಮವನ್ನು ತಳ್ಳಿಹಾಕುವಂತಿಲ್ಲ.

ಸತ್ಯವೇನೆಂದು ಅವರಿಗಷ್ಟೇ ಗೊತ್ತು

ಸತ್ಯವೇನೆಂದು ಅವರಿಗಷ್ಟೇ ಗೊತ್ತು

ಪತಿ ಮಹದೇವ ಪ್ರಸಾದ್ ತೀರಿಕೊಂಡಾಗ ಸಾಂತ್ವನ ಹೇಳಲು ಬಂದಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಉಪ ಚುನಾವಣೆಯಲ್ಲಿಅವರ ವಿರುದ್ಧ ಬಿಜೆಪಿ ವತಿಯಿಂದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಹೇಳಿದ್ದಾಗಿ ಗೀತಾ ಮಹದೇವ ಪ್ರಸಾದ್ ಅವರು ಹೇಳಿದ್ದರು.[ನಂಜನಗೂಡಲ್ಲಿ ಕಾಂಗ್ರೆಸಿಗೆ ಭರ್ಜರಿ ಗೆಲುವು, ಮುಗ್ಗರಿಸಿದ ಬಿಜೆಪಿ]

ಇದಕ್ಕೆ ಸ್ಪಷ್ಟನೆ ಕೊಟ್ಟ ಯಡಿಯೂರಪ್ಪ, ತಾವು ಸಾವಿನ ಮನೆಯಲ್ಲಿ ರಾಜಕೀಯ ಮಾಡಿಲ್ಲ ಎಂದು ಹೇಳಿದ್ದರು. ಆದರೆ, ಮತದಾರರಿಗೆ ಇದು ತಪ್ಪು ಸಂದೇಶ ಕೊಟ್ಟಿತು ಎಂದೂ ಹೇಳಲಾಗಿದೆ.

ಕೇಳಲಿಲ್ಲ ಆ ಮಾತನ್ನು ಮತದಾರ

ಕೇಳಲಿಲ್ಲ ಆ ಮಾತನ್ನು ಮತದಾರ

ಇತ್ತೀಚೆಗೆ ಮುಖ್ಯಮಂತ್ರಿಗಳ ವಿರುದ್ದ ವಾಗ್ದಾಳಿ ನಡೆಸಿದ್ದ ಈಶ್ವರಪ್ಪ, ಸಿದ್ದರಾಮಯ್ಯ ಒಬ್ಬ 'ತಲಾಕ್' ರಾಜಕಾರಣಿ. ಅಧಿಕಾರಕ್ಕಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದವರು. ನನಗೆ ಬಿಜೆಪಿ ಮೇಲಿರುವ ನಿಷ್ಠೆಯ ಬಗ್ಗೆ ಸಿದ್ದರಾಮಯ್ಯ ಸರ್ಟಿಫಿಕೇಟ್ ನೀಡಬೇಕಾಗಿಲ್ಲ ಎಂದು ಹೇಳಿದ್ದರು. ಈಶ್ವರಪ್ಪ ಅವರು ಏನೇ ಹೇಳಿದರೂ ಜನರಿಗೆ ಗೊತ್ತು... ಬಿಜೆಪಿಯಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ಎಂಬ ಧೃವಗಳಿವೆ ಎಂದು. ಹಾಗಾಗಿ, ಈಶ್ವರಪ್ಪ ಈ ಮಾತು ಜನರಿಗೆ ಇಷ್ಟವಾಗಲಿಲ್ಲ ಎಂದು ಹೇಳಲಾಗಿದೆ.

ಮತದಾರನ ಮೇಲೆ ಪರಿಣಾಮ

ಮತದಾರನ ಮೇಲೆ ಪರಿಣಾಮ

ಬಿಜೆಪಿ ಕಚೇರಿ ಗುಡಿಸಿದರೆ ಮುಸ್ಲಿಮರಿಗೆ ಪಕ್ಷದ ಟಿಕೆಟ್ ನೀಡಲಾಗುವುದು ಎಂದು ಈಶ್ವರಪ್ಪ ನೀಡಿದ್ದ ಹೇಳಿಕೆ ವ್ಯಾಪಕ ಟೀಕೆಗೊಳಗಾಗಿತ್ತು. ಗುಡಿಸುವುದು ಎಂದರೆ ಪಕ್ಷಕ್ಕಾಗಿ ದುಡಿಯುವುದು, ಚಮಚಾಗಿರಿ ಮಾಡೋದಲ್ಲಾ. ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದು ಯಾರು ಎಂದು ಈಶ್ವರಪ್ಪ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

ಆದರೆ, ಇಂಥ ಹೇಳಿಕೆಗಳನ್ನು ಮತದಾರ ಒಪ್ಪಲಿಲ್ಲ ಎನ್ನುವುದಕ್ಕೆ ಉಪಚುನಾವಣಾ ಫಲಿತಾಂಶ ಸಾಕ್ಷ್ಯ ನೀಡಿದೆ.[ಬಯ್ದಾಡಿ ಸೋತ ಶ್ರೀನಿವಾಸ್ ಪ್ರಸಾದ್, ಸುಮ್ಮನಿದ್ದು ಗೆದ್ದ ಸಿದ್ದು]

ಚಟಾಕಿಗೆ ಉತ್ತರ ಕೊಟ್ಟಿರುವ ಮತದಾರ

ಚಟಾಕಿಗೆ ಉತ್ತರ ಕೊಟ್ಟಿರುವ ಮತದಾರ

ಪ್ರಚಾರಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ನೂತನ ನಾಯಕ ಎಸ್ಸೆಂ ಕೃಷ್ಣ, ''ನಾನು ನೋಡಿದ ಅತಿ ಕೆಟ್ಟ ಸರ್ಕಾರ ಇದು ಎಂದು ವಿಷಾದದಿಂದ ಹೇಳಬಯಸುತ್ತೇನೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ಬಂದೊದಗಿದ್ದು, ನೀವು(ಮಾಧ್ಯಮ) ಹುಡುಕುವುದಕ್ಕೆ ಸಹಾಯ ಮಾಡಿ'' ಎಂದು ಚಟಾಕಿ ಹಾರಿಸಿದ್ದರು. ಕಾಂಗ್ರೆಸ್ ಭದ್ರ ಕೋಟೆ ಎನಿಸಿರುವ ಈ ಕ್ಷೇತ್ರಗಳ ಮತದಾರರಿಗೆ ಕೃಷ್ಣ ಅವರ ಹೇಳಿಕೆ ಅಸಮಾಧಾನಕ್ಕೆ ಕಾರಣವಾಗಿರಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Results of By-elections of Gundlupete and Nanjanagudu have been declared. Congress wins in these two constituencies. But what about BJP. Some of its party leaders' statement brought the trouble for them in the elections. Here are such statements.
Please Wait while comments are loading...