ಚಾಮರಾಜನಗರ; 6 ಸಾವಿರ ಲೀ ಆಕ್ಸಿಜನ್ ಪ್ಲಾಂಟ್‌ಗೆ ಚಾಲನೆ

ಚಾಮರಾಜನಗರ, ಏಪ್ರಿಲ್ 29; ಚಾಮರಾಜನಗರ ಜಿಲ್ಲೆಯಲ್ಲಿ 6 ಸಾವಿರ ಲೀಟರ್ ಲಿಕ್ವಿಡ್ ಆಕ್ಸಿಜನ್ ಸಾಮರ್ಥ್ಯದ ಪ್ಲಾಂಟ್‌ಗೆ ಚಾಲನೆ ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಈ ಪ್ಲಾಂಟ್‌ನಿಂದ ರೋಗಿಗಳಿಗೆ ಸಹಾಯಕವಾಗಲಿದೆ.

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಆಕ್ಸಿಜನ್ ಪ್ಲಾಂಟ್‌ಗೆ ಚಾಲನೆ ನೀಡಿದರು. ಇದರಿಂದಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿರುವ 120 ಹಾಸಿಗೆಗಳ ರೋಗಿಗಳಿಗೆ ಒಂದು ವಾರಗಳ ಕಾಲ ಆಮ್ಲಜನಕವನ್ನು ಪೂರೈಕೆ ಮಾಡಬಹುದು.

600 ಜಂಬೋ ಸಿಲಿಂಡರ್‌ನಷ್ಟು ಆಮ್ಲಜನಕವನ್ನು ಇದು ಸಂಗ್ರಹಿಸಿಡಲಿದೆ. ಸ್ವಯಂ ಚಾಲಿತ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಒಂದು ಗಂಟೆಗೆ 10 ಆಕ್ಸಿಜನ್ ಸಿಲಿಂಡರ್ ಬಳಕೆಯಾಗುತ್ತಿದೆ.

 Liquid Medical Oxygen Unit Inaugurated In District Hospital

ಇಷ್ಟು ದಿನ ಬಳ್ಳಾರಿಯಿಂದ ಆಕ್ಸಿಜನ್ ಹೊತ್ತು ತರುವ ಟ್ಯಾಂಕರ್ ಮೈಸೂರಿಗೆ ಬಂದು ಅಲ್ಲಿಂದ ಚಾಮರಾಜನಗರಕ್ಕೆ ಆಗಮಿಸಬೇಕಿತ್ತು. ಈ ಘಟಕದ ಉದ್ಘಾಟನೆಯಿಂದಾಗಿ ಟ್ಯಾಂಕರ್‌ನಲ್ಲಿ ಆಕ್ಸಿಜನ್ ತರುವುದು ತಪ್ಪಲಿದೆ.

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಆಕ್ಸಿಜನ್ ಕೊರತೆ ನೀಗಿಸಲು ಚಾಮರಾಜನಗರ ಜಿಲ್ಲಾಡಳಿತ ಜಿಲ್ಲಾಸ್ಪತ್ರೆಯಲ್ಲಿ 6 ಸಾವಿರ ಕಿಲೋಲೀಟರ್ ಸಾಮರ್ಥ್ಯದ ಆಕ್ಸಿಜನ್ ಘಟಕ ಸ್ಥಾಪಿಸಲಾಗಿದೆ. ಆಸ್ಪತ್ರೆಯಲ್ಲಿ ಇರುವ 120 ಬೆಡ್​ಗಳ ರೋಗಿಗಳಿಗೆ ಒಂದು ವಾರಗಳ ಕಾಲ ಆಕ್ಸಿಜನ್ ಪೂರೈಕೆ ಮಾಡಬಹುದು.

ಜಿಲ್ಲೆಯ ಜನರು ಯಾವುದೇ ಆತಂಕಕ್ಕೆ ಒಳಗಾಗದೆ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸುವುದರ ಮೂಲಕ ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಹಕರಿಸಬೇಕು ಎಂದು ಜಿಲ್ಲಾಡಳಿತ ಜನರಲ್ಲಿ ಮನವಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+