ಸಾಕುನಾಯಿಗಳನ್ನು ಕೊಂದು ಜನರಲ್ಲಿ ಭಯ ಹುಟ್ಟಿಸಿದ ಚಿರತೆ ಸಾವು!

ಚಾಮರಾಜನಗರ, ಜನವರಿ 24: ರೈತರ ಜಮೀನು ಬಳಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾ ಸಾಕು ನಾಯಿಗಳ ಮೇಲೆ ದಾಳಿ ಮಾಡಿ ತಿನ್ನುತ್ತಾ ಜನರಲ್ಲಿ ಭಯ ಹುಟ್ಟಿಸಿದ ಚಿರತೆಯೊಂದು ಶವವಾಗಿ ಪತ್ತೆಯಾಗಿದೆ. ಈ ಚಿರತೆ ಕೆಲವು ದಿನಗಳ ಹಿಂದೆಯೇ ಸಾವನ್ನಪ್ಪಿರಬಹುದೆಂದು ಹೇಳಲಾಗಿದ್ದು, ಸ್ವಾಭಾವಿಕ ಸಾವೇ ಅಥವಾ ಯಾರಾದರೂ ಸಾಯಿಸಿದರೇ ಎಂಬ ಶಂಕೆ ವ್ಯಕ್ತವಾಗಿದೆ.

ಚಾಮರಾಜನಗರ ಜಿಲ್ಲೆ ಹರವೇ ಹೋಬಳಿಯ ನಂಜದೇವನಪುರ ಕರಿಕಲ್ ಕ್ವಾರಿಯ ಬಳಿ ದುರ್ನಾತ ಬೀರುತ್ತಿದ್ದರಿಂದ ಏನಿರಬಹುದೆಂದು ಕುತೂಹಲದಿಂದ ತೆರಳಿ ನೋಡಿದವರಿಗೆ ಚಿರತೆಯ ಕೊಳೆತ ದೇಹ ಪತ್ತೆಯಾಗಿದೆ. ಈ ಚಿರತೆಯು ಕೆಲವು ಸಮಯಗಳಿಂದ ಉಡಿಗಾಲ, ತಮ್ಮಡಳ್ಳಿ ಗ್ರಾಮದ ಸುತ್ತಮುತ್ತ ಅಲ್ಲಲ್ಲಿ ಕಾಣಿಸಿಕೊಂಡು ಸಾಕು ನಾಯಿ ಕೊಂದು ತಿನ್ನುತ್ತಿತ್ತು.

ಚಿರತೆ ಗ್ರಾಮದ ವ್ಯಾಪ್ತಿಯಲ್ಲಿ ಅಡ್ಡಾಡುತ್ತಿದ್ದರಿಂದ ರೈತರು ಭಯಭೀತರಾಗಿದ್ದರು. ಆದರೆ ಈ ಚಿರತೆ ನಾಯಿಗಳನ್ನಷ್ಟೆ ಹಿಡಿದು ತಿನ್ನುತ್ತಾ ಗ್ರಾಮಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಓಡಾಡಿಕೊಂಡಿತ್ತು. ಇದರ ಹೆಜ್ಜೆ ಗುರುತು ಹಾಗೂ ತಮ್ಮ ನಾಯಿಗಳು ನಾಪತ್ತೆಯಾಗುತ್ತಿದ್ದುದರಿಂದ ಜನ ಚಿರತೆಯ ಭಯದಲ್ಲಿಯೇ ದಿನ ಕಳೆಯುತ್ತಿದ್ದರು.

Leopard found dead in Nanjadevanapur Karaikal Quarry

ನಂಜದೇವನಪುರ ಕರಿಕಲ್ ಕ್ವಾರಿಯ ಬಳಿ ಕೆಲ ದಿನಗಳಿಂದ ದುರ್ವಾಸನೆ ಬರಲಾರಂಭಿಸಿತ್ತು. ಹೀಗಾಗಿ ಯಾವ ಪ್ರಾಣಿ ಸತ್ತಿರಬಹುದೆಂದು ಪರಿಶೀಲಿಸಿದ ಜನಕ್ಕೆ ಚಿರತೆಯ ಕೊಳೆತ ಮೃತದೇಹ ಪತ್ತೆಯಾಗಿದ್ದು, ಆದರೆ ಚಿರತೆಯ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಒಂದು ವೇಳೆ ಆಯತಪ್ಪಿ ಬಿದ್ದು ಸತ್ತಿದೆಯಾ? ಅಥವಾ ಕಾದಾಟದಲ್ಲಿ ಸತ್ತಿದೆಯಾ ಎನ್ನುವುದು ಇನ್ನಷ್ಟೆ ತಿಳಿಯಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+