ಮತ ಪೆಟ್ಟಿಗೆಯಲ್ಲಿ ಬೋರ್‌ವೆಲ್, ಸರ್ಕಾರಿ ಕೆಲಸಕ್ಕಾಗಿ ಪತ್ರ!

ಚಾಮರಾಜನಗರ, ಜೂನ್ 16: ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆದಿದೆ. ಮತ ಎಣಿಕೆ ಗುರುವಾರ ಪೂರ್ಣಗೊಂಡಿದೆ. ಮತಪೆಟ್ಟಿಗೆಯಲ್ಲಿ ಸಿಕ್ಕ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಮತ ಎಣಿಕೆ ಪ್ರಕ್ರಿಯೆ ಬುಧವಾರ ಆರಂಭವಾಗಿತ್ತು. ಗುರುವಾರ ಎಣಿಕೆ ಕಾರ್ಯ ಪೂರ್ಣಗೊಂಡು ಫಲಿತಾಂಶ ಘೋಷಣೆ ಮಾಡಲಾಗಿದೆ. ಕೊಳವೆ ಬಾವಿ ತೊಡಿಸಿಕೊಡಿ ಎಂದು ಯುವಕನೊಬ್ಬ ಮನವಿ ಪತ್ರವನ್ನು ಮತಪಟ್ಟಿಗೆಗೆ ಹಾಕಿದ್ದಾನೆ.ಇನ್ನೊಬ್ಬ ಮತದಾರ ಯಾರು ದುಡ್ಡು ಕೊಟ್ಟಿಲ್ಲ ಅಂತಾ ಚುನಾವಣಾ ಅಭ್ಯರ್ಥಿಗಳ ವಿರುದ್ಧ ಕಿಡಿಕಾರಿರುವ ಪತ್ರವೂ ಸಿಕ್ಕಿದೆ.

ಮತದಾರ ಚಾಮರಾಜನಗರ ಜಿಲ್ಲೆಯ ಯಳಂದೂರಿನ ತಾಲೂಕಿನ ಗಣಿಗನೂರು ಗ್ರಾಮದ ನಿವಾಸಿ. ಹಲವಾರು ಮತದಾರರುಮತ ಪೆಟ್ಟಿಯೊಳಗೆ ವಿಭಿನ್ನ ಕೋರಿಕೆಯ ಪತ್ರಗಳನ್ನು ಹಾಕಿದ್ದಾರೆ. ಪೆಟ್ರೋಲ್ ಬೆಲೆ ಇಳಿಸಲು ಮನವಿ, ರಸಗೊಬ್ಬರ ಬೆಲೆ ಕಡಿಮೆ ಮಾಡುವಂತೆಯೂ ಮನವಿ ಮಾಡಿದ ಪತ್ರಗಳು ಮತ ಪೆಟ್ಟಿಗೆಯಲ್ಲಿ ಸಿಕ್ಕಿವೆ.

Legislative Council Elections Voter Demand For Borewell Letter Found In Ballet Box

ಸರ್ಕಾರಿ ಕೆಲಸಕ್ಕೆ ಮನವಿ; ಎಂಎ, ಬಿಎಸ್ಎ ವ್ಯಾಸಂಗ ಮಾಡಿದ್ದೇನೆ. ಆದರೆ ನನಗೆ ಕೆಲಸ ಸಿಕ್ಕಿಲ್ಲ, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಜಮೀನಿಗೆ ಕೊಳವೆ ಬಾವಿಯ ಅವಶ್ಯಕತೆ ಇದೆ. ನನಗೆ ಸರ್ಕಾರಿ ಕೆಲಸ ಕೊಡಿ. ಇಲ್ಲ ಅಂದರೆ ಜಮೀನಿನಲ್ಲಿ ಕೊಳವೆಬಾವಿ ತೊಡಿಸಿಕೊಡಿ ಎಂದು ಮತದಾರನೊಬ್ಬ ಮನವಿ ಮಾಡಿದ್ದಾನೆ.

ಬ್ಯಾಲೆಟ್ ಪತ್ರದ ಮೇಲೆಯೇ ಅಭ್ಯರ್ಥಿಗಳ ವಿರುದ್ಧ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಯಾವ ಅಭ್ಯರ್ಥಿಗಳು ಕೂಡ ಹಣ ಕೊಟ್ಟಿಲ್ಲ ಎಂದು ಬ್ಯಾಲೇಟ್ ಪೇಪರ್ ಮೇಲೆ ಮತದಾರ ಬರೆದು, ಮತಪೆಟ್ಟಿಗೆಗೆ ಹಾಕಿದ್ದಾನೆ.

ವಿಚಿತ್ರ ಪತ್ರಗಳು; ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆಯ ವೇಳೆ ಚುನಾವಣೆ ಬಹಿಷ್ಕಾರ ಮಾಡುತ್ತೇನೆಂದು ಮತದಾರ ಬರೆದಿರುವ ಪತ್ರವೂ ಸಿಕ್ಕಿದೆ.

Legislative Council Elections Voter Demand For Borewell Letter Found In Ballet Box

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಜಂಗಮರಹಳ್ಳಿ ಮತಪೆಟ್ಟಿಗೆಯಲ್ಲಿ ಪತ್ರ ದೊರೆತಿದ್ದು, ಪತ್ರದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಪಂಚಾಯಿತಿ ಅಭಿವೃದ್ಧಿಯಾಗುವ ತನಕ ಮತ ಹಾಕುವುದಿಲ್ಲ ಎಂದು ಅನಾಮಧೇಯ ಮತದಾರ ಬರೆದಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+