ಗುಂಡ್ಲುಪೇಟೆ: 70 ಜನರ ಪ್ರಾಣ ಉಳಿಸಿದ ಬಸ್ ಚಾಲಕನಿಗೆ ಬಂಗಾರದ ಪದಕ

Recommended Video

      ಬಸ್ ಡ್ರೈವರ್ ಚಿನ್ನಸ್ವಾಮಿಗೆ 70 ಪ್ರಯಾಣಿಕರನ್ನ ಕಾಪಾಡಿದ್ದಕ್ಕೆ ಸಿಕ್ಕಿದ್ದು ಚಿನ್ನದ ಪದಕ | Oneindia Kannada

      ಚಾಮರಾಜನಗರ, ಡಿಸೆಂಬರ್ 14 : ಸಮಯ ಪ್ರಜ್ಞೆಯಿಂದ 70 ಮಂದಿ ಪ್ರಯಾಣಿಕರ ಪ್ರಾಣ ಉಳಿಸಿದ್ದ ಕೆಎಸ್ ಆರ್ ಟಿಸಿ ಬಸ್ ಚಾಲಕ ಚಿನ್ನಸ್ವಾಮಿ ಅವರಿಗೆ ಚಿನ್ನದ ಪದಕ ಸಿಕ್ಕಿದೆ.

      ಚಾಮರಾಜನಗರ ಜಿಲ್ಲೆಯ ಗುಂಡ್ಲಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಹಾದಿಯಲ್ಲಿ ಅಕ್ಟೋಬರ್ 8 ರಂದು ಬ್ರೇಕ್ ಫೇಲ್ ಆಗಿ ಪ್ರಪಾತಕ್ಕೆ ಬೀಳಬೇಕಾಗಿದ್ದ ಬಸ್ ನ್ನು ಕಂಟ್ರೋಲ್ ಮಾಡಿ ಅದರಲ್ಲಿದ್ದ 70 ಮಂದಿ ಪ್ರಯಾಣಿಕರ ಪ್ರಾಣ ಉಳಿಸಿದ್ದಕ್ಕಾಗಿ ಚಾಲಕ ಚಿನ್ನಸ್ವಾಮಿ ಅವರಿಗೆ ಕೆಎಸ್ ಆರ್ ಟಿಸಿ ಇಲಾಖೆ ಚಿನ್ನದ ಪದಕ ನೀಡಿ ಗೌರವಿಸಿದೆ.

      KSRTC bus driver Chinnaswamy got a gold medal for saved 70 passengers life

      ಅಕ್ಟೋಬರ್ 8 ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಹಾದಿಯಲ್ಲಿ ಬ್ರೇಕ್ ಪೇಲ್ ಇನ್ನೇನು ಬಸ್ ಕಮರಿಗೆ ಬಿತ್ತು ಎನ್ನುವಷ್ಟರಲ್ಲಿಯೇ ಚಾಲಕ ಚಿನ್ನಸ್ವಾಮಿ ಅವರ ಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿತ್ತು. ಇದರಲ್ಲಿ ಸುಮಾರು 70 ಜನರು ಪ್ರಯಾಣಿಸುತ್ತಿದ್ದರು.

      ಇಲಾಖೆಯ ನಿಯಮದ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿ 15 ವರ್ಷ ಹಾಗೂ ನಗರ ಪ್ರದೇಶದಲ್ಲಿ 5 ವರ್ಷ ಯಾವುದೇ ಅಪಾಯ ಸಂಭವಿಸಿದೆ ಬಸ್ ಚಲಾಯಿಸಿದ್ದವರಿಗೆ ಮಾತ್ರ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

      ಆದರೆ, ಚಿನ್ನಸ್ವಾಮಿ ಅವರು ಕೇವಲ 5 ವರ್ಷ ಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ಆದರೆ 70 ಜನರ ಪ್ರಾಣ ಉಳಿಸಿದ್ದರಿಂದ ಅವರ ಸಾಧನೆಯನ್ನು ಗುರುತಿಸಿ ಚಿನ್ನದ ಪದಕ ನೀಡಿ ಗೌರವಿಸಿದೆ. ನಿಜಕ್ಕೂ ಈತನ ಸಾಧನೆಗೆ ಏನೂ ಕೊಟ್ಟರೂ ಕಡಿಮೆನೇ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+