ಕೊಳ್ಳೇಗಾಲ: ದೇವಸ್ಥಾನದಲ್ಲಿ ತಟ್ಟೆ ಕಾಸಿಗಾಗಿ ಹೊಡೆದಾಡಿಕೊಂಡ ಅರ್ಚಕರು; CCTVಯಲ್ಲಿ ದೃಶ್ಯ ಸೆರೆ

ಚಾಮರಾಜನಗರ, ಜನವರಿ, 17: ತಟ್ಟೆ ಕಾಸಿಗಾಗಿ ಪೂಜಾರಿಗಳು ಹೊಡೆದಾಡಿಕೊಂಡಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನ ಶ್ರೀ ಸಿದ್ದಪ್ಪಾಜಿ ದೇವಾಲಯದಲ್ಲಿ ನಡೆದಿದೆ.‌

ಯಂತ್ರ ಹಾಗೂ ಭಕ್ತರಿಂದ ತಟ್ಟೆಗೆ ಬೀಳುವ ಹಣದ ವಿಚಾರಕ್ಕೆ ಅರ್ಚಕ‌ ಕುಟುಂಬಕ್ಕೆ ಸೇರಿದ ಅಣ್ಣ- ತಮ್ಮಂದಿರು ಪರಸ್ಪರ ಹೊಡೆದಾಡಿಕೊಂಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿ ದೃಶ್ಯ ವೈರಲ್‌ ಆಗಿದೆ. ಘಟನೆ ಎರಡು ಮೂರು ದಿನದ ಹಿಂದೆ ನಡೆದಿದ್ದು, ವೀಡಿಯೋ ವೈರಲ್ಲಾದ ಬಳಿಕ ಹೊಡೆದಾಟ ಬೆಳಕಿಗೆ ಬಂದಿದೆ.

ಭಾನುವಾರ ಸಂಜೆ ಸುಮಾರು 6 ಗಂಟೆ ಸಮಯದಲ್ಲಿ ಶ್ರೀ ಸಿದ್ದಪ್ಪಾಜಿ ದೇವಾಲಯದ ಅರ್ಚಕ ಕುಟುಂಬದವರಿಗೆ ಹಣದ ವಿಚಾರವಾಗಿ ಗಲಾಟೆ ನಡೆದಿದೆ. ರಾಜ್ಯದಲ್ಲಿಯೇ ಶ್ರೀ ಕ್ಷೇತ್ರ ಸಿದ್ದಪ್ಪಾಜಿ ಜಾತ್ರೆ ಹೆಸರುವಾಸಿಯಾಗಿದ್ದು, ಜನವರಿ 6 ರಿಂದ 10 ರವರೆಗೆ ಅದ್ಧೂರಿಯಾಗಿ ಜಾತ್ರೆ ನಡೆದಿತ್ತು. ಜಾತ್ರೆ ಮುಗಿದರೂ ಭಕ್ತರು ರಾಜ್ಯದ ನಾನಾ ಭಾಗಗಳಿಂದ ಚಿಕ್ಕಲ್ಲೂರಿಗೆ ಇನ್ನೂ ಭೇಟಿ ನೀಡುತ್ತಲೇ ಇದ್ದಾರೆ. ಜಾತ್ರೆಗೆ ಬಾರದ ಜನರು ಇದೀಗ ಹರಕೆ ತೀರಿಸುತ್ತಿದ್ದಾರೆ. ಈ ವೇಳೆ ಭಕ್ತರು ಹಾಕಿದ ತಟ್ಟೆ ಕಾಸಿಗೆ ಪೂಜಾರಿಗಳು ಹೊಡೆದಾಡಿಕೊಂಡಿದ್ದಾರೆ.

ದೇವಸ್ಥಾನದಲ್ಲಿಯೇ ಅರ್ಚಕರ ಸಮರ

ದೇವಸ್ಥಾನದಲ್ಲಿಯೇ ಅರ್ಚಕರ ಸಮರ

ಬೊಪ್ಪೇಗೌಡನ ಪೀಠಾಧಿಪತಿ ಪುರದ ಶ್ರೀ ಜ್ಞಾನರಾಜೇ ಅರಸ್ ಹಾಗೂ ದಿ.ಪ್ರಭುದೇವ ರಾಜೇ ಅರಸ್ ಪುತ್ರ ಭರತರಾಜೇ ಅರಸ್ ನಡುವೆ ದೇವಾಲಯ ಆಡಳಿತ ನಿರ್ವಹಣೆ ಹಾಗೂ ಗೋಲಕ ವಿಚಾರವಾಗಿ ವೈಮನಸ್ಸು ಉಂಟಾಗಿದ್ದು ಎಲ್ಲರಿಗೂ ತಿಳಿದ ವಿಚಾರವಾಗಿದೆ.

ಕೊಳ್ಳೇಗಾಲ ಗ್ರಾಮಾಂತರ ಠಾಣೆಗೆ ದೂರು

ಕೊಳ್ಳೇಗಾಲ ಗ್ರಾಮಾಂತರ ಠಾಣೆಗೆ ದೂರು

ಇತ್ತೀಚೆಗೆ ಹಳೇ ಮಠದಲ್ಲಿ ಮರದ ಸಾಮಾಗ್ರಿಗಳಿಗೆ ಬೆಂಕಿ ಬಿದ್ದ ವಿಚಾರವಾಗಿ ಶ್ರೀ ಜ್ಞಾನರಾಜೇ ಅರಸ್ ಪತ್ನಿ ಸನ್ಮತಿ ಎಂಬುವವರು ಈ ಘಟನೆಗೆ ಭರತರಾಜೇ ಅರಸ್ ಹಾಗೂ ಸಂಗಡಿಗರು ಕಾರಣ ಎಂದು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಾಗೆಯೇ ಭರತ ರಾಜೇ ಅರಸ್ ಕೂಡ ಜ್ಞಾನ ರಾಜೇ ಅರಸ್ ಮೇಲೆ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಜಿಲ್ಲಾಡಳಿತದಿಂದ ಅರ್ಚಕರಿಗೆ ವಾರ್ನ್‌

ಜಿಲ್ಲಾಡಳಿತದಿಂದ ಅರ್ಚಕರಿಗೆ ವಾರ್ನ್‌

ಇದ್ದರಿಂದ ಈ ಎರಡು ಗುಂಪುಗಳ ನಡುವೆ ವೈಮನಸ್ಸು ಏರ್ಪಟಿತ್ತು. ಅಷ್ಟರಲ್ಲಿ ಜಾತ್ರೆ ಕೂಡ ಬಂದಿದ್ದು, ಜಾತ್ರೆ ನಡೆಸುವ ಸಂಬಂಧ ಜಿಲ್ಲಾಡಳಿತ, ಶಾಸಕ ಆರ್.ನರೇಂದ್ರ, ಶ್ರೀ ಜ್ಞಾನರಾಜೇ ಅರಸ್‌, ಭರತರಾಜೇ ಅರಸ್ ಕುಟುಂಬದ ಜೊತೆ ಸಭೆ ನಡೆಸಿತ್ತು. ನಿಮ್ಮ ಕುಟುಂಬದ ಕಲಹದಿಂದ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಜಾತ್ರೆ ನಡೆಸುವಂತೆಯೂ ಎಚ್ಚರಿಕೆಯನ್ನು ಜಿಲ್ಲಾಡಳಿತ ನೀಡಿತ್ತು. ಈ ಎಲ್ಲ ಗೊಂದಲಗಳ ನಡುವೆ ಜಾತ್ರೆ ಯಶಸ್ವಿಯಾಗಿ ನಡೆಯಿತು ಎನ್ನುವಷ್ಟರಲ್ಲಿಯೇ ಅರ್ಚಕರ ಗಲಾಟೆ ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ.

ಜಗಳ ಬಿಡಿಸಿದ್ದ ದೇವಸ್ಥಾನದ ಸಿಬ್ಬಂದಿ

ಜಗಳ ಬಿಡಿಸಿದ್ದ ದೇವಸ್ಥಾನದ ಸಿಬ್ಬಂದಿ

ಅರ್ಚಕ ಕುಮಾರ್ ಹಾಗೂ ಮತ್ತೊಬ್ಬ ಅರ್ಚಕ ಶಿವಮೂರ್ತಿ ಅವರ ತಂದೆ ಶಂಕರಪ್ಪ ಹಾಗೂ ಇತನ ಮಗ ಮಹೇಶ್ ಅಲಿಯಾಸ್ ಬಾಲಾಜಿ ನಡುವೆ ಗಲಾಟೆ ನಡೆದಿದೆ. ಭಕ್ತರಿಗೆ ನೀಡುವ ಯಂತ್ರ ಹಣ ಹಾಗೂ ತಟ್ಟೆ ಕಾಸಿನ ಹಂಚಿಕೆ ವಿಚಾರದಲ್ಲಿ ವೈಮನಸ್ಸು ಉಂಟಾಗಿ ಈ ಹೊಡೆದಾಟ ನಡೆದಿದ್ದು, ಬಳಿಕ ಅಲ್ಲಿದ್ದ ಸಿಬ್ಬಂದಿ ಜಗಳ ಬಿಡಿಸಿದ್ದಾರೆ.

ಅರ್ಚಕರ ನಡುವೆ ಗಲಾಟೆ ನಡೆದಿರುವ ಬಗ್ಗೆ ಮಾಹಿತಿ ತಿಳಿದಿದೆ. ಆದರೆ ಯಾವ ಕಾರಣಕ್ಕೆಂದು ಗೊತ್ತಿಲ್ಲ. ಗಲಾಟೆ ಬಗ್ಗೆ ಸಂಪೂರ್ಣ ಮಾಹಿತಿ ನನಗೆ ತಿಳಿದಿಲ್ಲ. ದೇವಾಲಯದಲ್ಲಿ ಗಲಾಟೆ ಮಾಡುವುದು ತಪ್ಪು. ವಿಚಾರಣೆ ನಡೆಸಿ ಕ್ರಮ ಕೈಗೊಳಲಾಗುವುದು ಎಂದು ಕ್ಷೇತ್ರದ ಆಡಳಿದ ಮಂಡಳಿಯ ಸನ್ಮತಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+